2018ರ ಬೆಳಗಾವಿ ಅಧಿವೇಶನ: 40 ಗಂಟೆ 25 ನಿಮಿಷಕ್ಕೆ ಖರ್ಚು ಮಾಡಿದ ಹಣವೆಷ್ಟು ಗೊತ್ತೆ?

ಕಳೆದ ವರ್ಷ ಅಂದರೆ 2018 ರ ಡಿಸೆಂಬರ್ 19 ರಿಂದ 22ರವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಲಾಗಿತ್ತು. ಒಟ್ಟು 40 ಗಂಟೆ 25 ನಿಮಿಷ  ನಡೆದ ಅಧಿವೇಶನಕ್ಕೆ ಸರ್ಕಾರ ಖರ್ಚು ಮಾಡಿರುವುದು ಬರೋಬ್ಬರೀ 13.85 ಕೋಟಿ ರು ಹಣ ಎಂದು ಮಾಹಿತಿ ಹಕ್ಕು ಕಾಯಿದೆಯಿಂದ ಬಹಿರಂಗವಾಗಿದೆ.
ಸುವರ್ಣ ವಿಧಾನ ಸೌಧ
ಸುವರ್ಣ ವಿಧಾನ ಸೌಧ

ಬೆಳಗಾವಿ: ಕಳೆದ ವರ್ಷ ಅಂದರೆ 2018 ರ ಡಿಸೆಂಬರ್ 19 ರಿಂದ 22ರವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಲಾಗಿತ್ತು. ಒಟ್ಟು 40 ಗಂಟೆ 25 ನಿಮಿಷ  ನಡೆದ ಅಧಿವೇಶನಕ್ಕೆ ಸರ್ಕಾರ ಖರ್ಚು ಮಾಡಿರುವುದು ಬರೋಬ್ಬರೀ 13.85 ಕೋಟಿ ರು ಹಣ ಎಂದು ಮಾಹಿತಿ ಹಕ್ಕು ಕಾಯಿದೆಯಿಂದ ಬಹಿರಂಗವಾಗಿದೆ.

10 ದಿನಗಳ ಕಾಲ ನಡೆದ ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೋಂಡ ಶಾಸಕರ ಪ್ರಯಾಣ ಭತ್ಯೆ, ವಾಹನಗಳ ಪೆಟ್ರೋಲ್, ವಾಸ್ತವ್ಯಕ್ಕೆ ಹೋಟೆಲ್ ಊಟ, ತಿಂಡಿ ಖರ್ಚಿನ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ವಿವರ ಕೇಳಲಾಗಿತ್ತು, ಬೆಂಗಳೂರಿನಲ್ಲಿ 10 ದಿನಗಳ ವಿಧಾನಸಭೆ ಅಧಿವೇಶನ ನಡೆಸಲು ದಿನಕ್ಕೆ 55 ಲಕ್ಷದಿಂದ 60 ಲಕ್ಷ ರೂ.ಖರ್ಚು ತಗಲುತ್ತದೆ ಎಂದು ಮೂಲಗಳು ತಿಳಿಸಿವೆ.

ಸುವರ್ಣಸೌಧ ಬೆಳಗಾವಿ ನಗರದಿಂದ 8ಕಿಮೀ ದೂರದಲ್ಲಿದೆ, ಪ್ರತಿದಿನ ಶಾಸಕರ ಓಡಾಟಕ್ಕೆ 2,500 ರು ಪ್ರಯಾಣ ಭತ್ಯೆ ನೀಡಲಾಗುತ್ತಿತ್ತು, ಇದು ಒಟ್ಟಾರೆ 2.61 ಕೋಟಿ ರೂ ಆಗಿದೆ.

ಬೆಳಗಾವಿ ನಗರದಲ್ಲಿರುವ ಐಷಾರಾಮಿ ಹೋಟೆಲ್ ಗಳಲ್ಲಿ  ಶಾಸಕರ ವಾಸ್ತವ್ಯಕ್ಕೆ ಏರ್ಪಾಡು ಮಾಡಲಾಗಿತ್ತು,67 ಹೋಟೆಲ್ ಗಳಲ್ಲಿ ಶಾಸಕರು ತಂಗಿದ್ದರು. ಇದಕ್ಕಾಗಿ 4.42 ಕೋಟಿ ವೆಚ್ಚವಾಗಿತ್ತು.

ಬೆಳಗಾವಿಯಲ್ಲಿ ನಡೆದ 10 ದಿನಗಳ ಚಳಿಗಾಲದ ಅಧಿವೇಶನದಲ್ಲಿ ಪ್ರತಿ ಒಂದು ಗಂಟೆ ಅಧಿವೇಶನಕ್ಕೆ ಸರ್ಕಾರ 3.37 ಲಕ್ಷ ಹಣ ಖರ್ಚು ಮಾಡಿದೆ ಎಂದು ಆರ್ ಟಿ ಐ ಕಾರ್ಯಕರ್ತ ಭೀಮಪ್ಪ ಗಡಾದ್ ಮಾಹಿತಿ ನೀಡಿದ್ದಾರೆ.ಈ 10 ದಿನಗಳ ಅಧಿವೇಶನದಲ್ಲಿ ಯಾವುದೇ ಮಹತ್ವದ ವಿಷಯಗಳ ಚರ್ಚೆಯಾಗಿಲ್ಲ, ರೈತರ ಸಮಸ್ಯೆಗಳ ಬಗ್ಗೆಯಾಗಲಿ ಅಥವಾ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆಯಾಗಲಿ ಚರ್ಚೆ ನಡೆಯಲಿಲ್ಲ.

ಬೆಳಗಾವಿಯಲ್ಲಿ ಅಧಿವೇಶನ ನಡೆಸಿ ಸರ್ಕಾರ ಜನರ ಹಣವನ್ನು ಪೋಲು ಮಾಡುತ್ತಿದೆ,  ಇದುವರೆಗೂ ಸುವರ್ಣ ಸೌಧಕ್ಕೆ ಬೆಂಗಳೂರಿನಂದ ಒಂದೇ ಒಂದು ರಾಜ್ಯ ಮಟ್ಟದ ಕಚೇರಿಯನ್ನು ಸ್ಥಳಾಂತರಿಸಿಲ್ಲ ಎಂದು ಆರೋಪಿಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com