ಸಂಗ್ರಹ ಚಿತ್ರ
ರಾಜ್ಯ
ಬೆಳಗಾವಿ: ರಸ್ತೆ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರ ದುರ್ಮರಣ
ರಸ್ತೆ ಕಾಮಗಾರಿ ನಡೆಸುವ ವೇಳೆ ಮಣ್ಣು ಕುಸಿದ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಬೆಳಗಾವಿಯ ಖಾನಾಪುರ ತಾಲೂಕಿನ ದೇಸೂರ ಗ್ರಾಮದ ಸಮೀಪ ನಡೆದಿದೆ.
ಬೆಳಗಾವಿ: ರಸ್ತೆ ಕಾಮಗಾರಿ ನಡೆಸುವ ವೇಳೆ ಮಣ್ಣು ಕುಸಿದ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಬೆಳಗಾವಿಯ ಖಾನಾಪುರ ತಾಲೂಕಿನ ದೇಸೂರ ಗ್ರಾಮದ ಸಮೀಪ ನಡೆದಿದೆ.
ಮೃತರನ್ನು ಜಾರ್ಖಂಡ್ ಮೂಲದ ಅರ್ಜುನ್ ಸಿಂಗ್ (21) ಮತ್ತು ದುರ್ಗೇಶ್ ಕುಮಾರ್ (22) ಎಂದು ಗುರುತಿಸಲಾಗಿದೆ.ಇದೇ ವೇಳೆ ಘಟನೆಯಲ್ಲಿ ಇನ್ನೋರ್ವ ಕಾರ್ಮಿಕ ಸುಖನಾ ಸಹ ಕಾಣೆಯಾಗಿದ್ದು ಆತನ ದೇಹಕ್ಕಾಗಿ ಹುಡುಕಾಟ ಮುಂದುವರಿದಿದೆ.
ಉದ್ಯೋಗ ಅರಸಿ ದೂರದ ಜಾರ್ಖಂಡ್ ನಿಂದ ಕರ್ನಾಟಕಕ್ಕೆ ಬಂಇದ್ದ ಈ ಕಾರ್ಮಿಕರು ಕೆಲವು ತಿಂಗಳುಗಳ ಹಿಂದೆ, ಖಾನಪುರ-ಬೆಳಗಾವಿ ರಸ್ತೆ ಅಗಲೀಕರಣ ಯೋಜನೆಯಲ್ಲಿ ಕೆಲಸಕ್ಕೆ ಸೇರಿದ್ದಾರೆ.ರಸ್ತೆ ಅಗಲೀಕರಣಕ್ಕಾಗಿ ಭೂಮಿಯನ್ನು ಅಗೆಯುವ ಕೆಲಸಕ್ಕೆ ನಿಯೋಜಿತರಾಗಿದ್ದ ಇವರು ಮಣ್ಣನ್ನು ಅಗೆಯುತ್ತಿದ್ದಾಗಲೇ ಪಕ್ಕದಲ್ಲೇ ಹಾಕಿದ್ದ ಮಣ್ಣಿನ ಗುಡ್ಡ ಕುಸಿದು ಬಿದ್ದಿದೆ. ಆಗ ತಕ್ಷಣ ಮೇಲಕ್ಕೆ ಬರಲಾಗದ ಕಾರಣ ಮಣ್ಣಿನಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆಂದು ಮೂಲಗಳು ಹೇಳಿದೆ.
ಸಾರ್ವಜನಿಕರು ಕಾರ್ಮಿಕರ ರಕ್ಷಣೆಗಾಗಿ ಸಾಕಷ್ಟು ಶ್ರಮಪಟ್ಟರೂ ಸಹ ಬೃಹತ್ ಪ್ರಮಾಣದ ಮಣ್ಣಿನ ಗುಡ್ಡವನ್ನು ಬದಿಗೆ ಸರಿಸಿ ಕಾರ್ಮಿಕರನ್ನು ಮೇಲೆತ್ತಲಾಗಲಿಲ್ಲ. ಬಳಿಕ ಸ್ಥಳಕ್ಕಾಗಮಿಸಿದ ಪೋಲೀಸರು ಹಾಗೂ ರಕ್ಷಣಾ ತಂಡ ಮಣ್ಣಿನಡಿಯಲ್ಲಿದ್ದ ಎರಡು ಮೃತದೇಹಗಳನ್ನು ಹೊರತೆಗೆದಿದ್ದು ಇನ್ನೊಬ್ಬ ವ್ಯಕ್ತಿಯ ಶವಕ್ಕೆ ಹುಡುಕಾಟ ನಡೆದಿದೆ.

