ಡಿಕೆಶಿ ಬಳಿಕ ಮತ್ತೊಬ್ಬ ಮಾಜಿ ಸಚಿವರಿಗೆ ಇಡಿ ಕುಣಿಕೆ: ಕೆಜೆ ಜಾರ್ಜ್ ವಿರುದ್ಧ 'ಫೆಮಾ' ಉಲ್ಲಂಘನೆ ಪ್ರಕರಣ?

ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಸರ್ವಜ್ಞನಗರ ಶಾಸಕ ಕೆ.ಜೆ.ಜಾರ್ಜ್ ವಿರುದ್ಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಪ್ರಕರಣ ದಾಖಲಿಸಲು  ಬೆಂಗಳೂರು ವಲಯ ಘಟಕ ಜಾರಿ ನಿರ್ದೇಶನಾಲಯ (ಇಡಿ) ಚಿಂತನೆ ನಡೆಸಿದೆ.
ಕೆ.ಜೆ.ಜಾರ್ಜ್
ಕೆ.ಜೆ.ಜಾರ್ಜ್

ಬೆಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಸರ್ವಜ್ಞನಗರ ಶಾಸಕ ಕೆ.ಜೆ.ಜಾರ್ಜ್ ವಿರುದ್ಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಪ್ರಕರಣ ದಾಖಲಿಸಲು  ಬೆಂಗಳೂರು ವಲಯ ಘಟಕ ಜಾರಿ ನಿರ್ದೇಶನಾಲಯ (ಇಡಿ) ಚಿಂತನೆ ನಡೆಸಿದೆ.

ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಅಧ್ಯಕ್ಷ ರವಿ ಕೃಷ್ಣ ರೆಡ್ಡಿ ಅವರ ದೂರಿನ ನಂತರ. ಈ ಬೆಳವಣಿಗೆಗಳು ಆಗಿದೆ. "ಜಾರ್ಜ್ ವಿರುದ್ಧ ಫೆಮಾ ಅಡಿಯಲ್ಲಿ ಇಡಿ ಪ್ರಕರಣವನ್ನು ದಾಖಲಿಸಲು ಯೋಜಿಸಲಾಗುತ್ತಿದೆ" ಗೌಪ್ಯ ಮೂಲಗಳು ತಿಳಿಸಿವೆ. 

ಆದರೆ ಅದೇ ವೇಳೆ ಜಾರ್ಜ್, ಅವರ ವಿರುದ್ಧ ರೆಡ್ಡಿ ಅವರ ಆರೋಪ "ಆಧಾರರಹಿತ" ಎಂದು ಅವರು ಹೇಳಿದ್ದಾರೆ.ಪತ್ರಿಕೆಯೊಡನೆ ಮಾತನಾಡಿದ ಮಾಜಿ ಸಚಿವ ಜಾರ್ಜ್ "ನನ್ನ ಎಲ್ಲಾ ಆಸ್ತಿಗಳು ಕಾನೂನುಬದ್ಧವಾಗಿದ್ದು, ಲೋಕಾಯುಕ್ತ, ಆದಾಯ ತೆರಿಗೆ ಇಲಾಖೆ ಮತ್ತು ಚುನಾವಣಾ ಆಯೋಗದ ಮುಂದೆ ಘೋಷಿಸಲಾಗಿದೆ.ಈ ಯಾವುದೇ ಏಜೆನ್ಸಿಗಳು ನನ್ನಿಂದ ಯಾವುದೇ ಸ್ಪಷ್ಟೀಕರಣವನ್ನು ಬಯಸಿದರೆ, ನಾನು ನನ್ನ ಉತ್ತರವನ್ನು ಸಲ್ಲಿಸುತ್ತೇನೆ. ರೆಡ್ಡಿ ಇಡಿ ಗೆ ದೂರು ಸಲ್ಲಿಸಿರುವುದರಿಂದ, ಅವರು ಆರೋಪಗಳನ್ನು ಪರಿಶೀಲಿಸಲು ಏಜೆನ್ಸಿಗೆ ಅವಕಾಶ ನೀಡಬೇಕು. ಪ್ರಚಾರಕ್ಕಾಗಿ ಅವರು ಮಾಧ್ಯಮಗಳಿಗೆ ಏಕೆ ಹೋಗುತ್ತಿದ್ದಾರೆ? ಇಡಿ ಇದುವರೆಗೆ ನನಗೆ ಯಾವುದೇ ನೋಟಿಸ್ ನೀಡಿಲ್ಲ. ನನಗೆ ಮರೆಮಾಡಲು ಏನೂ ಇಲ್ಲ,ಎಂದಿದ್ದಾರೆ.

ಏತನ್ಮಧ್ಯೆ, ರೆಡ್ಡಿ ಪತ್ರಿಕೆಯನ್ನು ಸಂಪರ್ಕಿಸಿ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಜಾರ್ಜ್ ವಿರುದ್ಧ ವಿದೇಶದಲ್ಲಿನ  ಹಲವಾರು ಆಸ್ತಿಪಾಸ್ತಿಗಳನ್ನು ಪುರಾವೆಯಾಗಿ ಇಡಿ ಗೆ ಸಲ್ಲಿಸಲಾಗಿದೆ. ಮಾ ಅಡಿಯಲ್ಲಿ ಕಾಂಗ್ರೆಸ್ ಶಾಸಕರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವಂತೆ ನವೆಂಬರ್ 11 ರಂದು ಮತ್ತೊಂದು ಪತ್ರ ಬರೆದಿದ್ದೇನೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತು ಹಿಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಜಾರ್ಜ್ ಪ್ರಮುಖ ಖಾತೆಗಳನ್ನು ಹೊಂದಿದ್ದರು. ಅವರು ಭಾರತ ಮತ್ತು ವಿದೇಶಗಳಲ್ಲಿ, ವಿಶೇಷವಾಗಿ ನ್ಯೂಯಾರ್ಕ್ ನಲ್ಲಿ  ಬೃಹತ್ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಇಡಿ ಗೆ ನೀಡಿದ ದೂರಿನಲ್ಲಿ  ಜಾರ್ಜ್ ಮತ್ತು ಅವರ ಕುಟುಂಬ ಹೊಂದಿರುವ ಆಸ್ತಿಗಳ ವಿವರ ನಮೂದಾಗಿದೆ. ಹೆಚ್ಚಿನ ಆಸ್ತಿಗಳು ಜಾರ್ಜ್ ಅವರ ಮಗಳು ರೆನಿತಾ ಅಬ್ರಹಾಂ ಮತ್ತು ಅಳಿಯ ಕೆವಿನ್ ಅಬ್ರಹಾಂ ಅವರ ಹೆಸರಿನಲ್ಲಿವೆ ಎಂದು ರೆಡ್ಡಿ ಹೇಳಿದ್ದಾರೆ.  ಜಾರ್ಜ್ ತನ್ನ ಮಗಳು ಅಮೆರಿಕನ್ ಪ್ರಜೆ ಎಂದು ಹೇಳುವ ಮೂಲಕ ಇದನ್ನು ವಿರೋಧಿಸಿದರು. "ಭಾರತ ಸರ್ಕಾರವು ಅವರ ಆಸ್ತಿಗಳ ಬಗ್ಗೆ ಯುಎಸ್ ಸರ್ಕಾರದಿಂದ ಮಾಹಿತಿಯನ್ನು ಪಡೆಯಬಹುದು" ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com