'ನಮ್ಮ ಮೆಟ್ರೊ'ಗೆ ಇಂದಿಗೆ 9 ವರ್ಷ: ಪ್ರಯಾಣಿಕರಿಗೆ ತರಲಿದೆ ಹೊಸ ಹರುಷ 

ನಮ್ಮ ಮೆಟ್ರೊಗೆ 9ರ ಹರೆಯ. ಬೆಂಗಳೂರು ನಗರದಲ್ಲಿ ಮೆಟ್ರೊ ರೈಲು ಸಂಚಾರ ಆರಂಭವಾಗಿ ಭಾನುವಾರಕ್ಕೆ 9 ವರ್ಷವಾಗಿದೆ. ಕಳೆದ ಸೆಪ್ಟೆಂಬರ್ ವರೆಗೆ ಇದರಲ್ಲಿ 41 ಕೋಟಿಯ 51 ಲಕ್ಷದ 45 ಸಾವಿರದ 053 ಪ್ರಯಾಣಿಕರು ಪ್ರಯಾಣಿಸಿದ್ದಾರೆ. 
ಮೆಟ್ರೊ ರೈಲಿನಲ್ಲಿ ಪ್ರಯಾಣಿಕರು
ಮೆಟ್ರೊ ರೈಲಿನಲ್ಲಿ ಪ್ರಯಾಣಿಕರು

ಬೆಂಗಳೂರು: ನಮ್ಮ ಮೆಟ್ರೊಗೆ 9ರ ಹರೆಯ. ಬೆಂಗಳೂರು ನಗರದಲ್ಲಿ ಮೆಟ್ರೊ ರೈಲು ಸಂಚಾರ ಆರಂಭವಾಗಿ ಭಾನುವಾರಕ್ಕೆ 9 ವರ್ಷವಾಗಿದೆ. ಕಳೆದ ಸೆಪ್ಟೆಂಬರ್ ವರೆಗೆ ಇದರಲ್ಲಿ 41 ಕೋಟಿಯ 51 ಲಕ್ಷದ 45 ಸಾವಿರದ 053 ಪ್ರಯಾಣಿಕರು ಪ್ರಯಾಣಿಸಿದ್ದಾರೆ. 


ಮೆಟ್ರೊ ಆರಂಭವಾಗಿದ್ದು 9 ವರ್ಷಗಳ ಹಿಂದೆ ಎಂ ಜಿ ರೋಡ್ ನಿಂದ ಭೈಯಪ್ಪನಹಳ್ಳಿಯವರೆಗೆ 6.7 ಕಿಲೋ ಮೀಟರ್ ಉದ್ದದಲ್ಲಿ ಸಂಚಾರ. ಇಂದು ಬೆಂಗಳೂರಿನ ಉತ್ತರ, ದಕ್ಷಿಣ, ಪಶ್ಚಿಮ ಭಾಗಗಳಲ್ಲಿ 42.3 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಮ್ಮ ಮೆಟ್ರೊ ಸಂಚಾರ ಮಾಡುತ್ತಿದೆ.


ಈ ಸಂದರ್ಭದಲ್ಲಿ ಮಾತನಾಡಿರುವ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇತ್, ಬಿಎಂಆರ್ ಸಿಎಲ್ ಬೆಂಗಳೂರಿನಲ್ಲಿ ಉತ್ತಮ ದಕ್ಷತೆಯ ಸ್ಥಿರ ಸಂಚಾರ ಮುಂದುವರಿಸಲು ಬದ್ಧವಾಗಿದೆ. 2024-25ಕ್ಕೆ ಮೆಟ್ರೊ ಸಂಚಾರ ವ್ಯಾಪ್ತಿಯನ್ನು 170 ಕಿಲೋ ಮೀಟರ್ ನಿಂದ 220 ಕಿಲೋ ಮೀಟರ್ ಗೆ ವಿಸ್ತರಿಸುವ ಗುರಿ ಹೊಂದಿದ್ದೇವೆ. ನಗರದಲ್ಲಿ ಸಂಚಾರ ದಟ್ಟಣೆಯನ್ನು ಮತ್ತು ವಾಯುಮಾಲಿನ್ಯ ನಿಯಂತ್ರಣ ಮಟ್ಟವನ್ನು ಕಡಿಮೆ ಮಾಡಿದೆ ಎಂದರು.


ಪ್ರತಿದಿನ 5 ಲಕ್ಷ ಪ್ರಯಾಣಿಕರ ಗುರಿಯನ್ನು ಹೊಂದಲಾಗಿದ್ದು, ಇಂದು ಪ್ರತಿದಿನ ಸರಾಸರಿ 4 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com