ವಿಳಂಬದ ಹಿಂದಿನ ಕಾರಣ ಕೇಳಿದಾಗ ಹಲವು ಬಿಡಿಎ ಅಧಿಕಾರಿಗಳು ಚುನವಣಾ ಕರ್ತವ್ಯಕ್ಕೆ ತೆರ್ಳಿದ್ದರು ಎಂದು ವಿವರಿಸಿದರು. ಆಸ್ತಿ ಹೊಂದಿರುವವರು ಪಾವತಿಸಬೇಕಾದ ಪರಿಷ್ಕೃತ ಆಸ್ತಿ ತೆರಿಗೆ ಲೆಕ್ಕಾಚಾರ ಮಾಡಲು ಸಾಕಷ್ಟು ಸಮಯದ ಕೊರತೆ ಇದೆ. ಮಾರ್ಚ್ 2019 ರವರೆಗೆ ನಮ್ಮ ಪರವಾಗಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಿದ ಬ್ಯಾಂಕುಗಳು ಪಾವತಿ ವಿವರಗಳನ್ನು ಸಲ್ಲಿಸಲು ಸಾಧ್ಯವಾಗಲಿಲ್ಲ, ಏಕೆಂದರೆ ಅನೇಕ ಬ್ಯಾಂಕ್ ಅಧಿಕಾರಿಗಳು ಮತದಾನದ, ಚುನಾವಣೆ ಕೆಲಸದ ಮೇಲೆ ತೆರಳಿದ್ದಾರೆ. ನಿನ್ನೆ ಕೂಡ ನಾವು ಕೆಲವು ಬ್ಯಾಂಕ್ ರಸೀದಿಗಳನ್ನು ಸ್ವೀಕರಿಸಿದ್ದೇವೆ . ಹಿಂದಿನ ಹಣಕಾಸಿನ ವರ್ಷಕ್ಕೆ ಸಂಗ್ರಹಿಸಿದ ಮೊತ್ತವನ್ನು ನಿಖರವಾಗಿ ಲೆಕ್ಕ ಹಾಕಲಾಗದಿದ್ದಲ್ಲಿ, ಬಾಕಿಯನ್ನು (ಯಾವುದಾದರೂ ಇದ್ದರೆ) ಕೂಡ ಸೇರಿಸಬೇಕಾಗಿರುವುದರಿಂದ, ನಾವು ಮಾಲೀಕರಿಂದ ಪಾವತಿಸಲು ಹೊಸ ಆಸ್ತಿ ತೆರಿಗೆ ಅನ್ನು ನವೀಕರಿಸಲು ಸಾಧ್ಯವಾಗದೆ ಹೋಗಲಿದೆ." ಅಧಿಕಾರಿಗಳು ವಿವರಿಸಿದ್ದಾರೆ.