ಮಂಡ್ಯ: ಪ್ರಿಯಕರನೊಡನೆ ಮಗಳು ಪರಾರಿ, ಮೊಮ್ಮಗನನ್ನು‌ ಕೆರೆಗೆ ತಳ್ಳಿದ ಅಜ್ಜಿ!

ಫೇಸ್‍ಬುಕ್ ಪ್ರಿಯಕರನಿಗಾಗಿ  ಮಗಳು, ಮಗನನ್ನು ಬಿಟ್ಟು ಓಡಿಹೋಗಿದ್ದಕ್ಕೆ ಮರ್ಯಾದೆಗೆ ಹೆದರಿ ಮೊಮ್ಮಗನನ್ನು ಕೆರೆಗೆ ತಳ್ಳಿ ಅಜ್ಜಿಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನ ಮಾರುತಿ ನಗರದಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮಂಡ್ಯ: ಫೇಸ್‍ಬುಕ್ ಪ್ರಿಯಕರನಿಗಾಗಿ  ಮಗಳು, ಮಗನನ್ನು ಬಿಟ್ಟು ಓಡಿಹೋಗಿದ್ದಕ್ಕೆ ಮರ್ಯಾದೆಗೆ ಹೆದರಿ ಮೊಮ್ಮಗನನ್ನು ಕೆರೆಗೆ ತಳ್ಳಿ ಅಜ್ಜಿಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನ ಮಾರುತಿ ನಗರದಲ್ಲಿ ನಡೆದಿದೆ. 
  
11  ವರ್ಷದ ಪ್ರಜ್ವಲ್ ಮೃತಪಟ್ಟ ಬಾಲಕ. ಇತ್ತೀಚೆಗೆ ಆತನ‌ ತಾಯಿ ಲಕ್ಷ್ಮೀ ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದ ಪ್ರಿಯಕರನೊಂದಿಗೆ ಓಡಿ ಹೋಗಿದ್ದರು. ಹೀಗಾಗಿ ಮಾನಕ್ಕೆ ಹೆದರಿದ  ಅಜ್ಜಿ ಮನನೊಂದು ಮೊಮ್ಮಗನನ್ನು ಕೊಂದು ತಾನೂ ಸಾಯಲು ನಿರ್ಧರಿಸಿದ್ದಾರೆ.  

ಸೋಮವಾರ ಶಾಲೆಯಲ್ಲಿದ್ದ ಪ್ರಜ್ವಲ್‍ನ್ನು ಅಜ್ಜಿ ಕರೆದುಕೊಂಡು ಬಂದು ಸಿಂದಘಟ್ಟ ಕೆರೆಗೆ ತಳ್ಳಿದ್ದಾರೆ.ನಂತರ ಅವರು ಕೆರೆಗೆ ಬೀಳುತ್ತಿದ್ದಂತೆಯೇ ಸ್ಥಳೀಯರು ಅಜ್ಜಿಯನ್ನು ರಕ್ಷಿಸಿದ್ದಾರೆ. 
  
ಮೊಮ್ಮಗನನ್ನು ಕೊಲೆ ಮಾಡಿದ ಆರೋಪದಡಿ ಪೊಲೀಸರು ಅಜ್ಜಿಯನ್ನು ವಶಕ್ಕೆ ಪಡೆದಿದ್ದಾರೆ.  

ಸದ್ಯ ಕೆರೆಯಲ್ಲಿ ಮುಳುಗಿದ ಬಾಲಕನ ಮೃತ ದೇಹಕ್ಕಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ಕೆ.ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com