ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಕೋವಿಂದ್ ಅವರನ್ನು ಪ್ರಮೋದಾದೇವಿ ಆಹ್ವಾನಿಸಿದ್ದ ಸಂದರ್ಭದ ಸಾಂದರ್ಭಿಕ ಚಿತ್ರ
ರಾಜ್ಯ
ರಾಷ್ಟ್ರಪತಿ ಕೋವಿಂದ್ ಅವರಿಂದ ಚಾಮರಾಜ ಒಡೆಯರ್ ಜನ್ಮ ಶತಮಾನೋತ್ಸವ ಉದ್ಘಾಟನೆ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇದೇ ತಿಂಗಳ 10 ರಂದು ಮೈಸೂರು ಅರಮನೆಯ ದರ್ಬಾರ್ ಹಾಲ್‌ನಲ್ಲಿ ದಿವಂಗತ ಮಹಾರಾಜ ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವದ ಮೂರನೇ ಅಧಿವೇಶನವನ್ನು ಉದ್ಘಾಟಿಸಲಿದ್ದಾರೆ.
ಮೈಸೂರು: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇದೇ ತಿಂಗಳ 10 ರಂದು ಮೈಸೂರು ಅರಮನೆಯ ದರ್ಬಾರ್ ಹಾಲ್‌ನಲ್ಲಿ ದಿವಂಗತ ಮಹಾರಾಜ ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವದ ಮೂರನೇ ಅಧಿವೇಶನವನ್ನು ಉದ್ಘಾಟಿಸಲಿದ್ದಾರೆ ಎಂದು ರಾಜಮನೆತನದ ಮುಖ್ಯಸ್ಥೆ ಪ್ರಮೋದಾ ದೇವಿ ಒಡೆಯರ್ ತಿಳಿಸಿದ್ದಾರೆ.
ಜಯಚಾಮರಾಜ ಒಡೆಯರ್ ಸಂಕಲಿಸಿರುವ 94 ಕರ್ನಾಟಕ ಶಾಸ್ತ್ರೀಯ ಸಂಗೀತ ಸಂಯೋಜನೆಗಳ ಸಾಹಿತ್ಯ ಮತ್ತು ಸಂಗೀತ ಟಿಪ್ಪಣಿಗಳನ್ನು ಒಳಗೊಂಡಿರುವ ‘ಶ್ರೀವಿದ್ಯಾ ಸಂಕೀರ್ತನ ಸುಧಲಹರಿ’ ಪುಸ್ತಕವನ್ನು ರಾಷ್ಟ್ರಪತಿ ಬಿಡುಗಡೆ ಮಾಡಲಿದ್ದಾರೆ. ಇದು ಕನ್ನಡ ಮತ್ತು ದೇವನಾಗರಿ ಲಿಪಿಯಲ್ಲಿ ಹೊರತರಲಾಗಿದೆ ಎಂದು ಅವರು ತಿಳಿಸಿದರು.
ಅಕ್ಟೋಬರ್ 10 ರಂದು ರಾಷ್ಟ್ರಪತಿಗಳ ಗೌರವಾರ್ಥ ಮಿಲಿಟರಿ ಮತ್ತು ಪೊಲೀಸ್ ಬ್ಯಾಂಡ್‌ಗಳು ಸಂಗೀತ ನುಡಿಸಲಿವೆ. ರಘು ದೀಕ್ಷಿತ್ ಅಕ್ಟೋಬರ್ 13 ರಂದು ಅರಮನೆ ಅಂಗಳದಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಅವರು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ