ಬೆಂಗಳೂರು ಪೋಲೀಸ್ ಭರ್ಜರಿ ಕಾರ್ಯಾಚರಣೆ: 22 ಆರೋಪಿಗಳ ಬಂಧನ, 61 ಲಕ್ಷ ರು. ಸ್ವತ್ತು ವಶ

ಸ್ಕೂಟರ್, ಕಾರು ಸೇರಿ ವಾಹನಗಳು, ಇತರೆ ವಸ್ತುಗಳನ್ನು ಕಳವು ಮಾಡುತ್ತಿದ್ದ ಕುಖ್ಯಾತ ಗ್ಯಾಂಗ್ ಅನ್ನು ಬೆಂಗಳೂರು ದಕ್ಷೀಣ ವಿಭಾಗದ ಪೋಲೀಸರು ಬಂಧಿಸಿದ್ದಾರೆ.
ಬೆಂಗಳೂರು ದಕ್ಷಿಣ ವಿಭಾಗ ಪೋಲೀಸ್ ಭರ್ಜರಿ  ಕಾರ್ಯಾಚರಣೆ: 22 ಆರೋಪಿಗಳ ಬಂಧನ, 61 ಲಕ್ಷ ರು. ಸ್ವತ್ತು ವಶ
ಬೆಂಗಳೂರು ದಕ್ಷಿಣ ವಿಭಾಗ ಪೋಲೀಸ್ ಭರ್ಜರಿ ಕಾರ್ಯಾಚರಣೆ: 22 ಆರೋಪಿಗಳ ಬಂಧನ, 61 ಲಕ್ಷ ರು. ಸ್ವತ್ತು ವಶ
ಬೆಂಗಳೂರು: ಸ್ಕೂಟರ್, ಕಾರು ಸೇರಿ ವಾಹನಗಳು, ಇತರೆ ವಸ್ತುಗಳನ್ನು ಕಳವು ಮಾಡುತ್ತಿದ್ದ ಕುಖ್ಯಾತ ಗ್ಯಾಂಗ್ ಅನ್ನು ಬೆಂಗಳೂರು ದಕ್ಷೀಣ ವಿಭಾಗದ ಪೋಲೀಸರು ಬಂಧಿಸಿದ್ದಾರೆ.
ದಕ್ಷಿಣ ವಿಭಾಗದ ಸುಬ್ರಹ್ಮಣ್ಯಪುರ ಉಪವಿಭಾಗ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ  22 ಮಂದಿಯನ್ನು ಬಂಧಿಸಿ 61 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ, ವಾಹನಗಳು, ಗಾಂಜಾ,  ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ದಕ್ಷಿಣ ವಿಭಾಗ ಡಿಸಿಪಿ ಅಣ್ಣಾಮಲೈ ಈ ಕುರಿತು ಮಾದ್ಯಮಗಳೊಡನೆ ಮಾಹಿತಿ ಹಂಚಿಕೊಂಡಿದ್ದು ಚೇತನ್, ಪ್ರವೀಣ್, ಸೈಯದ್, ಸಲೀಮ್, ನವಾಜ್, ನಯಾಜ್ ಸೇರಿ 8 ಮಂದಿ ಇದ್ದ ವಾಹನ ಕಳ್ಳರ ಗ್ಯಾಂಗ್ ಅನ್ನು ಬಂಧಿಸಿದ್ದೇವೆ, ಈ ಗ್ಯಾಂಗ್ ಸದಸ್ಯರು ವಾಹನ ಕಳ್ಳತನದಲ್ಲಿ ನುರಿತವರಿದ್ದು ಕ್ಷಣ ಮಾತ್ರದಲ್ಲಿ ದ್ವಿಚಕ್ರ ವಾಹನಗಳನ್ನು ಕದ್ದು ಅದನ್ನು ಟೊಮೆಟೋ ಲಾರಿಗಳಲ್ಲಿ ಸಾಗಿಸೌತ್ತಿದ್ದರು ಎಂದು ವಿವರಿಸಿದರು. ಆರೋಪಿಗಳಿಂದ 20.50 ಲಕ್ಷ ರೂ.ಬೆಲೆ ಬಾಳುವ ಸ್ಕಾರ್ಪಿಯೋ ಕಾರು, ಆಟೋ, 25 ದ್ವಿಚಕ್ರ ವಾಹನ, 1.52 ಲಕ್ಷ ನಗದು ಹಾಗೂ ಒಂದು ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಈ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದೇ ವೇಳೆ ಪುಟ್ಟೇನಹಳ್ಳಿ ಠಾಣೆ ಪೊಲೀಸರು, ತಲಘಟ್ಟಪುರ ಠಾಣೆ ಪೊಲೀಸರು, ಕೋಣನಕುಂಟೆ ಠಾಣೆ ಪೊಲೀಸರು,  ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಒಟ್ಟಾರೆ  64 ಪ್ರಕರಣಗಳನ್ನು ಬೇಧಿಸಿದ್ದಾರೆ. ಲಕ್ಷಾಂತರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com