ಮತದಾರರು
ಮತದಾರರು

ಉಪ ಚುನಾವಣೆ: ಸಂಜೆ 5 ಗಂಟೆ ವರೆಗೆ ಶೇ.60 ರಷ್ಟು ಮತದಾನ, ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚು

ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧರಿಸಲಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಗುರುವಾರ ಬೆಳಗ್ಗೆಯಿಂದ ಮತದಾನ ನಡೆಯುತ್ತಿದ್ದು,....

ಬೆಂಗಳೂರು: ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧರಿಸಲಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಗುರುವಾರ ಬೆಳಗ್ಗೆಯಿಂದ ಮತದಾನ ನಡೆಯುತ್ತಿದ್ದು, ಮಧ್ಯಾಹ್ನದ ನಂತರ ಮತದಾನ ಚುರುಕುಗೊಂಡಿದೆ.

ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭವಾಗಿರುವ ಮತದಾನ ಸಂಜೆ 5 ಗಂಟೆಯವರೆಗೆ ಒಟ್ಟು ಶೇ.60 ರಷ್ಟು ಮತದಾನವಾಗಿದೆ.

ಸಂಜೆ 5 ಗಂಟೆಯವರೆಗೆ ಕ್ಷೇತ್ರವಾರು ಮತದಾನದ ವಿವರ ಹೀಗಿದೆ 
ಅಥಣಿ- ಶೇ.70.73
ಕಾಗವಾಡ- ಶೇ.69.76
ಗೋಕಾಕ್- ಶೇ.66.64
ಯಲ್ಲಾಪುರ- ಶೇ.72.23
ಹಿರೇಕೆರೂರು- ಶೇ.72.42
ರಾಣೇಬೆನ್ನೂರು- ಶೇ.67.92
ವಿಜಯನಗರ- ಶೇ.59.93
ಚಿಕ್ಕಬಳ್ಳಾಪುರ- ಶೇ.79.08
ಕೆ.ಆರ್ ಪುರಂ- ಶೇ.37.05
ಯಶವಂತಪುರ- ಶೇ.48.34 
ಮಹಾಲಕ್ಷ್ಮಿ ಲೇಔಟ್- ಶೇ.40.47
ಶಿವಾಜಿನಗರ- ಶೇ.41.13
ಹೊಸಕೋಟೆ- ಶೇ.76.19
ಕೆ.ಆರ್ ಪೇಟೆ- ಶೇ.75.87
ಹುಣಸೂರು- ಶೇ.74.47

ಈ ಪೈಕಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ಗರಿಷ್ಠ ಪ್ರಮಾಣದ ಮತದಾನ ನಡೆದಿದ್ದು, ಕೆಆರ್ ಪುರದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮತದಾನ ನಡೆದಿದೆ.

Related Stories

No stories found.

Advertisement

X
Kannada Prabha
www.kannadaprabha.com