ಡಿ.26ರಂದು ಲಾಲ್ ಬಾಗ್ ನಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ

ಗ್ರಹಣಗಳ ಕುರಿತು ಜನರಲ್ಲಿರುವ ಮೂಢ ನಂಬಿಕೆಗಳನ್ನು ನಿವಾರಿಸಲುಸಲು ಡಿ.26ಕ್ಕೆ ಬೆಂಗಳೂರಿನ ಲಾಲ್ ಬಾಗ್ ಬಂಡೆಯ ಬಳಿ ಸೂರ್ಯಗ್ರಹಣ ವೀಕ್ಷಣೆ, ಸಂವಾದ ಹಾಗೂ ಉಪಹಾರ ಸೇವನೆ ಕಾರ್ಯಕ್ರಮವನ್ನು‌ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಆಯೋಜಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು:  ಗ್ರಹಣಗಳ ಕುರಿತು ಜನರಲ್ಲಿರುವ ಮೂಢ ನಂಬಿಕೆಗಳನ್ನು ನಿವಾರಿಸಲುಸಲು ಡಿ.26ಕ್ಕೆ ಬೆಂಗಳೂರಿನ ಲಾಲ್ ಬಾಗ್ ಬಂಡೆಯ ಬಳಿ ಸೂರ್ಯಗ್ರಹಣ ವೀಕ್ಷಣೆ, ಸಂವಾದ ಹಾಗೂ ಉಪಹಾರ ಸೇವನೆ ಕಾರ್ಯಕ್ರಮವನ್ನು‌ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಆಯೋಜಿಸಿದೆ.

‌ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಮಿತಿಯ ಕಾರ್ಯದರ್ಶಿ ಈ ಬಸವರಾಜು, ಗುರುವಾರ ಬೆಳಗ್ಗೆ ಸೂರ್ಯಗ್ರಹಣ ಸಂಭವಿಸಲಿದೆ. ಸಾಮಾನ್ಯವಾಗಿ ಗ್ರಹಣ ಸಂದರ್ಭದಲ್ಲಿ ಜನ ಮೂಢ ನಂಬಿಕೆ ಹೊಂದಿದ್ದು, ಮನೆಯಿಂದ ಹೊರ ಬರಲು ಹಿಂಜರಿಯುತ್ತಾರೆ. ಅದ್ದರಿಂದ ಜನರಲ್ಲಿರುವ ಮೂಢ ನಂಬಿಕೆಯನ್ನು ಹೋಗಲಾಡಿಸುವ ಸಲುವಾಗಿ ಅಂದು ರಾಜ್ಯದ ಸುಮಾರು ಒಂದು ಸಾವಿರ ಕೇಂದ್ರಗಳಲ್ಲಿ ಸೂರ್ಯೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಅಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

‌ಗುರುವಾರ ಬೆ.8 ಗಂಟೆಗೆ ಲಾಲ್ ಬಾಗ್ ಬಂಡೆಯ ಬಳಿ ಸೂರ್ಯಗ್ರಹಣವನ್ನು ನೋಡಲು ಜ್ಞಾನ ವಿಜ್ಞಾನ ಸಮಿತಿ ಅವಕಾಶ ಕಲ್ಪಿಸಿದ್ದು, ಆಸಕ್ತರಿಗೆ ವಿಶೇಷ ಕನ್ನಡಕಗಳನ್ನು ವಿತರಿಸಲಿದೆ.

ಹೆಚ್ಚಿನ ಮಾಹಿತಿಗಾಗಿ 9448957666 ಸಂಖ್ಯೆಗೆ ಕರೆ ಮಾಡಲು ಕೋರಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com