ದಿನೇಶ್ ಅಮೀನ್ ಮಟ್ಟು
ರಾಜ್ಯ
ನೀತಿ ಸಂಹಿತೆ ಉಲ್ಲಂಘನೆ: ದಿನೇಶ್ ಅಮೀನ್ ಮಟ್ಟು ಸೇರಿ ಐವರ ವಿರುದ್ಧ ಎಫ್ಐಆರ್
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ, ಧರ್ಮ ನಿಂದನೆ ಆರೋಪದಡಿ ಹಿರಿಯ ಪತ್ರಕರ್ತ, ಚಿಂತಕ ದಿನೇಶ್ ಅಮೀನ್ ಮಟ್ಟು ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಉಡುಪಿ: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ, ಧರ್ಮ ನಿಂದನೆ ಆರೋಪದಡಿ ಹಿರಿಯ ಪತ್ರಕರ್ತ, ಚಿಂತಕ ದಿನೇಶ್ ಅಮೀನ್ ಮಟ್ಟು ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಟ್ಟು ಅವರೊಡನೆ ಸಹಬಾಳ್ವೆ ಉಡುಪಿ ಅಧ್ಯಕ್ಷ ಅಮೃತ್ ಶೆಣೈ ದಲಿತ ನಾಯಕ ಇಂದೂಧರ ಹೊನ್ನಾಪುರ, ಜಿ.ಎನ್. ನಾಗರಾಜ್, ಮಹೇಂದ್ರ ಕುಮಾರ್ ಅವರುಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಮಾರ್ಚ್ 17ರಂದು ಉಡುಪಿಯ ಕಲ್ಸಂಕದ ರಾಯಲ್ ಗಾರ್ಡನ್ ನಲ್ಲಿ ಈ ಐವರು ಮಾಡಿದ ಭಾಷಣ ಚುನಾವಣಾ ಮಾದರಿ ನೀತಿ ಸಂಹಿತೆಗೆ ವಿರುದ್ಧವಾಗಿದ್ದು ಮಾತ್ರವಲ್ಲದೆ ಧರ್ಮ ನಿಂದನೆ ಸಹ ನಡೆದಿದೆ ಎಂಬ ಮಾಹಿತಿ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಚುನಾವಣಾ ವೀಕ್ಷಣಾಧಿಕಾರಿಗಳ ದೂರಿನ ಹಿನ್ನೆಲೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೋಲೀಸರು ತನಿಖೆ ನಡೆಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ