ಭಾರತ-ಫ್ರಾನ್ಸ್ ವರುಣಾ ನೌಕಾ ಸಮರಭ್ಯಾಸ: ಐಎನ್ಎಸ್ ವಿಕ್ರಮಾದಿತ್ಯ ಭಾಗವಹಿಸುವುದು ಖಚಿತ!

ಎಂಜಿನ್ ಕೋಣೆಯಲ್ಲಿ ಅಗ್ನಿ ಆಕಸ್ಮಿಕವುಂಟಾಗಿ ಓರ್ವ ನೌಕಾಪಡೆ ಅಧಿಕಾರಿ ಮೃತಪಟ್ಟ ಘಟನೆಯ ನಂತರ...
ಗೋವಾ ಬಂದರು ಪ್ರವೇಶಿಸಿದ ಎಫ್ಎನ್ಎಸ್ ಚಾರ್ಲ್ಸ್
ಗೋವಾ ಬಂದರು ಪ್ರವೇಶಿಸಿದ ಎಫ್ಎನ್ಎಸ್ ಚಾರ್ಲ್ಸ್
Updated on
ಕಾರವಾರ: ಎಂಜಿನ್ ಕೋಣೆಯಲ್ಲಿ ಅಗ್ನಿ ಆಕಸ್ಮಿಕವುಂಟಾಗಿ ಓರ್ವ ನೌಕಾಪಡೆ ಅಧಿಕಾರಿ ಮೃತಪಟ್ಟ ಘಟನೆಯ ನಂತರ ಇದೀಗ ಭಾರತದ ಏಕಮಾತ್ರ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯ ಸಹಜ ಸ್ಥಿತಿಗೆ ಬಂದಿದೆ. ನಿನ್ನೆ ಗೋವಾ ಸಮುದ್ರ ತೀರದಲ್ಲಿ ಆರಂಭಗೊಂಡ ವರುಣಾ 19.1 ಭಾರತ-ಫ್ರಾನ್ಸ್ ನೌಕಾ ಕಸರತ್ತಿನ 17ನೇ ಆವೃತ್ತಿಯಲ್ಲಿ ಭಾಗಿಯಾಗಿದೆ.
ಐಎನ್ಎಸ್ ವಿಕ್ರಮಾದಿತ್ಯ ನೌಕಾ ಕಸರತ್ತಿನಲ್ಲಿ ಇನ್ನೊಂದೆರಡು ದಿನಗಳಲ್ಲಿ ಭಾಗಿಯಾಗಲಿದೆ. ಮುಂಬೈಯ ನುರಿತ ತಂಡ ಕಾರವಾರಕ್ಕೆ ಆಗಮಿಸಿದ್ದು ಅಗ್ನಿ ಅವಘಡದ ನಂತರ ಹಡಗನ್ನು ದುರಸ್ತಿ ಮಾಡುವ ಕಾರ್ಯದಲ್ಲಿ ಹಗಲು-ರಾತ್ರಿ ಶ್ರಮಿಸುತ್ತಿದ್ದು ನಾಳೆಯೊಳಗೆ ವಿಮಾನವಾಹಕ ನೌಕೆ ಸಿದ್ಧವಾಗಲಿದೆ.
10 ದಿನಗಳ ನೌಕಾ ಸಮರಾಭ್ಯಾಸ ಎರಡು ಹಂತಗಳಲ್ಲಿ ನಡೆಯಲಿದೆ. ಗೋವಾದಲ್ಲಿ ಬಂದರು ಹಂತದಲ್ಲಿ ಪ್ರಾಜೆಕ್ಟ್ ಗಳ ಕಲಿಕೆಗೆ ಒಂದು ವಾಟರ್ ಶೆಡ್ ನಿಂದ ಇನ್ನೊಂದು ವಾಟರ್ ಶೆಡ್ ಕಡೆ ಚಲಿಸುವುದು, ವೃತ್ತಿಪರ ಸಂವಹನ, ಕ್ರೀಡಾ ಚಟುವಟಿಕೆ ಒಳಗೊಂಡಿರುತ್ತದೆ. ಎರಡನೇ ಸಮುದ್ರ ಹಂತದಲ್ಲಿ ಕಡಲ ಕಾರ್ಯಾಚಕಣೆಯಲ್ಲಿ ವಿವಿಧ ಹಂತಗಳನ್ನು ಒಳಗೊಂಡಿರುತ್ತದೆ. ಎರಡನೇ ಹಂತ ಮೇ ತಿಂಗಳ ಕೊನೆ ವೇಳೆಗೆ ಜಿಬೌತಿ, ಪೂರ್ವ ಆಫ್ರಿಕಾಗಳಲ್ಲಿ ನಡೆಯಲಿದೆ. ಅಲ್ಲಿ ಫ್ರಾನ್ಸ್ ನೌಕಾಪಡೆ ಕಾರ್ಯತಂತ್ರ ನೆಲೆಯನ್ನು ಹೊಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com