ನೋ ಶೇವ್ ನವೆಂಬರ್: ಡಿಕೆಶಿ ಪೆಪ್ಪರ್-ಸಾಲ್ಟ್ ಟ್ರೆಂಡಿ ಗಡ್ಡಕ್ಕೆ ಅಭಿಮಾನಿಗಳು ಫಿದಾ!
ಬೆಂಗಳೂರು: ತಿಹಾರ್ ಜೈಲಿನಿಂದ ಬಿಡುಗಡೆಯಾಗಿರುವ ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಅವರ ಹೊಸ ಲುಕ್ ಭಾರೀ ಟ್ರೆಂಡ್ ಸೃಷ್ಟಿಸುತ್ತಿದೆ.
ಬಿಳಿ ಬಣ್ಣದ ಬಟ್ಟೆ ಧರಿಸಿದ್ದ ಶಿವಕುಮಾರ್ ಗಡ್ಡ ಶೇವಿಂಗ್ ಮಾಡಿರಲಿಲ್ಲ, ಹೀಗಾಗಿ ಅವರ ಮುಖದಲ್ಲಿ ಕಪ್ಪು ಬಿಳಿ ಕೂದಲು ಯಥೇಚ್ಚವಾಗಿ ಬೆಳೆದು ಪೆಪ್ಪರ್ -ಸಾಲ್ಟ್ ಬಿಯರ್ಡ್ ಎಂಬ ಟ್ರೆಂಡ್ ಸೃಷ್ಟಿಯಾಗುತ್ತಿದೆ.
ಡಿಕೆಶಿ ಹೊಸ ಲಕ್ ವಿಭಿನ್ನವಾಗಿ ಕಾಣುತ್ತಿದೆ, ತಿಹಾರ್ ಜೈಲಿನಲ್ಲಿದ್ದಾಗ ರಾಹುಲ್ ಗಾಂಧಿಗೆ ಡಿಕೆಶಿ ಗಡ್ಡ ಇಷ್ಟವಾಯಿತಂತೆ, ಇದನ್ನು ಹೀಗೆ ಮುಂದುವರಿಸಿ ಎಂದು ಹೇಳಿದರಂತೆ, ಹೀಗಾಗಿ ಸದ್ಯದಲ್ಲಿ ಯಾವುದೇ ಕಾರಣಕ್ಕೂ ಡಿಕೆಶಿ ಗಡ್ಡಕ್ಕೆ ಶೇವಿಂಗ್ ಬ್ಲೇಡ್ ಬೀಳುವುದಿಲ್ಲ.ಇದೇ ಲುಕ್ ಮತ್ತಷ್ಟು ದಿನ ಮುಂದುವರಿಯಲಿದೆ.
ಜಾಮೀನಿನ ಮೇಲೆ ಬಿಡುಗಡೆಯಾದ ಸುಮಾರು ಒಂದು ವಾರದ ನಂತರ ಡಿಕೆಶಿ ಗಡ್ಡದ ರಹಸ್ಯ ಬಹಿರಂಗವಾಗಿದೆ. 1989ರಿಂದ ಮೊಟ್ಟ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ದಿನದಿಂದ ಜೈಲಿಗೆ ಹೋಗುವವರಗೊ ಶಿವಕುಮಾರ್ ಶೇವಿಂಗ್ ಮಾಡದೇ ಇರುತ್ತಿರಲಿಲ್ಲ. ಇದೊಂದು ಸಡನ್ ಬೆಳವಣಿಗೆಯಾಗಿದೆ.
ಶಿವಕುಮಾರ್ ಜೈಲಿನಲ್ಲಿದ್ದಾಗ ಹಲವು ಮಂದಿ ಡಿಕೆಶಿ ಗಡ್ಡದ ಬಗ್ಗೆ ಮಾತನಾಡಿದ್ದಾರೆ, ಭೇಟಿಗೆ ಬಂದವರ ಬಳಿ ತಮಗೆ ಗಡ್ಡ ಒಪ್ಪುತ್ತದೆಯೇ ಎಂದು ಕೇಳಿ ಅವರು ಒಪ್ಪಿದ ನಂತರ ಗಡ್ಡ ಮುಂದುವರಿಸಿದ್ದಾರೆ ಎಂದು ಹೇಳಲಾಗುತ್ತಿದೆ.,ಬುಧವಾರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಡಿಕೆಶಿ ಮರು ಪ್ರಶ್ನಿಸಿದ್ದಾರೆ, ಗಡ್ಡ ನನಗೆ ಚೆನ್ನಾಗಿ ಕಾಣುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಡಿ.ಕೆ ಶಿವಕುಮಾರ್ ಅವರು ಇದೇ ಮೊದಲ ಬಾರಿಗೆ ಈ ರೀತಿಯಲ್ಲಿ ಗಡ್ಡ ಬಿಟ್ಟಿದ್ದಾರೆ. ಸದಾ ಶೇವ್ ಮಾಡಿಕೊಂಡು ಇರುತ್ತಿದ್ದ ಡಿಕೆಶಿ ಅವರನ್ನು ಈ ಹೊಸ ಲುಕ್‍ನಲ್ಲಿ ನೋಡಿದ ಅವರ ಅಭಿಮಾನಿಗಳು ಅಣ್ಣ ನಿಮಗೆ ಗಡ್ಡ ಚೆನ್ನಾಗಿ ಕಾಣುತ್ತದೆ, ಗಡ್ಡ ತೆಗೆಯಬೇಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ