ಮೈಸೂರು ವಿವಿ ಘಟಿಕೋತ್ಸವ: ನೈಜೀರಿಯಾ ವಿದ್ಯಾರ್ಥಿನಿ 'ಗೋಲ್ಡನ್ ಗರ್ಲ್', ಅಂಧನಿಗೆ ಡಾಕ್ಟರೇಟ್!

ನೈಜೀರಿಯಾದ ಎಮಿಲಿ ಸ್ಟೆಲ್ಲಾ ಚಿನೆಲೊ (28) ಮೈಸೂರು ವಿಶ್ವವಿದ್ಯಾನಿಲಯದ 99ನೇ ವಾರ್ಷಿಕ ಘಟಿಕೋತ್ಸವದಲ್ಲಿ 20 ಚಿನ್ನದ ಪದಕ ಹಾಗೂ 5 ನಗದು ಬಹುಮಾನವನ್ನು ಪಡೆದು ಮಿಂಚಿದ್ದಾರೆ.
ಮೈಸೂರು ವಿವಿ ಘಟಿಕೋತ್ಸವ: ನೈಜೀರಿಯಾ ವಿದ್ಯಾರ್ಥಿನಿ 'ಗೋಲ್ಡನ್ ಗರ್ಲ್', ಅಂಧನಿಗೆ ಡಾಕ್ಟರೇಟ್!
ಮೈಸೂರು ವಿವಿ ಘಟಿಕೋತ್ಸವ: ನೈಜೀರಿಯಾ ವಿದ್ಯಾರ್ಥಿನಿ 'ಗೋಲ್ಡನ್ ಗರ್ಲ್', ಅಂಧನಿಗೆ ಡಾಕ್ಟರೇಟ್!
ಮೈಸೂರು: ನೈಜೀರಿಯಾದ ಎಮಿಲಿ ಸ್ಟೆಲ್ಲಾ ಚಿನೆಲೊ (28)  ಮೈಸೂರು ವಿಶ್ವವಿದ್ಯಾನಿಲಯದ 99ನೇ ವಾರ್ಷಿಕ ಘಟಿಕೋತ್ಸವದಲ್ಲಿ  20 ಚಿನ್ನದ ಪದಕ ಹಾಗೂ 5 ನಗದು ಬಹುಮಾನವನ್ನು ಪಡೆದು ಮಿಂಚಿದ್ದಾರೆ. 
ಭಾನುವಾರ ವಿಶ್ವವಿದ್ಯಾನಿಲಯದ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮ ನೆರವೇರಿದ್ದುಸಮಾವೇಶದ ಸಂದರ್ಭದಲ್ಲಿ, ರಸಾಯನಶಾಸ್ತ್ರದಲ್ಲಿ  ಸ್ನಾತಕೋತ್ತರ ಪದವಿ ಪಡೆದಿದ್ದ  ಚಿನೆಲೊ 20 ಚಿನ್ನದ ಪದಕಗಳನ್ನು ಮತ್ತು ಐದು ನಗದು ಬಹುಮಾನಗಳನ್ನು ಪಡೆದರು.
"ಇದು ಸತತ ಪರಿಶ್ರಮದ ಫಲ,  "ನನ್ನ ಹೆಚ್ಚಿನ ಸಮಯವನ್ನು ಅಧ್ಯಯನದ ಕಡೆಗೆ ಮೀಸಲಿಟ್ಟಿದ್ದೇನೆ. ನಾನು ತರಗತಿಯ ಅಥವಾ ಗ್ರಾಂಥಾಲಯದಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿದ್ದೆ. ಇನ್ನು ನಾನು ಶಿಕ್ಷಣಕ್ಕಾಗಿ ಭಾರತವನ್ನು ಆಯ್ಕೆ ಮಾಡಿದ್ದೆ, ಅದರಲ್ಲಿಯೂ ಉನ್ನತ ವ್ಯಾಸಂಗಕ್ಕಾಗಿ ಮೈಸೂರು ವಿಶ್ವವಿದ್ಯಾನಿಲಯವನ್ನು ಆಯ್ಕೆ ಮಾಡುವ ಹಿಂದೆ ಶೈಕ್ಷಣಿಕ ಶ್ರೇಷ್ಠತೆಯ ವ್ಯಾಪ್ತಿ ಇದೆ." ಅವರು ಹೇಳಿದರು.
ನೈಜೀರಾ ವಿದ್ಯಾರ್ಥಿನಿ ರಸಾಯನಶಾಸ್ತ್ರದಲ್ಲಿ ಉತ್ತಮ ಆಸಕ್ತಿ ಹಾಗೂ ಪ್ರಾವೀಣ್ಯ ಹೊಂದಿದ್ದು ಈಕೆ ನೈಜೀರಿಯಾದ ಉಸ್ಮಾನ್ಡಾನ್ಫೋಡಿಯೊ ವಿಶ್ವವಿದ್ಯಾನಿಲಯದಲ್ಲಿ  ಸಹ ಅಗ್ರಸ್ಥಾನ ಪಡೆಇದ್ದರು. ಅಲ್ಲಿ ಆಕೆ ಬಿಎಸ್ಸಿ ರಸಾಯನಶಾಸ್ತ್ರ ಅದ್ಯಯನ ನಡೆಸಿದ್ದರು. ಪೂರ್ವ ಆಫ್ರಿಕಾದವರಾದ ಈಕೆ ಪ್ರಪಂಚದ ಯಾವುದೇ ಭಾಗದಲ್ಲಿ ಬೋಧನಾ ವೃತ್ತಿ ಮಾಡಲು ಬಯಸಿದ್ದಾರೆ. ಇನ್ನು ಅವರ ದೇಶದಲ್ಲೇ ಆಕೆಯ ತಾಯಿ ಸಹ ಓರ್ವ ಶಿಕ್ಷಕಿಯಾಗಿದ್ದರೆ ತಂದೆ ಉದ್ಯಮಿಯಾಗಿದ್ದಾರೆ.
ಅಂಧನಿಗೆ ಡಾಕ್ಟರೇಟ್!
ಅಂಧ ಸಂಶೋಧನಾ ವಿದ್ಯಾರ್ಥಿ ಪಿ.ವಿ.ನಾಗರಾಜು ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದ ಡಾಕ್ಟರೇಟ್ ಲಭಿಸಿದೆ. ಕನ್ನಡದ ವಿಷಯದಲ್ಲಿ ಕನ್ನಡ ಚಲನಚಿತ್ರಗೀತೆಗಳಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಎಂಬ ಮಹಾಪ್ರಬಂಧ ಮಡಿಸಿದ್ದ ನಾಗರಾಜು  ಅವರಿಗೆ ಪಿಎಚ್‌.ಡಿ ಪದವಿ ಪ್ರದಾನ  ಮಾಡಲಾಗಿದೆ. ಡಾ.ಬಿ.ಪಿ.ಆಶಾಕುಮಾರಿ  ಅವರ ಮಾರ್ಗದರ್ಶನದಲ್ಲಿ ಅವರು ಈ ಆಧನೆ ಮಾಡಿದ್ದಾರೆ. 
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹೀಗೆ ಅಂಧ ವಿದ್ಯಾರ್ಥಿಯೊಬ್ಬ ಕನ್ನಡದಲ್ಲಿ ಡಾಕ್ಟರೇಟ್ ಪಡೆಯುತ್ತಿರುವುದು ಇದೇ ಮೊದಲು, ಕರ್ನಾಟಕದಲ್ಲಿ ಇಂತಹಾ ವಿದ್ಯಾರ್ಥಿಗಳ ಪೈಕಿ ಇವರು ಮೂರನೇಯವರಾಗಿದ್ದಾರೆ.
ತಮ್ಮ ಬಾಲ್ಯದಲ್ಲೇ ನರ ದೌರ್ಬಲ್ಯದಿಂದ ದೃಷ್ಟಿ ಕಳೆದುಕೊಂಡಿದ್ದ ನಾಗರಾಜು ಕಂಪ್ಯೂಟರ್‌ನಲ್ಲಿ ಎಂಎ ಪರೀಕ್ಷೆ ಬರೆದಿರುವ ಇವರು ಈಗ ಪಡುವಾರಹಳ್ಳಿಯ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಘಟಿಕೋತ್ಸವದಲ್ಲಿ ಒಟ್ತಾರೆ 28163 ವಿದ್ಯಾರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಯಿತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com