ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ: ಕಾಡು ಪ್ರಾಣಿಗಳು ನಾಡಿಗೆ ನುಗ್ಗುವುದನ್ನು ತಪ್ಪಿಸಲು ಅರಣ್ಯ ಇಲಾಖೆ ಪ್ಲಾನ್​

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದಲ್ಲಿ ಬೆಂಕಿಗೆ ಆಹುತಿಯಾಗಿದ್ದ ಪ್ರದೇಶದಲ್ಲಿ ಹುಲ್ಲು ಬೆಳೆಸಲು ಅರಣ್ಯ ಇಲಾಖೆ ಮುಂದಾಗಿದೆ.
ಕಾಡು ಪ್ರಾಣಿಗಳು ನಾಡಿಗೆ ನುಗ್ಗುವುದನ್ನು ತಪ್ಪಿಸಲು ಅರಣ್ಯ ಇಲಾಖೆ ಪ್ಲಾನ್​
ಕಾಡು ಪ್ರಾಣಿಗಳು ನಾಡಿಗೆ ನುಗ್ಗುವುದನ್ನು ತಪ್ಪಿಸಲು ಅರಣ್ಯ ಇಲಾಖೆ ಪ್ಲಾನ್​

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದಲ್ಲಿ ಬೆಂಕಿಗೆ ಆಹುತಿಯಾಗಿದ್ದ ಪ್ರದೇಶದಲ್ಲಿ ಹುಲ್ಲು ಬೆಳೆಸಲು ಅರಣ್ಯ ಇಲಾಖೆ ಮುಂದಾಗಿದೆ.

ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದಲ್ಲಿ ಬೆಂಕಿಗಾಹುತಿಯಾಗಿದ್ದ ಪ್ರದೇಶದಲ್ಲಿ ಹುಲ್ಲು ಬೆಳೆಸಲು ಅರಣ್ಯ ಇಲಾಖೆ ಮುಂದಾಗಿದೆ. ಕಾಡಿನಲ್ಲಿ ಕಳೆಗಿಡ ಹಾಗೂ ಲಂಟೆನಾಗಳು ಬೆಳೆದು ಕಾಡು ಪ್ರಾಣಿಗಳಿಗೆ ಮೇವಿನ ಕೊರತೆಯಿಂದ ರೈತರ ಜಮೀನಿಗೆ ಮತ್ತು ಗ್ರಾಮೀಣ ಪ್ರದೇಶಗಳಿಗೆ ಲಗ್ಗೆ ಇಡುವುದನ್ನು ತಪ್ಪಿಸುವ ಮಾರ್ಗೋಪಾಯಕ್ಕಾಗಿ ಹುಲ್ಲು ಬೆಳೆಸಲು ಇಲಾಖೆ ಮುಂದಾಗಿದೆ.

ಕಾಡಿನಲ್ಲಿ ಕಳೆಗಿಡ ಹಾಗೂ ಲಂಟೆನಾಗಳು ಬೆಳೆದು ಕಾಡು ಪ್ರಾಣಿಗಳಿಗೆ ಮೇವಿನ ಕೊರತೆಯಿಂದ ರೈತರ ಜಮೀನಿಗೆ ಮತ್ತು ಗ್ರಾಮೀಣ ಪ್ರದೇಶಗಳಿಗೆ ಲಗ್ಗೆ ಇಡುವುದನ್ನು ತಪ್ಪಿಸುವ ಮಾರ್ಗೋಪಾಯಕ್ಕಾಗಿ ಹುಲ್ಲು ಬೆಳೆಸಲು ಇಲಾಖೆ ಮುಂದಾಗಿದೆ.

ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಬೋಳಗುಡ್ಡ ವ್ಯಾಪ್ತಿಯಲ್ಲಿ ಸಸ್ಯಹಾರಿ ಪ್ರಾಣಿಗಳಿಗೆ ಆಹಾರವಾಗಬಲ್ಲ ಹುಲ್ಲುಗಾವಲು ಬೆಳೆಸಲು ಉದ್ದೇಶಿಸಲಾಗಿದ್ದು ಇದಕ್ಕಾಗಿ ಲಂಟಾನವನ್ನು ತೆರವುಗೊಳಿಸಲಾಗುತ್ತಿದೆ ಈ ಮೂಲಕ ಕಾಡು ಪ್ರಾಣಿಗಳಿಗೆ ಬೇಕಾದ ಹುಲ್ಲುಗಾವಲು ಬೆಳೆಯಲು ನೆರವಾಗಲಿದ್ದು ಆನೆ, ಜಿಂಕೆ, ಸಾರಂಗ, ಕಡವೆಗೆ ಆಹಾರವೂ ಸಿಗಲಿದೆ.

ಜೊತೆಗೆ ಮಾಂಸಹಾರಿ ಪ್ರಾಣಿಗಳಿಗೆ ಬಲಿ ಪ್ರಾಣಿಗಳೂ ಸಿಗುವುದರಿಂದ ಪ್ರಾಣಿ- ಮಾನವ ಸಂಘರ್ಷಕ್ಕೆ ಸ್ವಲ್ಪಮಟ್ಟಿಗೆ ಕಡಿಮೆ ಆಗುವ ನಿರೀಕ್ಷೆ ಇಲಾಖೆಯದ್ದಾಗಿದೆ.ಈಗಾಗಲೇ ಹುಲ್ಲು ಬೆಳೆಯುವ ಜಾಗದಲ್ಲಿ ಪಾರ್ಥೇನಿಯಂ, ಯೂಪಿಟೋರಿಯಂ, ಲಂಟೆನಾದಂತಹ ಅನಗತ್ಯ ಸಸಿಗಳ ತೆರವು ಮಾಡಲಾಗುತ್ತಿದ್ದು ಫೈರ್ ಲೈನ್ ನೊಂದಿಗೆ ಕೆಲವೆಡೆ ಲಂಟಾನವನ್ನೂ ತೆರವುಗೊಳಿಸಲಾಗುತ್ತಿದೆ.

ವರದಿ :- ಗೂಳಿಪುರ ನಂದೀಶ ಎಂ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com