ಇಸ್ಲಾಂನಲ್ಲಿ ವ್ಯಕ್ತಿಪೂಜೆಗೆ ನಿಷೇಧವಿದೆ, ಟಿಪ್ಪು ಜಯಂತಿ ರದ್ದು ಸ್ವಾಗತಾರ್ಹ: ಅಬ್ದುಲ್ ಅಜೀಂ

ಇಸ್ಲಾಂ ಧರ್ಮದಲ್ಲಿ ವ್ಯಕ್ತಿ ಪೂಜೆಗೆ ಅವಕಾಶವಿಲ್ಲ,ಹೀಗಾಗಿ ಹಿಂದಿನ ಸರ್ಕಾರ ಕೈಗೊಂಡಿದ್ದ ಟಿಪ್ಪು ಜಯಂತಿ ಆಚರಣೆ ರದ್ದುಪಡಿಸಿರುವುದು ಸರಿಯಾಗ ಕ್ರಮ ಎಂದು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷಅಬ್ದುಲ್ ಅಜೀಂ ಸಮರ್ಥಿಸಿಕೊಂಡಿ ದ್ದಾರೆ.
ಇಸ್ಲಾಂನಲ್ಲಿ ವ್ಯಕ್ತಿಪೂಜೆಗೆ ನಿಷೇಧವಿದೆ, ಟಿಪ್ಪು ಜಯಂತಿ ರದ್ದು ಸ್ವಾಗತಾರ್ಹ: ಅಬ್ದುಲ್ ಅಜೀಂ
ಇಸ್ಲಾಂನಲ್ಲಿ ವ್ಯಕ್ತಿಪೂಜೆಗೆ ನಿಷೇಧವಿದೆ, ಟಿಪ್ಪು ಜಯಂತಿ ರದ್ದು ಸ್ವಾಗತಾರ್ಹ: ಅಬ್ದುಲ್ ಅಜೀಂ

ಕಲಬುರಗಿ :ಇಸ್ಲಾಂ ಧರ್ಮದಲ್ಲಿ ವ್ಯಕ್ತಿ ಪೂಜೆಗೆ ಅವಕಾಶವಿಲ್ಲ,ಹೀಗಾಗಿ ಹಿಂದಿನ ಸರ್ಕಾರ ಕೈಗೊಂಡಿದ್ದ ಟಿಪ್ಪು ಜಯಂತಿ ಆಚರಣೆ ರದ್ದುಪಡಿಸಿರುವುದು ಸರಿಯಾಗ ಕ್ರಮ ಎಂದು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷಅಬ್ದುಲ್ ಅಜೀಂ ಸಮರ್ಥಿಸಿಕೊಂಡಿ ದ್ದಾರೆ.

ಅವರು ಕಲಬುರಗಿಯ ಐವಾನ್-ಎ-ಶಾಹಿ ಅತಿಥಿಗೃಹ ದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಟಿಪ್ಪು ಜಯಂತಿ ಅಚರಣೆಯನ್ನು ಇಂದಿನ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ರದ್ದುಪಡಿಸಿರುವುದು ಸರಿಯಾದ ನಿರ್ಧಾರವಾಗಿದ್ದು ಮುಖ್ಯಮಂತ್ರಿ ಅವರನ್ನು ಅಭಿನಂದಿಸುವುದಾಗಿ ಅವರು ಹೇಳಿದರು.

ಯಾರ ಮಾತು ಕೇಳಿ ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಣೆ ಜಾರಿಗೊಳಿಸಿದರೋ ಗೊತ್ತಿಲ್ಲ, ಯಡಿಯೂರಪ್ಪ ಸರ್ಕಾರ ಜಯಂತಿ ರದ್ದು ಮಾಡಿ ಒಳಿತನ್ನೇ ಮಾಡಿದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಪಠ್ಯಕ್ರಮದಲ್ಲಿ ಟಿಪ್ಪು ಇತಿಹಾಸವನ್ನು ಕೈಬಿಡುವ ಕುರಿತು ಪ್ರತಿಕ್ರಯಿಸಿದ ಅಜೀಂ ಇದರ ಕುರಿತಂತೆ ನನ್ನ ಸಹಮತವಿಲ್ಲ. ಈ ಸಂಬಂಧ ಣಾನು ಮುಖ್ಯಮಂತ್ರಿಗಳೊಡನೆ ಚರ್ಚಿಸುತ್ತೇನೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com