ಬೆಂಗಳೂರಿನಲ್ಲೊಂದು ವಿಚಿತ್ರ ಪ್ರಸಂಗ: ಚಿಕಿತ್ಸೆ ಫಲಿಸದೆ ಬೀದಿನಾಯಿ ಸತ್ತದ್ದಕ್ಕೆ ವೈದ್ಯರ ವಿರುದ್ಧ ದೂರು ದಾಖಲು!

ನಾಯಿಯ ಸಂತಾನ ಹರಣ ಚಿಕಿತ್ಸೆ ವೇಳೆ ವೈದ್ಯರ ನಿರ್ಲಕ್ಷದಿಂದ ಬೀದಿ ನಾಯಿಯೊಂದು ಸತ್ತಿದ್ದಕ್ಕಾಗಿ ಎನ್​​ಜಿಒ ಮತ್ತು ವೈದ್ಯರ ವಿರುದ್ಧ ಎಫ್​​ಐಆರ್​​​​​​​​​​​​ ದಾಖಲಿಸಿರುವ ಘಟನೆ ಬೆಂಗಳುರಿನ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ವಿಚಿತ್ರ ಪ್ರಸಂಗವೊಂದರಲ್ಲಿ ನಾಯಿಯ ಸಂತಾನ ಹರಣ ಚಿಕಿತ್ಸೆ ವೇಳೆ ವೈದ್ಯರ ನಿರ್ಲಕ್ಷದಿಂದ ಬೀದಿ ನಾಯಿಯೊಂದು ಸತ್ತಿದ್ದಕ್ಕಾಗಿ ಎನ್​​ಜಿಒ ಮತ್ತು ವೈದ್ಯರ ವಿರುದ್ಧ ಎಫ್​​ಐಆರ್​​​​​​​​​​​​ ದಾಖಲಿಸಿರುವ ಘಟನೆ ಬೆಂಗಳುರಿನ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ.
ವೈದ್ಯರ ತಪ್ಪಿನಿಂಡಾಗಿ ಬೀದಿನಾಯಿ ಸಾವನ್ನಪ್ಪಿದೆ, ಜೂಲಿ  ಹೆಸರಿನ ಈ ನಾಯಿ ನಮಗೆಲ್ಲಾ ಅಚ್ಚುಮೆಚ್ಚಿನದಾಗಿತ್ತು. ಇದೀಗ ನಾಯಿಯ ಸಾವಿಗೆ ಕಾರಣವಾದ ಎನ್​​ಜಿಒ ಮತ್ತು ವೈದ್ಯರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಸ್ಥಳೀಯರು ಬೈಯಪ್ಪನಹಳ್ಳಿ ಪೋಲೀಸರಿಗೆ ದೂರಿತ್ತಿದ್ದಾರೆ.
ಘಟನೆ ವಿವರ
ಸುಷ್ಮಾ ಎಂಟರ್ ಪ್ರೈಸಸ್ ಹೆಸರಿನ ಎನ್​​ಜಿಒ ಸದಸ್ಯರು ಜೂಲಿಯನ್ನು ಕೆಲದಿನಗಳ ಹಿಂದೆ ಸಂತಾನಹರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆ ಮುಗಿದ ಬಳಿಕ ಅವರು ನಾಯಿಯನ್ನು ಬೀದಿಯಲ್ಲೇ ಬಿಟ್ಟು ಹೋಗಿದ್ದಾರೆ. ಏಳು ತಿಂಗಳ ನಾಯಿ ಜೂಲಿ ಶಸ್ತ್ರಚಿಕಿತ್ಸೆ ಪಡೆದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದೆ.
ಈ ಕುರಿತಂತೆ ಸ್ಥಳೀಯ ನಿವಾಸಿಯಾದ ನವೀನ್ ಕಾಮತ್ ಎನ್​​ಜಿಒ ಸಂಸ್ಥೆಯ ಮುಖ್ಯಸ್ಥ ಅರುಣಾ ರೆಡ್ಡಿ ಹಾಗೂ ಶಸ್ತ್ರಚಿಕಿತ್ಸೆ ನೀಡಿದ ವೈದ್ಯರ ವಿರುದ್ಧ ದೂರುದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com