ಮೈಸೂರು: 30 ಪೈಸೆ ವಿವಾದ, 1500 ರೂ. ಪರಿಹಾರ ನೀಡುವಂತೆ ಎಂಸಿಸಿಗೆ ಆದೇಶ

ಗ್ರಾಹಕರಿಗೆ ಹೆಚ್ಚುವರಿಯಾಗಿ 70 ಪೈಸೆ ನೀರಿನ ಶುಲ್ಕ ವಿಧಿಸಿದ್ದರಿಂದ 1500 ರೂ. ಪರಿಹಾರ ನೀಡುವಂತೆ ಮೈಸೂರು ಮಹಾನಗರ ಪಾಲಿಕೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ.
ಮೈಸೂರು ಮಹಾನಗರ ಪಾಲಿಕೆ
ಮೈಸೂರು ಮಹಾನಗರ ಪಾಲಿಕೆ

ಮೈಸೂರು: ಗ್ರಾಹಕರಿಗೆ ಹೆಚ್ಚುವರಿಯಾಗಿ 70 ಪೈಸೆ ನೀರಿನ ಶುಲ್ಕ ವಿಧಿಸಿದ್ದರಿಂದ 1500 ರೂ. ಪರಿಹಾರ ನೀಡುವಂತೆ ಮೈಸೂರು ಮಹಾನಗರ ಪಾಲಿಕೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ.

ಈ ಸಂಬಂಧ  ರಾಮಕೃಷ್ಣ ನಗರ ಹೆಚ್ ಬ್ಲಾಕ್  ನಿವಾಸಿ ಸತೀಶ್, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ  ಜೂನ್ 2018ರಲ್ಲಿ ದೂರು ದಾಖಲಿಸಿದ್ದರು.  ವಾಣಿ ವಿಲಾಸ ವಾಟರ್ ವರ್ಕ್ಸ್ ನಿಂದ  ಅವರು 340. 30 ರೂಪಾಯಿ ನೀರಿನ ಬಿಲ್ ಪಡೆದುಕೊಂಡಿದ್ದರು.  ಆದಾಗ್ಯೂ, ಸತೀಶ್ ಕೇವಲ 340 ರೂಪಾಯಿ ಮಾತ್ರ ಪಾವತಿಸಿದ್ದರು.

ಜುಲೈ ತಿಂಗಳಲ್ಲಿ  ಸತೀಶ್  341 ರೂ ಬಿಲ್ ಪಡೆದುಕೊಂಡಿದ್ದು, ಕಳೆದ ಬಾರಿ 30 ಪೈಸೆ ಬಾಕಿ ಉಳಿಸಿಕೊಂಡಿರುವ  ಹಿನ್ನೆಲೆಯಲ್ಲಿ 70 ಪೈಸೆ ದಂಡ  ವಿಧಿಸಲಾಗಿತ್ತು. ಇದರ ವಿರುದ್ಧ ಸತೀಶ್  ವಾಣಿ ವಿಲಾಸ್ ವಾಟರ್ ವರ್ಕ್ಸ್ ಹಾಗೂ ಅದರ ಮಾತೃ ಸಂಸ್ಥೆ ಮೈಸೂರು ಮಹಾನಗರ ಪಾಲಿಕೆ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದೂರು ದಾಖಲಿಸಿದ್ದರು.
30 ಪೈಸೆಯನ್ನು ಹೆಚ್ಚುವರಿಯಾಗಿ ವಿಧಿಸಲಾಗಿದ್ದು,  ದಂಡವನ್ನು ಪಾವತಿಸುವುದಿಲ್ಲ ಎಂದು ದೂರುದಾರರು ಅರ್ಜಿಯಲ್ಲಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com