
ಶಿರಸಿ: ಮಾತೆಯೊಬ್ಬಳು ನಾಲ್ಕು ಶಿಶುಗಳಿಗೆ ಜನ್ಮವಿತ್ತ ಅಪರೂಪದ ವಿದ್ಯಮಾನ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಶನಿವಾರ ನಡೆದಿದೆ. ಆದರೆ ನಾಲ್ಕು ಶಿಶುಗಳಲ್ಲಿ ಒಂದು ಶಿಶು ಜನಿಸುವಾಗಲೇ ಮೃತಪಟ್ಟಿದೆ. ಇನ್ನೂ ಎರಡು ಹೆಣ್ಣು ಹಾಗೂ ಒಂದು ಗಂಡು ಶಿಶು ಕ್ಷೇಮವಾಗಿದ್ದು ಆಸ್ಪತ್ರೆ ಸಿಬ್ಬಂದಿಯ ಆರೈಕೆಯಲ್ಲಿವೆ.
28ವರ್ಷ ವಯಸ್ಸಿನ ಈ ಮಹಿಳೆ ಎಂಟು ತಿಂಗಳ ಗರ್ಭೀಣಿಯಾಗಿದ್ದ ಸಂದರ್ಭದಲ್ಲಿ ಹೆರಿಗೆ ನೋವು ತೀವ್ರವಾದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಳು. ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ನಾಲ್ಕು ಶಿಶುಗಳನ್ನು ಹೊರತೆಗೆದರು. ಮೂರು ಶಿಶುಗಳು ಆರೋಗ್ಯವಾಗಿದ್ದು. ಒಂದು ಸಾವನ್ನಪ್ಪಿದೆ.
ಗರ್ಭದಲ್ಲಿ ನಾಲ್ಕು ಶಿಶುಗಳು ಇರುವುದು ಅಪರೂಪದ ಸಮಗತಿಯಾಗಿದೆ. ತಾಯಿ, ಮಗು ಕ್ಷೇಮವಾಗಿದ್ದಾರೆ ಎಂಬುದಾಗಿ ಶಸ್ತ್ರಚಿಕಿತ್ಸೆ ನಡೆಸಿದ ಇಲ್ಲಿಯ ಕೌಮುದಿ ನರ್ಸಿಂಗ್ ಹೋಮ್‌ನ ಡಾ.ಜಿ.ಎಂ.ಹೆಗಡೆ ಅವರು ತಿಳಿಸಿದರು.
Advertisement