ಚಿಕ್ಕಬಳ್ಳಾಪುರ: ವಿವಾಹ ನಿಶ್ಚಯವಾದ ಬಳಿಕ ಪುತ್ರಿ ಪ್ರಿಯಕರನೊಂದಿಗೆ ಪರಾರಿಯಾದ ಹಿನ್ನೆಲೆಯಲ್ಲಿ ಮನನೊಂದು ತಂದೆ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ..ಗೌರಿಬಿದನೂರಿನ ಬೇವಿನಹಳ್ಳಿ ಗ್ರಾಮದ ಚೌಡಪ್ಪ(44) ಮತ್ತು ಪತ್ನಿ ಚೌಡಮ್ಮ(37) ಹೊಲದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ..ಮೊದಲ ಪುತ್ರಿಯೂ ವಿರೋಧದ ನಡುವೆ ವಿವಾಹವಾಗಿದ್ದು, ಎರಡನೇ ಪುತ್ರಿಯೂ ಹಾಗೇ ಮಾಡಿದ್ದರಿಂದ ತೀವ್ರವಾಗಿ ನೊಂದು ಕಠಿಣ ನಿರ್ಧಾರ ತಳೆದಿದ್ದಾರೆ ಎಂದು ತಿಳಿದು ಬಂದಿದೆ..ಮೂರು ದಿನಗಳ ಹಿಂದೆ ಪುತ್ರಿ ಕಾಣೆಯಾಗಿದ್ದು, ಹುಡುಕಾಟ ನಡೆಸಲಾಗಿತ್ತು. ಆ ಬಳಿಕ ಆಕೆ ಪ್ರಿಯಕರನೊಂದಿಗೆ ಪರಾರಿಯಾಗಿದ್ದಳು ಎಂದು ತಿಳಿದು ಬಂದಿದೆ..Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos