ಅನಂತಕುಮಾರ್ ಆಶಯದಂತೆ ವೃಷಭಾವತಿ ನದಿ ನೀರು ಶುದ್ದೀಕರಣಕ್ಕೆ ಕ್ರಮ: ಸಿ ಸಿ ಪಾಟೀಲ್

ದಿವಂಗತ ಅನಂತಕುಮಾರ್ ಅವರ ಆಶಯದಂತೆ ಬೆಂಗಳೂರು ವಿಶ್ವವಿದ್ಯಾಲಯದ ಮಧ್ಯೆ ನಿತ್ಯ ಹರಿಯುತ್ತಿರುವ ವೃಷಭಾವತಿನದಿ ನೀರು ಶುದ್ದೀಕರಣಕ್ಕೆ ಅಗತ್ಯ ಯೋಜನೆ ರೂಪಿಸುವಂತೆ ಮಾಲಿನ್ಯ ನಿಯಂತ್ರಣಮಂಡಳಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಇಲಾಖೆ ಮತ್ತು ಗಣಿ ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಅನಂತಕುಮಾರ್ ಆಶಯದಂತೆ ವೃಷಭಾವತಿ ನದಿ ನೀರು ಶುದ್ದೀಕರಣಕ್ಕೆ ಕ್ರಮ: ಸಿ ಸಿ ಪಾಟೀಲ್
ಅನಂತಕುಮಾರ್ ಆಶಯದಂತೆ ವೃಷಭಾವತಿ ನದಿ ನೀರು ಶುದ್ದೀಕರಣಕ್ಕೆ ಕ್ರಮ: ಸಿ ಸಿ ಪಾಟೀಲ್
Updated on

ಬೆಂಗಳೂರು: ದಿವಂಗತ ಅನಂತಕುಮಾರ್ ಅವರ ಆಶಯದಂತೆ ಬೆಂಗಳೂರು ವಿಶ್ವವಿದ್ಯಾಲಯದ ಮಧ್ಯೆ ನಿತ್ಯ ಹರಿಯುತ್ತಿರುವ ವೃಷಭಾವತಿನದಿ ನೀರು ಶುದ್ದೀಕರಣಕ್ಕೆ ಅಗತ್ಯ ಯೋಜನೆ ರೂಪಿಸುವಂತೆ ಮಾಲಿನ್ಯ ನಿಯಂತ್ರಣಮಂಡಳಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಇಲಾಖೆ ಮತ್ತು ಗಣಿ ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ್ ತಿಳಿಸಿದ್ದಾರೆ.

ಈ ನದಿ ಶುದ್ದೀಕರಣಕ್ಕೆ ಅದಮ್ಯ ಚೇತನಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್ ಅವರು ಕೈಜೋಡಿಸುವ ಭರವಸೆ ನೀಡಿದ್ದು, ಅವರ ಸಹಕಾರದಲ್ಲಿ ಶುದ್ದೀಕರಣ ಕಾರ್ಯಕ್ಕೆ ಶೀಘ್ರ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅದಮ್ಯ ಚೇತನ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 201 ಹಸಿರು ಭಾನುವಾರದಲ್ಲಿ 201 ರೂ ನೀಡಿ ಗಿಡನೆಟ್ಟು ಸಂಭ್ರಮಿಸಿದರು.

ನಂತರ ಮಾತನಾಡಿದ ಅವರು, ವೃಷಭಾವತಿ ನದಿಯ ಶುದ್ದೀಕರಣದ ಬಗ್ಗೆ ಡಾ. ತೇಜಸ್ವಿನಿ ಅನಂತಕುಮಾರ್ ಹಾಗೂ ಕುಲಪತಿ ಕೆ.ಆರ್. ವೇಣುಗೋಪಾಲ್ ಅವರು ಚರ್ಚೆನಡೆಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಎರಡು ದಿನಗಳ ನಂತರ ಯೋಜನೆಯ ಜೊತೆಗೆ ಭೇಟಿಯಾಗುವಂತೆ ಸೂಚನೆ ನೀಡಿದ್ದೇನೆ ಎಂದರು.

ಬದುಕಿದ್ದಾಗ ಅನುಸರಿಸಿದ್ದು, ಸಾವಿನ ನಂತರವೂ ಮುಂದುವರೆಯಬೇಕು ಎನ್ನುವ ಗುರಿಯನ್ನು ಅನಂತಕುಮಾರ್ ಅವರು ಹೊಂದಿದ್ದರು. ಅವರು ಹಾಕಿಕೊಟ್ಟ ಗಿಡನೆಡುವ ಯೋಜನೆ ಶ್ಲಾಘನೀಯ. ದಿವಂಗತ ಅನಂತಕುಮಾರ್ ಅವರು ರಾಜ್ಯದ ಅಭಿವೃದ್ದಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿಕೊಂಡರು.

ಸತತ ಗಿಡ ನೆಡುವ ಕಾರ್ಯಕ್ರಮ ನಡೆಸುತ್ತಿರುವ ಡಾ. ತೇಜಸ್ವಿನಿ ಅನಂತಕುಮಾರ್ ಅವರು, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಈ ಇಲಾಖೆ ಸಚಿವ ಆಗಿರುವವರೆಗೆ ಅವರಿಗೆ ಸೂಕ್ತ ಬೆಂಬಲ ಹಾಗೂ ಇಲಾಖೆಯಿಂದ ಆಗಬೇಕಾಗಿರುವ ಎಲ್ಲಾ ರೀತಿಯ ಸಹಕಾರ ನೀಡಲಿದ್ದೇನೆ ಎನ್ನುವ ಭರವಸೆ ನೀಡಿದರು.

ಪರಿಸರವನ್ನು ಉಳಿಸುವ ಅತಿಮುಖ್ಯವಾದ ಜವಾಬ್ದಾರಿ ನಮ್ಮ ಮೇಲಿದೆ. ರಾಜ್ಯದಲ್ಲಿ ಕೆಲಕಡೆ ಬರ ಇದೆ ಕೆಲಕಡೆ ತೀವ್ರ ಪ್ರವಾಹ ಇದೆ. ಈ ರೀತಿಯ ಪ್ರಾಕೃತಿಕ ಹಾನಿ ಆಗುತ್ತಿರುವುದು ನಮ್ಮ ಸ್ವಯಂಕೃತ ಅಫರಾಧ, ಗಿಡಗಳನ್ನು ನೆಡುತ್ತಿಲ್ಲ. ಪರಿಸರ ಹಾಗೂ ಅರಣ್ಯ ನಾಶದಿಂದ ಆಗಿರುವ ಪರಿಣಾಮ ಇದಾಗಿದೆ. ಇಂತಹ ಸಂದರ್ಭದಲ್ಲಿ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲರೂ ರಾಜ್ಯದ ಎಲ್ಲಾ ಕಡೆ ಇಂತಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಎಂದು ಕರೆನೀಡಿದರು.

ಅದಮ್ಯ ಚೇತನ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ದಿವಂಗತ ಅನಂತಕುಮಾರ್ ಮಾತನಾಡಿ, ಬೆಂಗಳೂರು ನಗರವನ್ನು ಮತ್ತಷ್ಟು ಹಸರೀಕರಣ ಮಾಡುವ ಕನಸನ್ನು ಅವರು ಕಂಡಿದ್ದರು. ಅವರ ಕನಸನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಒಬ್ಬ ಮನುಷ್ಯನಿಗೆ ಒಂದು ವರ್ಷ ಉಸಿರಾಡಲು ಅಗತ್ಯವಿರುವ ಆಮ್ಲಜನಕ ಉತ್ಪಾದಿಸಲು 7 ಮರಗಳು ಬೇಕು. ಈ ನಿಟ್ಟಿನಲ್ಲಿ ನಮ್ಮ ಬೆಂಗಳೂರು ನಗರಕ್ಕೆ 7 ಕೋಟಿ ಹಾಗೂ 6 ಕೋಟಿ ಜನಸಂಖ್ಯೆಯ ಕರ್ನಾಟಕಕ್ಕೆಸುಮಾರು 42 ಕೋಟಿ ಮರಗಳ ಅಗತ್ಯವಿದೆ ಎಂದರು.

201 ನೇ ಹಸಿರು ಭಾನುವಾರದ ಪ್ರಯುಕ್ತ ಪೇಪರ್ ನ್ಯಾಪ್ ಕಿನ್ ಬಳಕೆಯನ್ನು ಸಂಪೂರ್ಣ ನಿಲ್ಲಿಸುವ ಸಂಕಲ್ಪ ಮಾಡಿ ಎಂದು ಕರೆ ನೀಡಿದರು. ಅದಮ್ಯ ಚೇತನದಿಂದ ಸುಮಾರು ಒಂದುವರೆ ಗಿಡಗಳನ್ನು ನೆಟ್ಟಿದ್ದು, ಇದು ಬಹಳ ಕಡಿಮೆಸಂಖ್ಯೆಯಾಗಿದೆ. ಹಸರೀಕರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯಲ್ಲಿ ವೃಷಭಾವತಿ ನದಿ ಹರಿಯುತ್ತಿದೆ. ವೃಷಭಾವತಿ ನದಿಯ ಬಗ್ಗೆ ದಿವಂಗತ ಅನಂತಕುಮಾರ್ ಅವರು, ಪ್ರಧಾನಿ ನರೇಂದ್ರ ಮೋದಿ ಭಗೀರಥರ ಮಾದರಿಯಲ್ಲಿ ಗಂಗೆಯನ್ನು ಸ್ವಚ್ಚ ಮಾಡುತ್ತಿರುವಾಗ ನಾವು ವೃಷಭಾವತಿಯನ್ನು ಯಾಕೆ ಸ್ವಚ್ಚ ಮಾಡಬಾರದು ಎನ್ನುವ ಕನಸನ್ನು ಹೊಂದಿದ್ದರು. ಈ ಬಗ್ಗೆ ಸಚಿವರೊಂದಿಗೆ ಚರ್ಚಿಸಿದ್ದು ಇದರ ಶುದ್ದೀಕರಣಕ್ಕೆ ಅದಮ್ಯಚೇತನ ಸಂಸ್ಥೆ ಸಂತಸದಿಂದ ಕೈಜೊಡಿಸಲಿದೆ. ಭಾನುವಾರ ಅಲ್ಲದೆ ಬೇರೆ ದಿನಗಳಲ್ಲೂ ಈ ಗಿಡನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್. ವೇಣುಗೋಪಾಲ್ ಮಾತನಾಡಿ, ಅನಂತಕುಮಾರ್ ಅವರೊಂದಿಗಿನ ನನ್ನ ಒಡನಾಟ ಬಹಳ ಹಳೆಯದು. ಅನಂತಕುಮಾರ್ ಅವರ ಆಶಯದಂತೆ ಗಿಡ ನೆಡುತ್ತಿರುವುದು ಉತ್ತಮ ಬೆಳವಣಿಗೆ. ಬೆಂಗಳೂರು ವಿ.ವಿ ಮಧ್ಯೆ ಹರಿಯುತ್ತಿರುವ ವೃಷಭಾವತಿ ನೀರನ್ನು ಐವತ್ತು ವರ್ಷಗಳ ಹಿಂದೆ ಕುಡಿಯಲು ಉಪಯೋಗಿಸಲಾಗುತ್ತಿತ್ತು. ಆದರೆ, ಈಗ ಈ ನೀರು ಕೊಳಚೆ ನೀರಾಗಿದೆ. ಇದನ್ನು ಸಚಿವರ ಗಮನಕ್ಕೆ ತಂದ ಕೂಡಲೇ ಅವರು ಮಾಲಿನ್ಯ ನಿಯಂತ್ರಣಮಂಡಳಿಯ ಅಧಿಕಾರಿಗಳಿಗೆ ಕರೆಮಾಡಿ ಇದಕ್ಕೆ ಒಂದು ಯೋಜನೆಯನ್ನು ರೂಪಿಸುವಂತೆ ಸೂಚನೆ ನೀಡಿದ್ದಾರೆ. ಸ್ವಿಯೇಜ್ ಸೆಪ್ಟಿಕ್ ಟ್ರೀಟ್ ಮೆಂಟ್ ಕಟ್ಟುವ ಮೂಲಕ ನೀರನ್ನು ಶುದ್ಧೀಕರಿಸಿ, ಶುದ್ದೀಕರಿಸಿದ ನೀರನ್ನು ಬಳಸಿಕೊಂಡು ಉಳಿದಿದ್ದನ್ನು ಮುಂದಕ್ಕೆ ಬಿಡುವ ಯೋಜನೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಮುಂದಿನ ಒಂದು ತಿಂಗಳ ಒಳಗೆ ವೃಷಭಾವತಿ ನೀರನ್ನು ಶುದ್ದೀಕರಣದ ಯೋಜನೆ ಪ್ರಾರಂಭದ ಕಾರ್ಯಕ್ರಮ ಹಮ್ಮಿಕೊಳ್ಳುವ ಆಶಯ ವ್ಯಕ್ತಪಡಿಸಿದರು.ಸಾರ್ವಜನಿಕರು ಸೇರಿದಂತೆ, ವಿದ್ಯಾರ್ಥಿಗಳು, ಸ್ವಯಂಸೇವಕರು 201 ಗಿಡಗಳನ್ನು ನೆಟ್ಟು ಸಂಭ್ರಮಿಸಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com