ಬೆಳಗಾವಿ ವಿದ್ಯಾರ್ಥಿನಿಯರು
ಬೆಳಗಾವಿ ವಿದ್ಯಾರ್ಥಿನಿಯರು

ಬೆಳಗಾವಿ: ಮನುಷ್ಯನ ಕೂದಲಿನಿಂದ ಸಾವಯವ ರಸಗೊಬ್ಬರ ತಯಾರಿಸಿದ ವಿದ್ಯಾರ್ಥಿನಿಯರು!

ಯಾವುದಕ್ಕೂ ಉಪಯೋಗ ಬಾರದ ಮನುಷ್ಯನ ತಲೆಕೂದಲಿಂದ ನಿಮ್ಮ ತೋಟದಲ್ಲಿ ಯಾವುದಾದರೂ ಸಸ್ಯಗಳನ್ನು ಬೆಳೆಸಲು ಸಾಧ್ಯ ಎಂಬುದು ನಿಮಗೆ ಗೊತ್ತಿದೆಯೆ, ಹೌದು,ಬೆಳಗಾವಿಯ ಇಬ್ಬರು ವಿದ್ಯಾರ್ಥಿಗಳು ಇಂಥದೊಂದು ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.
Published on

ಬೆಳಗಾವಿ: ಯಾವುದಕ್ಕೂ ಉಪಯೋಗ ಬಾರದ ಮನುಷ್ಯನ ತಲೆಕೂದಲಿಂದ ನಿಮ್ಮ ತೋಟದಲ್ಲಿ ಯಾವುದಾದರೂ ಸಸ್ಯಗಳನ್ನು ಬೆಳೆಸಲು ಸಾಧ್ಯ ಎಂಬುದು ನಿಮಗೆ ಗೊತ್ತಿದೆಯೆ, ಹೌದು,ಬೆಳಗಾವಿಯ ಇಬ್ಬರು ವಿದ್ಯಾರ್ಥಿಗಳು ಇಂಥದೊಂದು ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.

ಕೇಂದ್ರೀಯ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿಗಳಾದ ಖುಷಿ ಅಂಗೋಲ್ಕರ್ ಮತ್ತು ರೆಮಿನಿಕಾ ಯಾದವ್ ಮಾನವರ ಕೂದಲಿನಿಂದ ಗೊಬ್ಬರ ತಯಾರಿಸಿ ಅದರಿಂದ ತರಕಾರಿ ಬೆಳೆದಿದ್ದಾರೆ.

ನಾಲ್ಕು ತಿಂಗಳ ಹಿಂದೆ ಈ ಇಬ್ಬರು ವಿದ್ಯಾರ್ಥಿನಿಯರು, ಬೆಳಗಾವಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟ್ರೆಡಿಶನಲ್ ಮೆಡಿಸಿನ್ ಸಂಸ್ಥೆಯಲ್ಲಿ ವಿಜ್ಞಾನಿಗಳಾದ ಡಾ. ಹರ್ಷ ನೇತೃತ್ವದಲ್ಲಿ ಸಂಶೋಧನೆ ಆರಂಭಿಸಿದರು. ಇದಕ್ಕೆ ಶ್ರೀದೇವಿ ಅಂಗಡಿ, ಪ್ರವೀಣ್ ಯಡಹಳ್ಳಿ ಹಾಗೂ ಶಾಂತಪ್ಪ ವರದ್ ಎಂಬ ವಿಜ್ಞಾನಿಗಳು ಕೂಡ ನೆರವು ನೀಡಿದ್ದಾರೆ.

ಕೆಲವು ಸಂಶೋಧನೆಗಳ ನಂತರ ಮಾನವರ ಕೂದಲಿನಲ್ಲಿ ಅತಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳಿರುವುದು ತಿಳಿದು ಬಂದಿದೆ. ಹೀಗಾಗಿ ಅದನ್ನು ಸಾವಯವ ದ್ರವ ರಸಗೊಬ್ಬರವಾಗಿ ಬಳಸಿ ಗಿಡಗಳನ್ನು ಬೆಳೆಯಲು ಆರಂಭಿಸಿದರು.

ಕೂದಲಿನ ದ್ರವ ಸಾವಯವ ಗೊಬ್ಬರ ಬಳಸಿ ಟಮೊಟೋ, ಎಲೆಕೋಸು ಮತ್ತು ಮಣೆಸಿನಕಾಯಿ ಬಿತ್ತನ ಮಾಡಿದ್ದಾರೆ,ಇದರ ಫಲಿತಾಂಶ ಚೆನ್ನಾಗಿ ಬಂತು. ಇದಕ್ಕಾಗಿ ಅವರಿಗೆ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಕಾರ್ಯಕ್ರಮದಲ್ಲಿ ಉತ್ತಮ ಪ್ರೋತ್ಸಾಹ ಸಿಕ್ಕಿತು, ಲಿಂಗರಾಜ್ ಕಾಲೇಜಿನ ಆವರಣದಲ್ಲಿ ಪಾಲಕ್ ಸೊಪ್ಪು ಬೆಳೆಸಲು 45 ದಿನ ಸಮಯ ತೆಗೆದು ಕೊಂಡರು, 50% ಕೃಷಿ ಪ್ರದೇಶವನ್ನು ಕೂದಲು ಗೊಬ್ಬರದೊಂದಿಗೆ ಎರಡು ಬಾರಿ ಸಂಸ್ಕರಿಸಲಾಯಿತು.

45 ದಿನಗಳ ನಂತರ, ತಮ್ಮ ಗೊಬ್ಬರವನ್ನು ಬಳಸಿ ಬೆಳೆದ ಬೆಳೆಯ ತೂಕವನ್ನು ನೋಡಿ ಇಬ್ಬರು ಆಶ್ಚರ್ಯಚಕಿತರಾದರು. 2.3 ಕೆಜಿ  ಸಾಂಪ್ರದಾಯಿಕ ಗೊಬ್ಬರವನ್ನು ಬಳಸಿ ಬೆಳೆದ ಪಾಲಕದ ತೂಕ  1.7 ಕೆಜಿ ಇತ್ತು,  

ಹಾಗಾಗಿ ನವೆಂಬರ 25 ರಂದು ಮಧ್ಯಪ್ರದೇಶದ ಭೂಪಾಲ್ ನಲ್ಲಿ ನಡೆಯವ ಕೇಂದ್ರೀಯ ವಿದ್ಯಾಲಯ ರಾಷ್ಟ್ರೀಯ  ಮಕ್ಕಳ ವಿಜ್ಞಾನ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ,.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com