ಇದು ಯಶಸ್ಸಿನ ಮುಂದೂಡಿಕೆ ಮಾತ್ರ, ನಿಮ್ಮೊಡನೆ ನಾವಿದ್ದೇವೆ: ಇಸ್ರೋ ವಿಜ್ಞಾನಿಗಳ ಬೆನ್ನು ತಟ್ಟಿದ ಯಡಿಯೂರಪ್ಪ

ಭಾರತೀಯ ಬಾಹ್ಯಾಕಾಶ ಸಂಸೊಧನಾ ಸಂಸ್ಥೆ (ಇಸ್ರೋ)  ಚಂದ್ರಯಾನ -2 ಭಾಗವಾದ ವಿಕ್ರಂ ಲ್ಯಾಂಡರ್ ಕಡೇ ಕ್ಷಣದಲ್ಲಿ ಸಂವಹನವನ್ನು ಕಳೆದುಕೊಂಡಿದೆ. ಇದರಿಂದಾಗಿ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಬೇಕಾಗಿದ್ದ ವಿಕ್ರಂ ಸಾಫ್ಟ್ ಲ್ಯಾಂಡಿಂಗ್ ಆಗುವಲ್ಲಿ ತೊಡಕಾಗಿದ್ದು ವಿಜ್ಞಾನಿಗಳಿಗೆ ಭಾರೀ ನಿರಾಶೆಯಾಗಿದೆ. 
ಇಸ್ರೋ ವಿಜ್ಞಾನಿಗಳ ಬೆನ್ನು ತಟ್ಟಿದ ಯಡಿಯೂರಪ್ಪ
ಇಸ್ರೋ ವಿಜ್ಞಾನಿಗಳ ಬೆನ್ನು ತಟ್ಟಿದ ಯಡಿಯೂರಪ್ಪ

ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯನಿಂದಲೂ ಪ್ರಶಂಸೆ ನುಡಿ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸೊಧನಾ ಸಂಸ್ಥೆ (ಇಸ್ರೋ)  ಚಂದ್ರಯಾನ -2 ಭಾಗವಾದ ವಿಕ್ರಂ ಲ್ಯಾಂಡರ್ ಕಡೇ ಕ್ಷಣದಲ್ಲಿ ಸಂವಹನವನ್ನು ಕಳೆದುಕೊಂಡಿದೆ. ಇದರಿಂದಾಗಿ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಬೇಕಾಗಿದ್ದ ವಿಕ್ರಂ ಸಾಫ್ಟ್ ಲ್ಯಾಂಡಿಂಗ್ ಆಗುವಲ್ಲಿ ತೊಡಕಾಗಿದ್ದು ವಿಜ್ಞಾನಿಗಳಿಗೆ ಭಾರೀ ನಿರಾಶೆಯಾಗಿದೆ. ಆದರೆ ಪ್ರಧಾನಿ ಮೋದಿ ಸೇರಿ ರಾಷ್ಟ್ರ ನಾಯಕರು ವಿಜ್ಞಾನಿಗಳಿಗೆ ಧೈರ್ಯ ತುಂಬಿದ್ದು ಇದು ವೈಫಲ್ಯವಲ್ಲ ಕೇವಲ ಪ್ರಯೋಗ ಮಾತ್ರವೆಂದು ಹೇಳಿ ದೇಶದ ಸಾಧನೆ ಬಗೆಗೆ ಹೆಮ್ಮೆಯ ಮಾತನ್ನಾಡಿದ್ದಾರೆ. ಇನ್ನು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಪ್ರಧಾನಿಗಳಾದ ಎಚ್.ಡಿ ದೇವೇಗೌಡ, ಮಾಜಿ ಸಿಎಂ ಸಿದ್ದರ್ಮಾಯ್ಯ ಸಹ ಇಸ್ರೋ ಸಾಧನೆ ಬಗೆಗೆ ಮೆಚ್ಚುಗೆ ಸೂಚಿಸಿದ್ದಾರೆ.

ಚಂದ್ರಯಾನ-2 ರೋವರ್ ಚಂದ್ರನ ಮೇಲಿಳಿಯುವ ಕೆಲವೇ ಗಂಟೆಗಳ ಮುನ್ನ ಸಂಪರ್ಕ ಕಡಿತವಾಗಿರುವ ಬಗೆಗೆ ಟ್ವೀಟ್ ಮಾಡಿದ ಸಿಎಂ ಯಡಿಯೂರಪ್ಪ "ಇದು ಯಶಸ್ಸಿನ ಮುಂದೂಡಿಕೆ ಮಾತ್ರ, ನಿಮ್ಮೊಡನೆ ನಾವಿದ್ದೇವೆ. ಬೇರೆ ಯಾರೂ ಪ್ರಯತ್ನಿಸದ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಧೈರ್ಯ ಮಾಡಿದ್ದಕ್ಕೆ ಣಾಂಆಘೇ ಃಏಂಂಏ ಈಡೇ. ನಿಮ್ಮ ಸಾಮರ್ಥ್ಯಗಳು ಮತ್ತು ಸಾಧನೆಗಳು ಯಾವಾಗಲೂ ನಮ್ಮ ದೇಶವನ್ನು ಎತ್ತರಕ್ಕೆ ಏರುವಂತೆ ಮಾಡುತ್ತವೆ" ಎಂದಿದ್ದಾರೆ.

"ನಾವು ರಾಷ್ಟ್ರದ ಸಾಧನೆಗಾಗಿ ಹೆಮ್ಮೆ ಪಡುತ್ತೇವೆ. ಚಂದ್ರಯಾನ-2 ನಲ್ಲಿ ಅವರ ಕಠಿಣ ಪರಿಶ್ರಮಕ್ಕಾಗಿ ನಮಗೆ ಗೌರವವಿದ್ದು ಯಾವುದೇ ಅಡೆತಡೆಗಳಿದ್ದರೂ ಅವು ಭವಿಷ್ಯದಲ್ಲಿ ಹೆಚ್ಚಿನ ಸಾಧನೆಗಳಿಗೆ ನಮ್ಮನ್ನು ಕರೆದೊಯ್ಯುವ ಕಲಿಕೆಯಾಗಲಿದೆ" ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

"ನಮ್ಮ ವಿಜ್ಞಾನಿಗಳ ಸಾಧನೆಗಳ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಚಂದ್ರಯಾನ 2 ನಿಜಕ್ಕೂ ಉತ್ತಮ ಯೋಜನೆ ಇದನ್ನು ಕೆಲವರಷ್ಟೇ ಪ್ರಯತ್ನಿಸಲು ಸಾಧ್ಯ. ಅಂತಿಮ ಗುರಿಗೆ ಇನ್ನೊಂದು ಹೆಜ್ಜೆಯಷ್ಟೇ ಬಾಕಿ" ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com