ರಾಜ್ಯ
ಬೆಂಗಳೂರು ನಗರದಲ್ಲಿ ಉದ್ಯಮ ನಡೆಸುವುದು ಸುಲಭ ಎನ್ನುತ್ತದೆ ಸೂಚ್ಯಂಕ ಪಟ್ಟಿ
ಉದ್ಯಮ ನಡೆಸಲು ಸುಲಭವಾಗುವ ಭಾರತದ ನಗರಗಳ ಪಟ್ಟಿಯಲ್ಲಿ ದೆಹಲಿ, ಮುಂಬೈ ಮತ್ತು ಕೋಲ್ಕತ್ತಾ ನಗರಗಳ ಸಾಲಿಗೆ ಬೆಂಗಳೂರು ಕೂಡ ಸೇರಿದೆ.
ಬೆಂಗಳೂರು; ಉದ್ಯಮ ನಡೆಸಲು ಸುಲಭವಾಗುವ ಭಾರತದ ನಗರಗಳ ಪಟ್ಟಿಯಲ್ಲಿ ದೆಹಲಿ, ಮುಂಬೈ ಮತ್ತು ಕೋಲ್ಕತ್ತಾ ನಗರಗಳ ಸಾಲಿಗೆ ಬೆಂಗಳೂರು ಕೂಡ ಸೇರಿದೆ. ಇಲ್ಲಿ ಉದ್ಯಮ ನಡೆಸಲು ಬೆಂಬಲಿಸುವ ವ್ಯಾಪಾರ ಸೌಲಭ್ಯ ಕಾಯ್ದೆಯನ್ನು ತ್ವರಿತಗೊಳಿಸಲಾಗುವುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ ಭಾಸ್ಕರ್ ಹೇಳಿದ್ದಾರೆ.
ಮುಂದಿನ ವರ್ಷ ಮಾರ್ಚ್ ವೇಳೆಗೆ, ಕರ್ನಾಟಕ ನಾಗರಿಕರಿಗೆ ಸೇವೆಗಳ ಖಾತರಿ ಕಾಯಿದೆಯಡಿ ಕನಿಷ್ಠ 500 ಸೇವೆಗಳು ಆನ್ ಲೈನ್ ನಲ್ಲಿ ಸಿಗಲಿದೆ. ಪ್ರಸ್ತುತ 300 ಸೇವೆಗಳು ಆನ್ ಲೈನ್ ನಲ್ಲಿ ಸಿಗುತ್ತವೆ. ಉದ್ಯಮವನ್ನು ಸುಲಭವಾಗಿ ನಡೆಸಲು ಸಿಗುವ ಸೇವೆಗಳನ್ನು ಸಹ ಆನ್ ಲೈನ್ ನಲ್ಲಿ ದೊರಕುವಂತೆ ಮಾಡಲಾಗುವುದು ಎಂದು ತಿಳಿಸಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆ ಮತ್ತು ಕೈಗಾರಿಕೆ ಮತ್ತು ವ್ಯಾಪಾರ ಅಭಿವೃದ್ಧಿ ಇಲಾಖೆಗಳಡಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ