ಬೆಂಗಳೂರು: ಕೆಲಸ ಮಾಡುತ್ತಿದ್ದ ಕಂಪನಿಗೆ 38 ಕೋಟಿ ರೂ.ವಂಚಿಸಿದ್ದ ಇಬ್ಬರು ಬಂಧನ

ಕೆಲಸ ಮಾಡುತ್ತಿದ್ದ ಕಂಪನಿಗೆ ವಿಶ್ವಾಸದ್ರೋಹವೆಸಗಿ 38 ಕೋಟಿ ರೂಪಾಯಿ ಹಣ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮಾರತ್‌ಹಳ್ಳಿ ಪೊಲೀಸರು ಮಂಗಳವಾರ ಯಶಸ್ವಿಯಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೆಲಸ ಮಾಡುತ್ತಿದ್ದ ಕಂಪನಿಗೆ ವಿಶ್ವಾಸದ್ರೋಹವೆಸಗಿ 38 ಕೋಟಿ ರೂಪಾಯಿ ಹಣ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮಾರತ್‌ಹಳ್ಳಿ ಪೊಲೀಸರು ಮಂಗಳವಾರ ಯಶಸ್ವಿಯಾಗಿದ್ದಾರೆ.

ಮುರುಗೇಶ್ ಪಾಳ್ಯದ ಚರ್ಚ್ ಸ್ಟ್ರೀಟ್ 1ನೇ ಕ್ರಾಸ್ ನಿವಾಸಿ ಅಶ್ವನಿ ಜುನ್‌ಜುನ್‌ವಾಲಾ (36), ಬಾಗಲೂರು ಮುಖ್ಯರಸ್ತೆ ನಿತೇಶ್ ಕೊಲಂಬಸ್ ಸ್ಕ್ವಾರ್ ನಿವಾಸಿ ವೇದಾಂತ ರುಂಗ್ತ ಬಂಧಿತ ಆರೋಪಿಗಳು.

ಮಾರತ್‌ಹಳ್ಳಿಯ ಔಟರ್‌ರಿಂಗ್ ರಸ್ತೆಯಲ್ಲಿರುವ ಪ್ರತಿಷ್ಠಿತ ಗೋಲ್ಡ್‌ಮನ್ ಸ್ಯಾಚ್ಸ್ ಸರ್ವೀಸಸ್‌ ಪ್ರೈವೇಟ್ ಲಿಮಿಟೆಡ್‌ ಕಂಪನಿಯಲ್ಲಿ ಉಪಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದ ಅಶ್ವನಿ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮ ಲಾಭಮಾಡುವ ದುರುದ್ದೇಶದಿಂದ ಕಂಪನಿಗೆ ವಂಚಿಸಿ 5.4 ಮಿಲಿಯನ್ ಅಮೆರಿಕನ್ ಡಾಲರ್‌ (38 ಕೋಟಿ ರೂ.) ಹಣವನ್ನು ಮೋಸದಿಂದ ತನ್ನ ಪಾಲುದಾರಿಕೆಯ ಬೇರೊಂದು ಅಂತಾರಾಷ್ಟ್ರೀಯ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡು ಕಂಪನಿಗೆ ಮೋಸ ಮತ್ತು ದ್ರೋಹವೆಸಗಿ ನಷ್ಟವನ್ನುಂಟು ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com