ದಸರಾ ಸಂಭ್ರಮ ಸಾವಿನಲ್ಲಿ ಅಂತ್ಯ! ಚಿಕ್ಕಮಗಳೂರಿನಲ್ಲಿ ಮೂವರು ಬಾಲಕರು ನೀರುಪಾಲು

ಆಯುಧ ಪೂಜೆಯಂದು ಕೆರೆಯಲ್ಲಿ ಸೈಕಲ್ ತೊಳೆದು ಈಜಲು ತೆರಳಿದಾಗ ಮೂವರು ಬಾಲಕರು ನೀರುಪಾಲಾದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಚಿಕ್ಕಮಗಳೂರು: ಆಯುಧ ಪೂಜೆಯಂದು ಕೆರೆಯಲ್ಲಿ ಸೈಕಲ್ ತೊಳೆದು ಈಜಲು ತೆರಳಿದಾಗ ಮೂವರು ಬಾಲಕರು ನೀರುಪಾಲಾದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ಲಳ್ಳಿ ಗ್ರಾಮದ ಕಂಚಿಕಟ್ಟೆಯಲ್ಲಿ ನಡೆದ ದುರ್ಘಟನೆ ಇದಾಗಿದ್ದು ಮುರುಳಿ‌ (15), ಜೀವಿತ್ (14) ಹಾಗೂ ಚಿರಾಗ್ (15) ಎಂಬ ಮೂವರು ಬಾಲಕರು ದುರ್ಮರಣಕ್ಕೀಡಾಗಿದ್ದಾರೆ.

ಇವರಲ್ಲಿ ಮುರುಳಿ ಹಾಗೂ ಜೀವಿತ್ ಮೃತದೇಹವು ಪತ್ತೆಯಾಗಿದ್ದು ಚಿರಾಗ್ ಶವಕ್ಕಾಗಿ ಪೋಲೀಸರು, ಅಗ್ನಿಶಾಮಕ ಸಿಬ್ಬಂದಿ ಹುಡುಕಾಟದಲ್ಲಿದ್ದಾರೆ.

ಮೃತಪಟ್ಟ ಮೂವರು ಬಾಲಕರು ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್ ನಿವಾಸಿಗಳೆನ್ನಲಾಗಿದೆ. ನಿನ್ನೆ ಸಂಜೆ ಆಯುಧ ಪೂಜೆ ನಿಮಿತ್ತ ಸೈಕಲ್ ಪೂಜೆ ನಡೆಸಿ ಬಳಿಕ ಈಜಲು ಕೆರೆಗಿಳಿದಾಗ ಮುಳುಗಿ ಸಾವನ್ನಪ್ಪಿದ್ದಾರೆ. ಘಟನೆ ಕುರಿತಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com