ಕುಮಾರ ಸ್ವಾಮಿ ಸರ್ಕಾರದಲ್ಲಿ ನೇಮಕವಾಗಿದ್ದ ವನ್ಯಜೀವಿ ವಾರ್ಡನ್ ಗಳ ನೇಮಕಾತಿ ರದ್ಧು!

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿನ ಹಲವು ಮೂಲಭೂತ ಯೋಜನೆಗಳನ್ನು ರದ್ಧುಗೊಳಿಸುತ್ತಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ವನ್ಯಜೀವಿ ವಾರ್ಡನ್ ಗಳ ನೇಮಕವನ್ನು ರದ್ಧುಗೊಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬಳ್ಳಾರಿ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿನ ಹಲವು ಮೂಲಭೂತ ಯೋಜನೆಗಳನ್ನು ರದ್ಧುಗೊಳಿಸುತ್ತಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ವನ್ಯಜೀವಿ ವಾರ್ಡನ್ ಗಳ ನೇಮಕವನ್ನು ರದ್ಧುಗೊಳಿಸಿದೆ.

ಪರಿಸರ ಮತ್ತು ಅರಣ್ಯ ಇಲಾಖೆ ಅಧೀನ ಕಾರ್ಯದರ್ಶಿಈ ಸಂಬಂಧ ನೋಟೀಸ್ ಜಾರಿ ಮಾಡಿದ್ದು, ಜುಲೈ 18 2019 ಹಾಗೂ ಜುಲೈ 23, 2019 ರಂದು ಮಾಡಿರುವ ನೇಮಕಾತಿಗಳು ಕೂಡಲೇ ರದ್ದಾಗಿವೆ ಎಂದು ಆದೇಶ ಹೊರಡಿಸಿದ್ದಾರೆ.

ಮೊದಲ ಸುತ್ತಿನಲ್ಲಿ 29 ವೈಲ್ಡ್ ಲೈಫ್ ವಾರ್ಡನ್ ಗಳನ್ನು ನೇಮಕ ಮಾಡಲಾಗಿತ್ತು, ಕುಮಾರ ಸ್ವಾಮಿ ಸರ್ಕಾರ ಬಹುಮತ ಕಳೆದುಕೊಂಡು ಪತನವಾದ ನಂತರ ಅವರು ಮಾಡಿದ್ದ ಎಲ್ಲಾ ಹಲವು ನೇಮಕಾತಿಗಳನ್ನು ರದ್ಧುಗೊಳಿಸಲಾಗಿತ್ತು. ಹೊಸ ಪಟ್ಟಿಯನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com