
ಮೈಸೂರು: ಮೈಸೂರು ನಗರ ಹೊರ ವಲಯದ ವರುಣಾ ನಾಲೆಯಲ್ಲಿ ಇಬ್ಬರು ಪುರುಷರು ಹಾಗೂ ಓರ್ವ ಯುವತಿಯ ಮೃತ ದೇಹಗಳು ಪತ್ತೆಯಾಗಿದೆ.
ಸುಮಾರು 55 ವರ್ಷದ, 22 ವರ್ಷದ ಇಬ್ಬರು ಪುರುಷರ ಹಾಗೂ ಸುಮಾರು 20 ವರ್ಷದ ಯುವತಿಯ ಮೃತ ದೇಹಗಳು ನಾಲೆಯಲ್ಲಿ ತೆಲಿಕೊಂಡು ಬಂದಿವೆ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸೋಮವಾರ ಸಂಜೆ ನಾಲೆಯಲ್ಲಿ ಮೃತದೇಹಗಳು ತೇಲುತ್ತಿರುವುದನ್ನು ಕಂಡಕೂಡಲೇ ಸ್ಥಳೀಯ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತ ದೇಹಗಳ ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್. ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.
Advertisement