ಗುಂಡ್ಲುಪೇಟೆ: ರೈತರನ್ನು ಗಾಯಗೊಳಿಸಿದ್ದ ಪುಂಡಾನೆ ಸೆರೆ

ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಶಿವಪುರ ಹಾಗೂ ಹಂಗಳ ಸೇರಿದಂತೆ ಸುತ್ತಮುತ್ತಲ ಗ್ರಾಮದಲ್ಲಿ ಮೂರು ಜಾನುವಾರಗಳನ್ನು ಬಲಿ ತೆಗೆದುಕೊಂಡು ಇಬ್ಬರು ರೈತರನ್ನು ಗಾಯಗೊಳಿಸಿದ ಪುಂಡಾನೆಯನ್ನು ಸೆರೆಹಿಡಿಯಲಾಗಿದೆ.
ಸೆರೆಯಾದ ಪುಂಡಾನೆ
ಸೆರೆಯಾದ ಪುಂಡಾನೆ

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಶಿವಪುರ ಹಾಗೂ ಹಂಗಳ ಸೇರಿದಂತೆ ಸುತ್ತಮುತ್ತಲ ಗ್ರಾಮದಲ್ಲಿ ಮೂರು ಜಾನುವಾರಗಳನ್ನು ಬಲಿ ತೆಗೆದುಕೊಂಡು ಇಬ್ಬರು ರೈತರನ್ನು ಗಾಯಗೊಳಿಸಿದ ಪುಂಡಾನೆಯನ್ನು ಸೆರೆಹಿಡಿಯಲಾಗಿದೆ.

ದಸರಾ ಆನೆ ಯಾದ ಅಭಿಮನ್ಯು ಹಾಗೂ ಇನ್ನಿತರ ಆನೆಗಳ ಸಹಾಯದಿಂದ ಕೊನೆಗೂ ಗುಂಡ್ಲುಪೇಟೆ ತಾಲ್ಲೂಕಿನ ಬನ್ನಿತಾಳಪುರ ಹಾಗೂ ಕಲ್ಲಟ್ಟಿ ಗ್ರಾಮದ ನಡುವೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಜನರಿಗೆ ಉಪಟಳ ನೀಡುತ್ತಿದ್ದ ಈ ಆನೆ ತಮಿಳುನಾಡಿನಿಂದ ಕರ್ನಾಟಕ ಅರಣ್ಯ ಪ್ರದೇಶಕ್ಕೆ ಬಂದಿತ್ತು. ಕಳೆದ ಮೂರು ದಿನಗಳಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದರು. ಈಗ ಪುಂಡಾನೆ ಸೆರೆಯಾಗಿರುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. 

ಸೆರೆಯಾದ ಪುಂಡಾನೆಯನ್ನು ಮತ್ತೊಂದು ಆನೆ ಎಳೆದೊಯ್ಯುತ್ತಿರುವುದು.
ಸೆರೆಯಾದ ಪುಂಡಾನೆಯನ್ನು ಮತ್ತೊಂದು ಆನೆ ಎಳೆದೊಯ್ಯುತ್ತಿರುವುದು.

ಸೆರೆ ಹಿಡಿದ ಪುಂಡಾನೆಯನ್ನು ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದ್ದು, ಅದನ್ನು ಪಳಗಿಸಲಾಗುವುದೆಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದ‍ಾರೆ.

ವರದಿ: ಗೂಳಿಪುರ ನಂದೀಶ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com