ಪುತ್ತೂರಿನಲ್ಲಿ ಎಸಿಬಿ ದಾಳಿ: ಲಂಚ ಸ್ವೀಕರಿಸುತ್ತಿದ್ದ ಸರ್ವೇಯರ್ ಶಿವಕುಮಾರ್ ಬಂಧನ

ಸರ್ಕಾರಿ ಸರ್ವೇಯರ್ ಓರ್ವ ಜಮೀನಿನ ಪೋಡಿ (ಅಳತೆ) ಮಾಡಿಸುವದಕ್ಕಾಗಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿರುವ ಘಟನೆ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪುತ್ತೂರು: ಸರ್ಕಾರಿ ಸರ್ವೇಯರ್ ಓರ್ವ ಜಮೀನಿನ ಪೋಡಿ (ಅಳತೆ) ಮಾಡಿಸುವದಕ್ಕಾಗಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿರುವ ಘಟನೆ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರಿನ ತಾಲೂಕು ಕಛೇರಿ ಸರ್ವೇಯರ್ ಎಂ. ಶಿವಕುಮಾರ್ ಬಂಧಿತ ಸರ್ವೇಯರ್ ಆಗಿದ್ದು ಹಿರೇಬಂಡಾಡಿಯ ಗೋಪಾಲ ಮೊಗೇರ ಅನ್ನುವವರು 2015ರಲ್ಲಿ ತನ್ನ ತಾಯಿ ಹಾಗೂ ಅಣ್ಣನ ಖಾತೆಯಲ್ಲಿದ್ದ ಜಮೀನಿನ ಪೋಡಿ ಮಾಡಿಸಲು ಅರ್ಜಿ ಹಾಕಿದ್ದರು. ಆದರೆ ಇದುವರೆಗೆ ಸರ್ವೇಯರ್ ಆ ಸ್ಥಳಕ್ಕೆ ಬಂದಿಲ್ಲ. ಈ ಬಗ್ಗೆ ವಿಚಾರಿಸಿದಾಗ ಶಿವಕುಮಾರ್ 30 ಸಾವಿರ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ಅದನ್ನು ಐದು ಸಾವ್ರುಅದ ಆರು ಕಂತುಗಳಲ್ಲಿ ನೀಡುವಂತೆ ಹೇಳಿದ್ದಾರೆ. 

ಇದರಂತೆ ಲಂಚದ ಹಣದ ಮೊದಲ ಕಂತನ್ನು ಉಪ್ಪಿನಂಗಡಿಯ ಹೋಟೆಲ್ ಒಂದರಲ್ಲಿ ಪಡೆಯುತ್ತಿರುವಾಗ ಎಸಿಬಿ ದಾಳಿ ನಡೆದಿದೆ.

ಎಸಿಬಿ  ಪ್ರಭಾರ ಎಸ್.ಪಿ. ಸುಧೀರ್ ಹೆಗ್ಡೆ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು ಆರೋಪಿ ಶಿವಕುಮಾರ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com