ಹುಬ್ಬಳ್ಳಿ: ನೈರುತ್ಯ ರೈಲ್ವೆ(ಎಸ್‌ಡಬ್ಲ್ಯುಆರ್) ಗುರುವಾರ ಯಶವಂತಪುರ-ಜೈಪುರ-ಯಶವಂತಪುರ ಮಾರ್ಗದಲ್ಲಿ ವಾರಕ್ಕೊಮ್ಮೆ ಸಂಚರಿಸುವ ಸುವಿಧ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಘೋಷಿಸಿದೆ. ಏ.4ರಂದು ಯಶವಂತಪುರಿಂದ ಹಾಗೂ ಏ.6ರಂದು ಜೈಪುರದಿಂದ ಈ ಸೇವೆ ಆರಂಭವಾಗಲಿದೆ.
ರೈಲು ಸಂಖ್ಯೆ 82653 ಪ್ರತಿ ಗುರುವಾರ ಬೆಳಿಗ್ಗೆ 11.30ಕ್ಕೆ ಯಶವಂತಪುರದಿಂದ ಹೊರಡಲಿದ್ದು, ಅದೇ ಶನಿವಾರ 0635ಕ್ಕೆ ಜೈಪುರ ತಲುಪಲಿದೆ. ಏ.4ರಿಂದ ಜೂನ್.27ರವರೆಗೆ ಈ ವಿಶೇಷ ಸೇವೆ ಲಭ್ಯವಾಗಲಿದೆ.
ಆ ಕಡೆಯಿಂದ ರೈಲು ಸಂಖ್ಯೆ 82654 ಪ್ರತಿ ಶನಿವಾರ 22.15ಕ್ಕೆ ಜೈಪುರದಿಂದ ಹೊರಡಲಿದ್ದು, ಸೋಮವಾರ 18.25ಕ್ಕೆ ಯಶವಂತಪುರಕ್ಕೆ ಬಂದು ಸೇರಲಿದೆ. ಏ.6ರಿಂದ ಜೂ.29ರವರೆಗೆ ಈ ಸಂಚಾರ ಲಭ್ಯವಿದೆ.
ಎಸ್‌ಡಬ್ಲ್ಯುಆರ್, ಯಶವಂತಪುರ-ಶ್ರೀ ಮಾತಾ ವೈಷ್ಣೊದೇವಿ ಕತ್ರ-ಯಶವಂತಪುರ ಮಾರ್ಗದಲ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ವಿಶೇಷ ದರದೊಂದಿಗೆ ಘೋಷಿಸಿದೆ.
06521 ಸಂಖ್ಯೆಯ ರೈಲು ಪ್ರತಿ ಗುರುವಾರ 06.30ಕ್ಕೆ ಯಶವಂತಪುರದಿಂದ ಹೊರಡಲಿದ್ದು, ಶನಿವಾರ 0400ಗಂಟೆಗೆ ವೈಷ್ಣೋದೇವಿ ತಲುಪಲಿದೆ. ಏ.4ರಿಂದ ಜೂ.20ರವರೆಗೆ ಈ ಸಂಚಾರ ಲಭ್ಯವಿದೆ.
06522 ಸಂಖ್ಯೆಯ ರೈಲು ಪ್ರತಿ ಸೋಮವಾರ 05.40ಕ್ಕೆ ವೈಷ್ಣೋದೇವಿಯಿಂದ ಹೊರಟು ಅದೇ ಬುಧವಾರ 15.00 ಗಂಟೆಗೆ ಯಶವಂತಪುರ ತಲುಪಲಿದೆ. ಈ ಸೇವೆ ಏ.8ರಿಂದ ಜೂ.24ರವರೆಗೆ ಲಭ್ಯ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.