
ಬೆಂಗಳೂರು: ರೀಟಾ-ರತನ್ ದಂಪತಿಗಳು ತಾವು ಮಗುವಿನ ತಾಯಿ-ತಂದೆಗಳಾಗುತ್ತಿರುವುದಕ್ಕೆ ಅತ್ಯಂತ ಸಂತಸದಿಂದಿದ್ದರು. ರೀಟಾ ಮಗುವಿಗೆ ಜನ್ಮ ನೀಡಿದ ವೇಳೆ ರತನ್ ಗೆ ಆಅ ಆನಂದದ ಪರಿವಿಲ್ಲ. ಆದರೆ ಮಗು ಹುಟ್ಟಿದ ಒಂದು ದಿನದ ಬಳಿಕ ಅದರ ಆರೋಗ್ಯದಲ್ಲಿ ಏರುಪೇರಾಗಿದೆ. ಆಗ ಮಾತ್ರ ದಂಪತಿಗಳು ನವಜಾತ ಶಿಶುವಿನ ತೀವ್ರ ನಿಗಾ ಘಟಕ (ಎನ್‌ಐಸಿಯು) ಘಟಕದಲ್ಲಿ ಹಾಸಿಗೆಯನ್ನು ಹುಡುಕುತ್ತಾ ನಗರದ ಒಂದು ಸರ್ಕಾರಿ ಆಸ್ಪತ್ರೆಯಿಂದ ಇನ್ನೊಂದಕ್ಕೆ ಅಲೆದು ಹೈರಾಣಾಗಬೇಕಾಯಿತು. ಕಡೆಗೆ ಅವರು ಯಲಹಂಕದ ಖಾಸಗಿ ಆಸ್ಪತ್ರೆಗೆ ತಮ್ಮ ಮಗುವನ್ನು ಸೇರಿಸಬೇಕಾಗಿ ಬಂದಿದೆ.
ನವಜಾತ ಶಿಶುವಿನ ಆರೈಕೆ ಪಡೆಯುವ ಭರವಸೆಯಿಂದ ಪ್ರತಿವರ್ಷ ಸುಮಾರು 10,500 ಶಿಶುಗಳನ್ನು ನಗರದ ಆಸ್ಪತ್ರೆಗಳಿಗೆ ಕರೆತರಲಾಗುತ್ತದೆ. ದುರದೃಷ್ಟವಶಾತ್, ನಗರದ ಆಸ್ಪತ್ರೆಗಳಲ್ಲಿ ಕೇವಲ 150 ನವಜಾತ ಶಿಶುಗಳ ಐಸಿಯು (ಎನ್‌ಐಸಿಯು) ಹಾಸಿಗೆಗಳು ಮಾತ್ರವೇ ಇದೆ. ಆ ಕಾರಣ ರಿಸುಮಾರು 8,000 ಶಿಶುಗಳನ್ನು ಚಿಕಿತ್ಸೆಯಿಲ್ಲದೆ ವಾಪಸ್ ಕಳುಹಿಸಲಾಗುತ್ತಿದೆ.ಇನ್ನೂ ಕೆಲವು ಪ್ರಸಂಗಗಳಲ್ಲಿ ಕೆಲವರು ಹಾಸಿಗೆ, ವೆಂಟಿಲೇಟರ್ ಅಥವಾ ಕೆಲವೊಮ್ಮೆ ಆಂಬುಲೆನ್ಸ್‌ಗಾಗಿ ಕಾಯುತ್ತಿರುವಾಗಲೇ ಮಗು ಅನಾರೋಗ್ಯದಿಂಡ ಮೃತಪಟ್ಟಿರುವ ಉದಾಹರಣೆಗಳಿದೆ.
ಪ್ರಮೀಳಾ ಬಿ. 20 ವರ್ಷದ ತಾಯಿ ಮತ್ತು ಅವರ ಪೌರಕರ್ಮಿಕ ಪತಿ ಉದಾಹರಣೆ ನೋಡುವುದಾದಲ್ಲಿ ತಮ್ಮ ಮಗುವಿಗೆ ಕೆಮ್ಮು ಮತ್ತು ವಾಂತಿ ಪ್ರಾರಂಭವಾಗಿದೆ ಎಂದು ಒಂದು ತಿಂಗಳ ಮಗುವನ್ನು ವಾಣಿ ವಿಲಾಸ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಮಗುವಿಗೆ ಅಲರ್ಜಿ ಆಗಿರುವುದಾಗಿ ಹೇಳಿದ ವೈದ್ಯರು ಅದಕ್ಕಾಗಿ ಚಿಕಿತ್ಸೆ ನೀಡಿದ್ದಾರೆ.ಮರುದಿನ, ಮಗುವಿಗೆ ತೀವ್ರವಾದ ಆರೋಗ್ಯ ಸಮಸ್ಯೆಗಳು ತಲೆದೋರಿದೆ. ಅದಾಗ್ಯೂ 12 ಗಂಟೆಗಳ ಕಾಯುವಿಕೆಯ ನಂತರ ಎನ್‌ಐಸಿಯುಗೆ ಕರೆದೊಯ್ಯಲಾಯಿತು.
ಬೆಂಗಳೂರಿನಲ್ಲಿ, ಕೇವಲ ನಾಲ್ಕು ಆಸ್ಪತ್ರೆಗಳು ಎನ್‌ಐಸಿಯು ಸಹಿತ ಆರೈಕೆ ಹೊಂದಿದ್ದರೆ ಇತರ ಮೂರು ಆಸ್ಪತ್ರೆಗಳು ಎಸ್‌ಎನ್‌ಸಿಯು ಎಂದು ಕರೆಯಲ್ಪಡುವ ಲೆವೆಲ್ -2 ಚಿಕಿತ್ಸೆಯನ್ನು ಹೊಂದಿವೆ. ಆದಾಗ್ಯೂ, ವೈದ್ಯಕೀಯ ತಜ್ಞರ ಪ್ರಕಾರ, ಪ್ರತಿದಿನ 300 ಕ್ಕೂ ಹೆಚ್ಚು ರೋಗಿಗಳ ಒಳಹರಿವು ಇರುವುದರಿಂದ ಇಡೀ ನಗರದಲ್ಲಿ ಕೇವಲ 150 ಹಾಸಿಗೆಗಳು ಮಾತ್ರ ಲಭ್ಯವಿವೆ. ಪತ್ರಿಕೆಗೆ ಲಭ್ಯವಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿಅಂಶಗಳು ಕಳೆದ ಒಂದು ವರ್ಷದಲ್ಲಿ (2018-19) 64,828 ಶಿಶುಗಳನ್ನು ರಾಜ್ಯ ವಿಶೇಷ ನವಜಾತ ಆರೈಕೆ ಘಟಕಗಳು (ಎಸ್‌ಎನ್‌ಸಿಯು) ಮತ್ತು ಎನ್‌ಐಸಿಯುಗಳಲ್ಲಿ ದಾಖಲಿಸಲಾಗಿದೆ, ಅದರಲ್ಲಿ 49,673 ಶಿಶುಗಳು ಉಳಿದುಕೊಂಡಿವೆ. ಇದರಲ್ಲಿ ಕೆಲವು ಕಡೆ ಆಸ್ಪತ್ರೆಯ ಸಿಬ್ಬಂದಿ ತೀವ್ರ ನಿಗಾ ಘಟಕಗಳಲ್ಲಿ ಹಾಸಿಗೆಗಳನ್ನು ಹಂಚಿಕೊಳ್ಳಲು ಒತ್ತಾಯಿಸುವ ದಿನಗಳೂ ಇವೆ.
ಅತಿ ಹೆಚ್ಚು ರೋಗಿಗಳು ಭೇಟಿ ಕೊಡುವ ವಾಣಿ ವಿಇಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಗೀತಾ ಶಿವಮೂರ್ತಿ, “ಹೆರಿಗೆ ಮತ್ತು ವಿಶೇಷ ನವಜಾತ ಶಿಶುಗಳ ಆರೈಕೆಗಾಗಿ ನಮ್ಮನ್ನು ಉಲ್ಲೇಖಿಸಿರುವ ಕೆಲವು ಸಂಕೀರ್ಣ ಪ್ರಕರಣಗಳನ್ನು ನಾವು ಪಡೆಯುತ್ತೇವೆ. ಹಾಸಿಗೆಗಳನ್ನು ಹಂಚಿಕೊಳ್ಳುವುದು ಅನೇಕ ರೋಗಿಗಳಿಗೆ ಕೊನೆಯ ಉಪಾಯವಾಗಿದೆ ಮತ್ತು ಹಾಗಾಗದಂತೆ ನಾವು ಸಾಕಷ್ಟು ಮುಂಜಾಗ್ರತೆ ವಹಿಸುತ್ತೇವೆ" ಆದಾಗ್ಯೂ, ಈ ಘಟಕವು ಕೇವಲ 48 ಹಾಸಿಗೆಗಳನ್ನು ಹೊಂದಿದೆ ಮತ್ತು ದಿನಕ್ಕೆ ಕನಿಷ್ಠ 15 ರಿಂದ 20 ರೋಗಿಗಳನ್ನು ಸಂಪರ್ಕಿಸುತ್ತದೆ. ಆಸ್ಪತ್ರೆಯು ತಿಂಗಳಿಗೆ ಸುಮಾರು 1,800 ಶಿಶುಗಳ ಆರೈಕೆ ಮಾಡುತ್ತಿದೆ. ಅದರಲ್ಲಿ 30 ಪ್ರತಿಶತದಷ್ಟು, ಭ್ರೂಣದ ತೊಂದರೆ ಸಿಂಡ್ರೋಮ್, ಅಕಾಲಿಕ ಹೆರಿಗೆ, ಅಪೌಷ್ಟಿಕ ತಾಯಂದಿರು, ಹದಿಹರೆಯದ ಹೆರಿಗೆ ಮತ್ತು ಇತರ ಸಂಕೀರ್ಣ ಪ್ರಕರಣಗಳಿಂದಾಗಿ ತೀವ್ರ ನಿಗಾ ಅಗತ್ಯವಿರುತ್ತದೆ.
ಪತ್ರಿಕೆಯ ಬಳಿ ಲಭ್ಯವಿರುವ ಜುಲೈ ತಿಂಗಳ ಅಂಕಿ ಸಂಖ್ಯೆಗಳಂತೆ ವಾಣಿ ವಿಲಾಸ ಆಸ್ಪತ್ರೆಯಲ್ಲಿ 500 ನವಜಾತ ಶಿಶುಗಳನ್ನು ಆರೈಕೆಗಾಗಿ ಸೇರಿಸಿಕೊಳ್ಳಲಾಗಿದ್ದು ಇವುಗಳಲ್ಲಿ 49 ಮಗು ಸಾವನ್ನಪ್ಪಿದೆ.
ಈ ಎಲ್ಲಾ ಆಸ್ಪತ್ರೆಗಳಲ್ಲಿ ಎನ್‌ಐಸಿಯುಗೆ ಹೋಗುವ ಕಾರಿಡಾರ್ ನಲ್ಲಿ ಚಿಂತೆಗೀಡಾದ ತಾಯಂದಿರು ತಮ್ಮ ಶಿಶುಗಳ ಬಗ್ಗೆ ಕೇಳಲು ಕುತೂಹಲದಿಂದ ಕಾಯುತ್ತಿದ್ದಾರೆ. "ನನ್ನ ಒಂದು ತಿಂಗಳ ಮಗು ತುಂಬಾ ಕೆಟ್ಟದಾಗಿ ಕೆಮ್ಮುತ್ತಿತ್ತು ಮತ್ತು ಹಾಲನ್ನು ವಾಂತಿ ಮಾಡುತ್ತಿತ್ತು, ನಾನು ಚಿಂತೆಗೀಡಾಗಿ ಆಸ್ಪತ್ರೆಗೆ ಧಾವಿಸಿದೆ. ವೈದ್ಯರ ಪ್ರಕಾರ ಮಗು ಸಾಮಾನ್ಯ ಆರೋಗ್ಯದಿಂದ ಕೂಡಿದೆ.ಮರುದಿನ ಬೆಳಿಗ್ಗೆ, ಅವರು ಮಗುವನ್ನು ಆಸ್ಪತ್ರೆಗೆ ಸೇರಿಸಿಕೊಂಡಿದ್ದಾರೆ. ಆದರೆ ಅದೇ ದಿನ ಮಧ್ಯಾಹ್ನದ ಹೊತ್ತಿಗೆ ನನ್ನ ಮಗು ಬದುಕುಳಿಯುವುದಿಲ್ಲ ಎಂದು ಹೇಳಿದ್ದರು ”ಎಂದು ನೆಲಮಂಗಲದ ಮಹಿಳೆಯೊಬ್ಬಳು ತನ್ನ ದುಃಖವನ್ನು ತೋಡಿಕೊಂಡಿದ್ದಾಳೆ.
Advertisement