ಗದಗದಲ್ಲಿ ಪ್ರವಾಹ: ಸರ್ಕಾರ ನಿರ್ಮಿತ ಮನೆಗಳಲ್ಲಿ ಬಿರುಕು, ಜೀವಭಯದಲ್ಲಿ ಸಂತ್ರಸ್ಥರ ಬದುಕು

ಸತತ ಮಳೆಯ ಕಾರಣ ಗದಗದ ಹಲವಾರು ಹಳ್ಳಿಗಳ ಜನ ಭೀತರಾಗಿದ್ದಾರೆ. ರಾಜ್ಯ ಸರ್ಕಾರದಿಂದ ಮಂಜೂರಾಗಿ ನಿರ್ಮಾಣವಾದ ಮನೆಗಳ ಗೋಡೆಗಳು ಮಳೆಯಿಂದ ತೇವವಾಗಿರುವುದಲ್ಲದೆ ಅಲ್ಲಲ್ಲಿ ಬಿರುಕುಗಳು ಕಾಣಿಸಿಕೊಂಡಿದೆ.. ಇದರಿಂದ ನಿವಾಸಿಗಳು ಜೀವಭಯದಿಂದ ದಿನಗಳೆಯುವಂತಾಗಿದೆ.
ಗದಗದಲ್ಲಿ ಪ್ರವಾಹ: ಸರ್ಕಾರ ನಿರ್ಮಿತ ಮನೆಗಳಲ್ಲಿ ಬಿರುಕು
ಗದಗದಲ್ಲಿ ಪ್ರವಾಹ: ಸರ್ಕಾರ ನಿರ್ಮಿತ ಮನೆಗಳಲ್ಲಿ ಬಿರುಕು
Updated on

ಗದಗ: ಸತತ ಮಳೆಯ ಕಾರಣ ಗದಗದ ಹಲವಾರು ಹಳ್ಳಿಗಳ ಜನ ಭೀತರಾಗಿದ್ದಾರೆ. ರಾಜ್ಯ ಸರ್ಕಾರದಿಂದ ಮಂಜೂರಾಗಿ ನಿರ್ಮಾಣವಾದ ಮನೆಗಳ ಗೋಡೆಗಳು ಮಳೆಯಿಂದ ತೇವವಾಗಿರುವುದಲ್ಲದೆ ಅಲ್ಲಲ್ಲಿ ಬಿರುಕುಗಳು ಕಾಣಿಸಿಕೊಂಡಿದೆ.. ಇದರಿಂದ ನಿವಾಸಿಗಳು ಜೀವಭಯದಿಂದ ದಿನಗಳೆಯುವಂತಾಗಿದೆ.

ಮಳೆಯ ಕಾರಣ ಮನೆಗಳಲ್ಲಿ ಅಲ್ಲಲ್ಲಿ ದೊಡ್ಡ ಬಿರುಕುಗಳು ಉಂಟಾಗಿದ್ದು ಮನೆಯೊಳಗೆ ನೀರು ಸಂಗ್ರಹಆಗುತ್ತಿದೆ.

"ನಾವು ಪ್ರವಾಹದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಸರ್ಕಾರ ನಮ್ಮನ್ನು ನಿರ್ಲಕ್ಷಿಸುತ್ತಿದೆ ಮತ್ತು ನಮಗೆ ಯಾವುದೇ ಸೌಲಭ್ಯವನ್ನು ಒದಗಿಸುತ್ತಿಲ್ಲ. ನಾವು ನಮ್ಮ ಮನೆಯನ್ನು ಕಳೆದುಕೊಂಡಿದ್ದೇವೆ. ನನಗೆ ಇಬ್ಬರು ಮಕ್ಕಳಿದ್ದಾರೆ. ನಮಗೇನು ಮಾಡಲೂ ತೋಚುತ್ತಿಲ್ಲ. ಜೀವನ ಕಠಿಣವಾಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ನಾವು ಬದುಕುವುದು ಅಸಾಧ್ಯ."ಪ್ರವಾಹ ಪೀಡಿತ ಪ್ರದೇಶದ ನಿವಾಸಿ ಮಲ್ಲವ್ವ ಹೇಳಿದ್ದಾರೆ.

ಅಲ್ಲದೆ ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಸಚಿವ ಸಿಸಿ ಪಾಟೀಲ್ ನಮ್ಮ ಗ್ರಾಮಗಳಿಗೆ ಭೇಟಿ ನೀಡಿಲ್ಲ ಎಂದು ಸಂತ್ರಸ್ಥರು ಎಎನ್‌ಐಗೆ ತ್ಳಿಸಿದ್ದಾರೆ.

 ಕಳೆದ ಕೆಲವು ವಾರಗಳಿಂದ ಈ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು ಯಾದಗಿರಿ ನಾರಾಯಣಪುರ ಛಾಯಾ ಭಾಗವತಿ ದೇವಸ್ಥಾನವೂ ಭಾಗಶಃ ನೀರಿನಲ್ಲಿ ಮುಳುಗಿದೆ. ಪವಿತ್ರ ಮಂದಿರದ ಆವರಣದೊಳಗೆ ಮೊಣಕಾಲು ಮಟ್ಟದ ನೀರು ನಿಂತಿದೆ.

ವಿಶೇಷವೆಂದರೆ, ರಾಜ್ಯದಲ್ಲಿ ಪ್ರವಾಹದಿಂದ ಸತ್ತವರ ಸಂಖ್ಯೆ ಬುಧವಾರ 13 ಕ್ಕೆ ತಲುಪಿದ್ದು, ಅಕ್ಟೋಬರ್ 18 ರಿಂದ ಇಂದಿನವರೆಗೆ ರಾಜ್ಯವನ್ನು ಬಿಟ್ಟು ಬಿಡದೆ ಕಾಡುತ್ತಿರುವ ಮಳೆ ಮತ್ತು ಪ್ರವಾಹದಿಂದ ಉಂಟಾದ ವಿನಾಶದ ಪ್ರಮಾಣ ಇನ್ನಷ್ಟೇ ಅರಿವಾಗಬೇಕಿದೆ.ಕಳೆದ ಆರು ದಿನಗಳಲ್ಲಿ ಉತ್ತರ ಕರ್ನಾಟಕದ ಈ ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ಒಟ್ಟು 150 ಜಾನುವಾರುಗಳು ಸಾವನ್ನಪ್ಪಿವೆ ಮತ್ತು 10,000 ಕ್ಕೂ ಹೆಚ್ಚು ಮನೆಗಳುಹಾನಿಗೊಳಗಾಗಿವೆ ಎಂದು ಸರ್ಕಾರಿ ಅಂಕಿ ಅಂಶಗಳು ಹೇಳೀದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ರಾಜ್ಯ ಸರ್ಕಾರ ಪರಿಹಾರ ಶಿಬಿರಗಳನ್ನು ಸ್ಥಾಪಿಸಿದೆ.ಬಾಗಲಕೋಟೆಯಲ್ಲಿ ಮಾತ್ರವೇ ನೋಡಿದರೂ  ಏಳು ಪರಿಹಾರ ಶಿಬಿರಗಳಲ್ಲಿ 3,734 ಜನರಿದ್ದಾರೆ. . ಅಂಕಿಅಂಶಗಳ ಪ್ರಕಾರ, 28 ಪರಿಹಾರ ಶಿಬಿರಗಳಲ್ಲಿ ಕರ್ನಾಟಕದಾದ್ಯಂತ ಒಟ್ಟು 7,220 ಜನರನ್ನು ಪುನರ್ವಸತಿ ಕೇಂದ್ರಗಳಲ್ಲಿರಿಸಲಾಗಿದೆ. ಇದಲ್ಲದೆ, ಬುಧವಾರ, ಪ್ರವಾಹ ಪೀಡಿತ ರಾಯಚೂರು ಜಿಲ್ಲೆಯಲ್ಲಿ ನಾಲ್ಕು ಹೆಚ್ಚುವರಿ General of Public Information Indian Army (ADGPI) ತಂಡಗಳನ್ನು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com