ವಿಜಯಪುರ: ಪ್ಲಾಸ್ಟಿಕ್ ಕೊಡಿ, ಒಂದು ಕಪ್ ಉಚಿತವಾಗಿ ಟೀ ಕುಡಿಯಿರಿ

ದೇಶ ಮತ್ತು ನಗರವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಉದ್ದೇಶದಿಂದ, ಪರಿಸರದಲ್ಲಿ ಪ್ಲಾಸ್ಟಿಕ್ ಬಳಕೆ ತಗ್ಗಿಸುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಆಡಳಿತ ಇಲಾಖೆಗಳು ಹೊಸ ಹೊಸ ಐಡಿಯಾಗಳನ್ನು ರೂಪಿಸುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಿಜಯಪುರ: ದೇಶ ಮತ್ತು ನಗರವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಉದ್ದೇಶದಿಂದ, ಪರಿಸರದಲ್ಲಿ ಪ್ಲಾಸ್ಟಿಕ್ ಬಳಕೆ ತಗ್ಗಿಸುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಆಡಳಿತ ಇಲಾಖೆಗಳು ಹೊಸ ಹೊಸ ಐಡಿಯಾಗಳನ್ನು ರೂಪಿಸುತ್ತಿದ್ದಾರೆ.

ಬಳಸಿದ ಪ್ಲಾಸ್ಟಿಕ್ ಬಾಟಲ್ ನೀಡಿದರೇ, ಉಚಿತವಾಗಿ ಒಂದು ಕಪ್ ಟೀ ನೀಡಲು ವಿಜಯಪುರ ನಗರಸಭೆ ಮುಂದಾಗಿದೆ, ಅಕ್ಟೋಬರ್ 2 ರಿಂದ ಈ ಯೋಜನೆ ಜಾರಿಗೆ ತಂದಿದ್ದು, ಇಂದಿರಾ ಕ್ಯಾಂಟೀನ್ ನಲ್ಲಿ 1 ಕಪ್ ಉಚಿತವಾಗಿ ಟೀ ನೀಡಲಾಗುತ್ತದೆ.

ಸ್ವಚ್ಚ ಸಮಾಜದ ಪರಿಕಲ್ಪನೆಗೆ ಜನರ ಸಹಾಯ ಅತ್ಯಗತ್ಯವಾಗಿದೆ. ಅವರಲ್ಲಿ ಪ್ಲಾಸ್ಟಿಕ್ ಬಳಕೆಯಿಂದಾಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶ ಇದಾಗಿದೆ ಎಂದು ವಿಜಯಪುರ ನಗರಸಭೆ ಆಯುಕ್ತ ಹರ್ಷ ಶೆಟ್ಟಿ ಹೇಳಿದ್ದಾರೆ.

ನಗರದಲ್ಲಿರುವ ಆರು ಇಂದಿರಾ ಕ್ಯಾಂಟೀನ್ ಗಳಲ್ಲಿ ಬಾಟಲ್ ಗಳನ್ನು ನೀಡಿ ಟೀ ಕುಡಿಯಬಹುದಾಗಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com