ಆರ್ಥಿಕ ಸಂಕಷ್ಟ: ಸಿದ್ದಾರ್ಥ್ ಒಡೆತನದ  ಡಾರ್ಕ್‌ ಫಾರೆಸ್ಟ್‌ ಫರ್ನಿಚರ್‌ ಕಂಪನಿ ಬಂದ್ 

ಪ್ರಖ್ಯಾತ “ಕಾಫಿ ಡೇ’ಯ ಅಂಗಸಂಸ್ಥೆ ಡಾರ್ಕ್‌ ಫಾರೆಸ್ಟ್‌ ಫರ್ನಿಚರ್‌ (ಡ್ಯಾಪ್ಕೋ) ಕಂಪನಿಗೆ ಸೋಮವಾರ ಶಾಶ್ವತವಾಗಿ ಬೀಗ ಹಾಕಲಾಗಿದೆ. “ಕಾಫಿ ಡೇ’ ಸಂಸ್ಥಾಪಕ ಸಿದ್ದಾರ್ಥ್ ಹೆಗಡೆ ಸಾವಿನ ನಂತರ ಸಂಸ್ಥೆ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇದರಿಂದಾಗಿ ಕಾರ್ಮಿಕರು ಪರದಾಡುವಂತಾಗಿದೆ.
ಸಿದ್ದಾರ್ಥ್
ಸಿದ್ದಾರ್ಥ್

ಚಿಕ್ಕಮಗಳೂರು:  ಪ್ರಖ್ಯಾತ “ಕಾಫಿ ಡೇ’ಯ ಅಂಗಸಂಸ್ಥೆ ಡಾರ್ಕ್‌ ಫಾರೆಸ್ಟ್‌ ಫರ್ನಿಚರ್‌ (ಡ್ಯಾಪ್ಕೋ) ಕಂಪನಿಗೆ ಸೋಮವಾರ ಶಾಶ್ವತವಾಗಿ ಬೀಗ ಹಾಕಲಾಗಿದೆ. “ಕಾಫಿ ಡೇ’ ಸಂಸ್ಥಾಪಕ ಸಿದ್ದಾರ್ಥ್ ಹೆಗಡೆ ಸಾವಿನ ನಂತರ ಸಂಸ್ಥೆ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇದರಿಂದಾಗಿ ಕಾರ್ಮಿಕರು ಪರದಾಡುವಂತಾಗಿದೆ.

ಕಾಫಿ ಡೇ ಮಾಲೀಕ, ಉದ್ಯಮಿ ಸಿದ್ಧಾರ್ಥ ಅವರು ಸಾವನ್ನಪ್ಪಿ ಹತ್ತಿರತ್ತಿರ ನಾಲ್ಕು ತಿಂಗಳು ಕಳೆಯುತ್ತಿವೆ. ಅಧಿಕ ಸಾಲದ ಸುಳಿಯಲ್ಲಿ ಸಿಲುಕಿ, ಜುಲೈ 29ಕ್ಕೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು ಸಿದ್ಧಾರ್ಥ್. ಇದೀಗ ನಾಲ್ಕು ತಿಂಗಳ ನಂತರ ಸಿದ್ಧಾರ್ಥ ಒಡೆತನದ ಡಾರ್ಕ್ ಫಾರೆಸ್ಟ್ ಫರ್ನಿಚರ್ ಕಂಪೆನಿಯನ್ನು ಬಂದ್ ಮಾಡಲು ನಿರ್ಧರಿಸಲಾಗಿದ್ದು, ಏಕಾಏಕಿ ಕಂಪನಿ ಮುಚ್ಚಿದ ಪರಿಣಾಮ ನೂರಾರು ಕಾರ್ಮಿಕರು ಕಂಗಾಲಾಗಿದ್ದಾರೆ.

ಕಾಫಿ ಡೇ ಗ್ಲೋಬಲ್‌’ ಮುಂಭಾಗದ ಗೇಟಿನ ಮೇಲೆ ಸಂಸ್ಥೆಯನ್ನು ಮುಚ್ಚಿರುವ ಕುರಿತು ನೋಟಿಸ್‌ ಅಂಟಿಸಲಾಗಿದೆ. ಇಲ್ಲಿ ಕೆಲಸ ಮಾಡುತ್ತಿದ್ದ 66 ಜನರನ್ನು ಏಕಾಏಕಿ ಕರ್ತವ್ಯದಿಂದ ತೆಗೆದು ಹಾಕಲಾಗಿದೆ. ಸೋಮವಾರ ಎಂದಿನಂತೆ ಕರ್ತವ್ಯಕ್ಕೆ ಬಂದಿದ್ದ 68 ಜನರನ್ನು ಗೇಟಿನ ಬಳಿಯೇ ತಡೆದ ಸೆಕ್ಯುರಿಟಿ ಗಾರ್ಡ್‌ಗಳು, ನಿಮ್ಮನ್ನು ಕೆಲಸದಿಂದ ತೆಗೆಯಲಾಗಿದೆ. ಒಳಗೆ ಬಿಡದಂತೆ ಆದೇಶ ಬಂದಿದೆ ಎಂದು ತಿಳಿಸಿದರು.

ಕಾರ್ಮಿಕರು ಪ್ರತಿಭಟಿಸದಂತೆ ಪೊಲೀಸರು ಎಚ್ಚರಿಕೆ ನೀಡಿದ್ದು, ಎಬಿಸಿ ಆವರಣದ 100 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ ಹೇರಲಾಗಿದೆ. ಸ್ಥಳದಲ್ಲಿ ಡಿಎಆರ್ ಪಿ ತುಕಡಿ ನಿಯೋಜಿಸಲಾಗಿದೆ. ನಿಷೇಧಾಜ್ಞೆ ನಡುವೆಯೂ ಮೇಲಾಧಿಕಾರಿಗಳ ಆಗಮನಕ್ಕಾಗಿ ಕಾರ್ಮಿಕರು ಕಾದು ಕುಳಿತಿದ್ದಾರೆ. ಚಿಕ್ಕಮಗಳೂರು ನಗರದ ಎಬಿಸಿ ಆವರಣದಲ್ಲಿರುವ ಈ ಕಂಪನಿ ಸಿದ್ಧಾರ್ಥ ಅವರ ಮರಣದ ನಂತರ ಸಾಕಷ್ಟು ನಷ್ಟ ಅನುಭವಿಸಿದ್ದು, ಈ ಕಾರಣದಿಂದ ಬಂದ್ ಮಾಡುತ್ತಿರುವುದಾಗಿ ನೋಟೀಸ್ ನಲ್ಲಿ ನಮೂದಿಸಲಾಗಿದೆ.

7 ವರ್ಷದ ಹಿಂದೆ “ಕೆಫೆ ಕಾಫಿ ಡೇ’ ಅಂಗ ಸಂಸ್ಥೆಯಾಗಿ “ಡ್ಯಾಪ್ಕೋ’ ಕಂಪನಿಯನ್ನು ಉದ್ಯಮಿ ದಿ|ಸಿದ್ದಾರ್ಥ್ ಹೆಗಡೆ ಪ್ರಾರಂಭಿ ಸಿದ್ದರು. ಕಾಫಿ ಡೇ ಕಂಪನಿ ಉತ್ತುಂಗದಲ್ಲಿದ್ದ ಸಂದರ್ಭ ರಾಜ್ಯ- ಹೊರ ರಾಜ್ಯ ಸೇರಿದಂತೆ ವಿದೇಶಗಳಲ್ಲಿ ಆರಂಭಿಸಲಾಗುವ “ಕಾಫಿ ಡೇ’ ಮಳಿಗೆ ಗಳಿಗೆ ಅಗತ್ಯವಿರುವ ಪೀಠೊಪಕರಣ ಗಳನ್ನು ಇಲ್ಲಿ ತಯಾರಿಸಿ ಕಳುಹಿಸಲಾಗುತ್ತಿತ್ತು. ಪೀಠೊಪಕರಣ ತಯಾರಿಕೆಗೆ ಅಗತ್ಯವಿರುವ ಮರವನ್ನು ವಿದೇಶಗಳಿಂ ದಲೂ ತರಲಾಗುತ್ತಿತ್ತು. ಗಯಾನವುಡ್‌, ಸಿಲ್ವರ್‌ ಬೀಚ್‌, ರೋಸ್‌ ವುಡ್‌ ಸೇರಿ ಸ್ಥಳೀಯ ಅಕೇಷಿಯಾ ಸಿಲ್ವರ್‌ ಮರಗಳನ್ನು ಬಳಸಿಕೊಂಡು ಪೀಠೊಪಕರಣಗಳನ್ನು ತಯಾರಿಸಲಾಗುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com