ಬೆಳಗಾವಿ: ಮೇ 1 ರಿಂದ ಮೊದಲ ಉಡಾನ್ ವಿಮಾನಯಾನ ಆರಂಭ

ಹಲವು ದಿನಗಳ ನಂತರ ಉಡಾಣ್ -3 ಯೋಜನೆಯಡಿ ಹೈದ್ರಾಬಾದ್ - ಬೆಳಗಾವಿ ನಡುವಣ ಮೊದಲ ವಿಮಾನಯಾನ ಮೇ 1 ರಿಂದ ಆರಂಭವಾಗಲಿದೆ.
ಸ್ಪೈಸ್ ಜೆಟ್
ಸ್ಪೈಸ್ ಜೆಟ್

ಬೆಳಗಾವಿ: ಹಲವು ದಿನಗಳ ನಂತರ ಉಡಾಣ್ -3  ಯೋಜನೆಯಡಿ  ಹೈದ್ರಾಬಾದ್ - ಬೆಳಗಾವಿ ನಡುವಣ ಮೊದಲ ವಿಮಾನಯಾನ  ಮೇ 1 ರಿಂದ ಆರಂಭವಾಗಲಿದೆ.

ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿಯ ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಹೈದ್ರಾಬಾದ್ ಹಾಗೂ ಬೆಳಗಾವಿ ನಡುವೆ  ಸ್ಪೈಸ್ ಜೆಟ್ ವಿಮಾನ  ಹಾರಾಟ ಆರಂಭಿಸುತ್ತಿದೆ. ಈ ವಿಮಾನ ಉಭಯ ನಗರಗಳ ನಡುವೆ ಪ್ರತಿನಿತ್ಯ  ಕಾರ್ಯಾಚರಣೆ ನಡೆಸಲಿದೆ.

ಮೂಲಗಳ ಪ್ರಕಾರ, ಎಸ್ ಜಿ -3734  ವಿಮಾನ ವಾರದ ಎಲ್ಲಾ ದಿನಗಳಲ್ಲಿ  ಸಂಜೆ 5.55 ಕ್ಕೆ ಸಾಂಬ್ರಾ ವಿಮಾನ ನಿಲ್ದಾಣದಿಂದ ನಿರ್ಗಮಿಸಲಿದ್ದು, 7-10 ಕ್ಕೆ  ಹೈದ್ರಾಬಾದ್ ತಲುಪಲಿದೆ. ಎಸ್ ಜಿ 3733 ವಿಮಾನ ಸಂಜೆ 4.10 ಕ್ಕೆ ಹೈದ್ರಾಬಾದ್  ನಿರ್ಗಮಿಸಲಿದ್ದು, ಸಂಜೆ 5.35ಕ್ಕೆ ಬೆಳಗಾವಿಗೆ ಆಗಮಿಸಲಿದೆ.

ಒಂದು ಕಡೆಯ ಸಂಚರಕ್ಕಾಗಿ ಕನಿಷ್ಠ ವಿಮಾನ ಪ್ರಯಾಣ ದರ 2. 714 ರೂಪಾಯಿಯನ್ನು ಸ್ಪೈಸ್ ಜೆಟ್ ಕಂಪನಿ ನಿಗದಿಪಡಿಸಿದ್ದು,  ಮೊದಲ ಉಡಾಣ್ ವಿಮಾನ ಪ್ರಯಾಣದ ಬುಕ್ಕಿಂಗ್ ಆರಂಭವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com