ವಿರಾಜಪೇಟೆ: ಅರಣ್ಯಾಧಿಕಾರಿ ಹತ್ಯೆ ಪ್ರಕರಣ, 23 ವರ್ಷಗಳ ನಂತರ ಆರೋಪಿ ಅಂದರ್

ಕೊಡಗಿನ ವಿರಾಜಪೇಟೆ ತಾಲೂಕು ಮಾಕುಟ್ಟ ಅರಣ್ಯ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಅರಣ್ಯಾಧಿಕಾರಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಆರೋಪಿಯನ್ನು ಬರೋಬ್ಬರಿ 23 ವರ್ಷಗಳ ನಂತರ ಬಂಧಿಸಲಾಗಿದೆ.
ವಿರಾಜಪೇಟೆ: ಅರಣ್ಯಾಧಿಕಾರಿ ಹತ್ಯೆ ಪ್ರಕರಣ - 23 ವರ್ಷಗಳ ನಂತರ ಆರೋಪಿ ಅಂದರ್
ವಿರಾಜಪೇಟೆ: ಅರಣ್ಯಾಧಿಕಾರಿ ಹತ್ಯೆ ಪ್ರಕರಣ - 23 ವರ್ಷಗಳ ನಂತರ ಆರೋಪಿ ಅಂದರ್

ಮಡಿಕೇರಿ: ಕೊಡಗಿನ ವಿರಾಜಪೇಟೆ ತಾಲೂಕು ಮಾಕುಟ್ಟ ಅರಣ್ಯ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಅರಣ್ಯಾಧಿಕಾರಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಆರೋಪಿಯನ್ನು ಬರೋಬ್ಬರಿ 23 ವರ್ಷಗಳ ನಂತರ ಬಂಧಿಸಲಾಗಿದೆ.

ಅಧಿಕಾರಿಯ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಎರಡನೇ ಆರೋಪಿ ಕೇರಳದ ಪಾಣತ್ತಿಲ್ ನಿವಾಸಿ ಜಾರ್ಜ್ ಕುಟ್ಟಿ (54) ಎಂಬಾತನನ್ನು ವಿರಾಜಪೇಟೆ ಗ್ರಾಮಾಂತರ ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ಘಟನೆ ವಿವರ

1997ರಲ್ಲಿ ಮಾಕುಟ್ಟ ಅರಣ್ಯ ಪ್ರದೇಶದಲ್ಲಿ ಅರಣ್ಯಾಧಿಕಾರಿಯಾಗಿದ್ದ ಪೊನ್ನಪ್ಪ ಎಂಬಾತನ ಮೇಲೆ ಐವರು ಬೇಟೆಗಾರರ ಗುಂಪು ಗುಂಡು ಹಾರಿಸಿ ಹತ್ಯೆಗೈದಿತ್ತು. ಆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೋಲೀಸರು ಐವರಲ್ಲಿ ನಾಲ್ಕು ಆರೋಪಿಗಳನ್ನು ಬಂಧಿಸಿದ್ದರು.

ಆದರೆ ಕೇರಳದ ಜಾರ್ಜ್ ಕುಟ್ಟಿ ಮಾತ್ರ ಘಟನೆ ನಡೆದಂದಿನಿಂದ ತಲೆಮರೆಸಿಕೊಂಡಿದ್ದನು. ಇತ್ತೀಚೆಗೆ ಜಾರ್ಜ್ ಕುಟ್ಟಿ ಬಗ್ಗೆ ಸ್ಥಳೀಯರೊಬ್ಬರು ಪೋಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣವೇ ಕೇರಳದಲ್ಲಿದ್ದ ಆರೋಪಿಯನ್ನು ಹುಡುಕಿ ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com