ಮಾಜಿ ಪೋಲೀಸ್ ಅಧಿಕಾರಿ ಅನುಪಮಾ ಶಣೈಗೆ ಜೀವ ಬೆದರಿಕೆ: ದೂರು ದಾಖಲು

ಮಾಜಿ ಡೆಪ್ಯುಟಿ ಎಸ್ಪಿ ಅನುಪಮಾ ಶಣೈಅವರಿಗೆ ಜೀವಬೆದರಿಕೆ ಇದ್ದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆ ಪಡುಬಿದ್ರಿ ಪೋಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಅನುಪಮಾ ಶಣೈ
ಅನುಪಮಾ ಶಣೈ
Updated on
ಉಡುಪಿ: ಮಾಜಿ ಡೆಪ್ಯುಟಿ ಎಸ್ಪಿ ಅನುಪಮಾ ಶಣೈಅವರಿಗೆ ಜೀವಬೆದರಿಕೆ ಇದ್ದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆ ಪಡುಬಿದ್ರಿ ಪೋಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ದೂರಿನಲ್ಲಿ ಅನುಪಮಾ ಶಣೈ ಅಸೀಫ್ ಹನೀಫ್ ಎಂಬಾತನನ್ನು ಆರೋಪಿಯನ್ನಾಗಿ ಸೂಚಿಸಿದ್ದಾರೆ. ಉಚ್ಚಿಲ ಭಾಸ್ಕರ ನಗರ ನಿವಾಸಿಯಾದ ಅಸೀಫ್ ಹನೀಫ್ ಹಾಗೂ ಇನ್ನಿಬ್ಬರು ಇಂಟರ್ ನೆಟ್ ಬಳಸಿ ನನ್ನ ಮೊಬೈಲ್ ಗೆ ಕರೆ ಮಾಡಿದ್ದು ಇಸ್ಲಾಂ ಹಾಗೂ ಬುರ್ಖಾ ವಿಚಾರದಲ್ಲಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾಗಿ ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.  ಇಷ್ಟಲ್ಲದ್ವೆ ನಮಗೆ ಹಣ ನೀಡಿ ಇಲ್ಲವೇ ನಿಮ್ಮನ್ನು ಕೊಂದುಹಾಕುತ್ತೇವೆ ಎಂದೂ ಬೆದರಿಕೆ ಹಾಕಿದ್ದಾರೆ ಎಂದು ಶಣೈ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನೊಂದೆಡೆ ಅಸಿಫ್ ಹನೀಫ್ ಸಹ ಅನುಪಮಾ ಶೆಣೈ ಒಂದು ನಿರ್ದಿಷ್ಟ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್ ಆಡಿದ್ದಕ್ಕಾಗಿ ದೂರು ದಾಖಲಿಸಿದ್ದಾರೆ. ಪಡುಬಿದ್ರಿ ಪೋಲೀಸರು ಅನುಪಮಾ ಅವರ ವಿರುದ್ಧ ಸಹ ದೂರು ದಾಖಲಿಸಿಕೊಂಡಿದ್ದಾರೆ.
ಶೆಣೈ ಅವರ ದೂರುಗಳ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪಡುಬಿದ್ರಿ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಸತೀಶ್ ಎಂಪಿ ಪತ್ರಿಕೆಗೆ ಹೇಳಿದ್ದಾರೆ."ನಾವು ಈ ವಿಷಯವನ್ನು ತನಿಖೆ ಮಾಡುತ್ತಿದ್ದೇವೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com