ಗಣೇಶ್ ನಡೆಸಿದ್ದ ಹಲ್ಲೆಯಿಂದಾಗಿ ಆನಂದ್ ಸಿಂಗ್ ಅವರ ಕಣ್ಣು, ತಲೆಗೆ ಗಂಭೀರ ಗಾಯವಾಗಿತ್ತು.ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿತ್ತು. ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬಿಡದಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಶಾಸಕ ಗಣೇಶ್ ನಾಪತ್ತೆಯಾಗಿದ್ದರು. ಸರಿಯಾಗಿ ಒಂದು ತಿಂಗಳ ನಂತರ ಗುಜರಾತಿನಲ್ಲಿ ಶಾಸಕರ ಬಂಧನವಾಗಿತ್ತು.