ಕಾವೇರಿ ತೀರ್ಥೋದ್ಭವ: ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ ಕಾವೇರಿ!

ಜೀವನದಿ ಕಾವೇರಿ  ಉಗಮ ಸ್ಥಳ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ನಡೆಯಿತು. ತಡರಾತ್ರಿ ಸರಿಯಾಗಿ 12 ಗಂಟೆ 57 ನಿಮಿಷಕ್ಕೆ ಕರ್ಕಾಟಕ ಲಗ್ನ, ರೋಹಿಣಿ ನಕ್ಷತ್ರದಲ್ಲಿ ಕಾವೇರಿಯು ತೀರ್ಥ ರೂಪಿಣಿಯಾಗಿ  ಆವಿರ್ಭವಿಸಿದಳು. 
ತಲ ಕಾವೇರಿ
ತಲ ಕಾವೇರಿ

ಮಡಿಕೇರಿ: ಜೀವನದಿ ಕಾವೇರಿ  ಉಗಮ ಸ್ಥಳ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ನಡೆಯಿತು. ತಡರಾತ್ರಿ ಸರಿಯಾಗಿ 12 ಗಂಟೆ 57 ನಿಮಿಷಕ್ಕೆ ಕರ್ಕಾಟಕ ಲಗ್ನ, ರೋಹಿಣಿ ನಕ್ಷತ್ರದಲ್ಲಿ ಕಾವೇರಿಯು ತೀರ್ಥ ರೂಪಿಣಿಯಾಗಿ  ಆವಿರ್ಭವಿಸಿದಳು. 

ಈ ಮೊದಲು 12-59ಕ್ಕೆ ಕಾವೇರಿ  ತೀರ್ಥೋದ್ಭವ ಆಗಲಿದೆ ಎನ್ನಲಾಗಿತ್ತು. ಆದರೆ,  ನಿಗದಿತ ಸಮಯಕ್ಕಿಂತ 2 ನಿಮಿಷ ಮುಂಚಿತವಾಗಿಯೇ  ತೀರ್ಥೋದ್ಭವ  ಆಯಿತು.  

ತುಲಾ ಸಂಕ್ರಮಣದಲ್ಲಿ ಮಂತ್ರ ಘೋಷ, ಮಂಗಳವಾದ್ಯದ ನಡುವೆ ಕಾವೇರಿ ತಾಯಿ ತೀರ್ಥ ರೂಪಿಣಿಯಾಗಿ ಬ್ರಹ್ಮಕುಂಡಿಕೆಯಿಂದ  ದರ್ಶನ ನೀಡುತ್ತಿದ್ದಂತೆ  ಭಕ್ತರ ಜಯಘೋಷ ಮುಗಿಲು ಮುಟ್ಟಿತು. ಇದನ್ನು ಕಣ್ತುಂಬಿಕೊಂಡ ನೂರಾರು ಭಕ್ತರು, ತೀರ್ಥ ಪ್ರೋಕ್ಷಣೆ ಮಾಡಿಸಿಕೊಳ್ಳಲು ಹಾಗೂ ಬಾಟಲಿ, ಬಿಂದಿಗೆಗಳಲ್ಲಿ ತೀರ್ಥ  ತುಂಬಿಸಿಕೊಳ್ಳಲು ಮುಗಿ ಬಿದ್ದರು.  ಸ್ನಾನ ಘಟ್ಟದಲ್ಲಿ ಅನೇಕ ಭಕ್ತರು ಸ್ನಾನ ಮಾಡಿದರು. 

ರಾಜ್ಯವಲ್ಲದೆ, ಕೇರಳ, ತಮಿಳುನಾಡು, ಮತ್ತಿತರ ಹೊರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು.ಜಿಲ್ಲಾಧಿಕಾರಿ ಅನ್ನೀಸ್ ಕೆ ಜಾಯ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿಪಿ ಅವರ ನೇತೃತ್ವದಲ್ಲಿ ತೀರ್ಥೋದ್ಬವಕ್ಕೆ ಸಕಲ ವ್ಯವಸ್ಥೆ ಕೈಗೊಳ್ಳಲಾಗಿತ್ತು.  ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com