ಬಲಚಿತ್ರದಲ್ಲಿ ಗೃಹಕಚೇರಿ ಕೃಷ್ಣಾದೊಳಗೆ ಬಂದು ಬಿದ್ದ ಗಾಲ್ಫ್ ಚೆಂಡು
ಬಲಚಿತ್ರದಲ್ಲಿ ಗೃಹಕಚೇರಿ ಕೃಷ್ಣಾದೊಳಗೆ ಬಂದು ಬಿದ್ದ ಗಾಲ್ಫ್ ಚೆಂಡು

ಸಿಎಂ ಗೃಹ ಕಚೇರಿ 'ಕೃಷ್ಣಾ'ದಲ್ಲಿ ಹೊಸ ಸಮಸ್ಯೆ, ಅದು ಗಾಲ್ಫ್ ಕೋರ್ಸ್ ನ ಚೆಂಡು!

ನಗರದ ಟ್ರಾಫಿಕ್ ಕಿರಿಕಿರಿಯಂತೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಕೂಡ ವಿಚಿತ್ರ ಸಮಸ್ಯೆಯನ್ನು ಎದುರಿಸುತ್ತಿದೆ. 
Published on

ಬೆಂಗಳೂರು; ನಗರದ ಟ್ರಾಫಿಕ್ ಕಿರಿಕಿರಿಯಂತೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಕೂಡ ವಿಚಿತ್ರ ಸಮಸ್ಯೆಯನ್ನು ಎದುರಿಸುತ್ತಿದೆ. ಅದು ನಿಂಬೆ ಗಾತ್ರದ ಚೆಂಡು. ಸಿಎಂ ಗೃಹ ಕಚೇರಿ ಕೃಷ್ಣಾಗೆ ಬೆಂಗಳೂರಿನ ಗಾಲ್ಫ್ ಕೋರ್ಸ್ ನಿಂದ ರಸ್ತೆ ಮೂಲಕ ಹಾರಿ ಬರುವ ಚೆಂಡು ತಲೆನೋವಾಗಿದೆ. 


ಬೆಂಗಳೂರು ಗಾಲ್ಫ್ ಕೋರ್ಸ್ ನ ಬೇಲಿಯ ಮೂಲಕ ನಿಂಬೆ ಗಾತ್ರದ ಚೆಂಡು ಪಠಾರನೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದ ಆವರಣದೊಳಗೆ ಬಂದು ಬೀಳುತ್ತಿದ್ದು ಇದರಿಂದ ಭದ್ರತೆಗೆ ಅಡಚಣೆಯಾಗಿದೆ. ಅದೃಷ್ಟವಶಾತ್ ಇದುವರೆಗೆ ಯಾರಿಗೂ ಗಾಯಗಳಾಗಿಲ್ಲ.


ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಸಮಯವೇ ಇಲ್ಲದಷ್ಟು ಕಾರ್ಯಗಳ ವೇಳಾಪಟ್ಟಿ ನಿನ್ನೆ ನಿಗದಿಯಾಗಿತ್ತು. ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದರು. ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಜೊತೆಗೆ ಸಭೆ ಮುಗಿಸಿ ಅವರು ಹೊರ ಹೋದ ಕೂಡಲೇ ನಿನ್ನೆ ಕೃಷ್ಣಾದ ಆವರಣದೊಳಗೆ ಗಾಲ್ಫ್ ಚೆಂಡು ಬಂದು ಬಿದ್ದಿತು.


ಬಹಳ ವೇಗವಾಗಿ ಚೆಂಡು ಬಂದು ಬಿದ್ದಿದ್ದರಿಂದ ಒಮ್ಮೆ ಎಲ್ಲರಿಗೂ ಭಯವಾಯಿತು. ಆದರೆ ಯಾರ ಮೇಲೂ ಬೀಳಲಿಲ್ಲ. ಇದು ಸಿಎಂ ಅವರ ಕಚೇರಿಯಾಗಿರುವುದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ. 


ಕಳೆದ ಜುಲೈಯಲ್ಲಿ ಇದೇ ರೀತಿ ಗಾಲ್ಫ್ ಚೆಂಡು ಕಚೇರಿ ಆವರಣದೊಳಗೆ ಬಂದು ಬಿದ್ದು ಐಪಿಎಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಅವರ ಕಾರಿನ ಮೇಲೆ ಬಿತ್ತು. ವಾಹನದ ಪಕ್ಕದಲ್ಲಿದ್ದ ಪೊಲೀಸರು ಅದೃಷ್ಟವಶಾತ್ ಪಾರಾದರು.  ಈ ಘಟನೆಯಾದ ಬಳಿಕ ಗಾಲ್ಫ್ ಕೋರ್ಸ್ ನ್ನು ಬೇರೆಡೆಗೆ ವರ್ಗಾಯಿಸಬೇಕೆಂದು ಹಿಂದಿನ ಗೃಹ ಸಚಿವ ಡಾ ಜಿ ಪರಮೇಶ್ವರ್ ಆಲೋಚಿಸಿದ್ದರು. ಅಂದು ಮುಖ್ಯಮಂತ್ರಿಯಾಗಿದ್ದ ಹೆಚ್ ಡಿ ಕುಮಾರಸ್ವಾಮಿಯವರು ಬಯೋಕಾನ್ ಅಧ್ಯಕ್ಷ ಕಿರಣ್ ಮಜುಂದಾರ್ ಶಾ ಅವರ ಜೊತೆ ಸಭೆ ನಡೆಸುತ್ತಿದ್ದರು. 

ಕಳೆದ ಜುಲೈಯಲ್ಲಿ ಇದೇ ರೀತಿ ಗಾಲ್ಫ್ ಚೆಂಡು ಕಚೇರಿ ಆವರಣದೊಳಗೆ ಬಂದು ಬಿದ್ದು ಐಪಿಎಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಅವರ ಕಾರಿಗೆ ಹೊಡೆಯಿತು. ವಾಹನದ ಪಕ್ಕದಲ್ಲಿದ್ದ ಪೊಲೀಸರು ಅದೃಷ್ಟವಶಾತ್ ಪಾರಾದರು. 


ಈ ಘಟನೆಯ ಬಳಿಕ ಗಾಲ್ಫ್ ಕೋರ್ಸ್ ಅಧಿಕಾರಿಗಳು ಬೇಲಿಯ ಎತ್ತರವನ್ನು ಈಗಿರುವ 100 ಅಡಿಯಿಂದ 115 ಅಡಿಗೆ ಹೆಚ್ಚಿಸಲು ನಿರ್ಧರಿಸಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಬೇಲಿಯಿಂದಾಗಿ ಅದಕ್ಕೆ ಸಿಕ್ಕಿ ಹಕ್ಕಿಗಳು ಅನೇಕ ಸತ್ತಿರುವುದರಿಂದ ಪರಿಸರ ರಕ್ಷಣೆ ಹೋರಾಟಗಾರರು ಇದನ್ನು ವಿರೋಧಿಸುತ್ತಿದ್ದಾರೆ. 2006ರಲ್ಲಿ ಕೂಡ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಗಾಲ್ಫ್ ಚೆಂಡು ಗೃಹ ಕಚೇರಿಯೊಳಗೆ ಬಂದು ಬಿದ್ದು ಅಂದು ಜನತಾ ದರ್ಶನ ನಡೆಯುತ್ತಿದ್ದ ವೇಳೆ ಒಬ್ಬರಿಗೆ ಗಾಯವಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com