18 ಜಿಲ್ಲೆಗಳ 49 ತಾಲೂಕುಗಳು ಬರ ಪೀಡಿತ: ರಾಜ್ಯ ಸರ್ಕಾರ ಘೋಷಣೆ

2019ರ ಮುಂಗಾರು ಋತುವಿನಲ್ಲಿ ಭಾರೀ ಮಳೆ, ಪ್ರವಾಹದ ನಡುವೆಯೂ 18 ಜಿಲ್ಲೆಗಳ 49 ತಾಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರ ಘೋಷಿಸಿದೆ.
 

Published: 22nd October 2019 06:04 PM  |   Last Updated: 22nd October 2019 06:04 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : UNI

ಬೆಂಗಳೂರು:  2019ರ ಮುಂಗಾರು ಋತುವಿನಲ್ಲಿ ಭಾರೀ ಮಳೆ, ಪ್ರವಾಹದ ನಡುವೆಯೂ 18 ಜಿಲ್ಲೆಗಳ 49 ತಾಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರ ಘೋಷಿಸಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಂದಾಯ ಸಚಿವ ಆರ್.ಅಶೋಕ್, ಬರ ಪರಿಸ್ಥಿತಿ ಕುರಿತು ವರದಿ ಸಿದ್ಧಪಡಿಸಲಾಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದೇವೆ ಎಂದರು.

ಯಾವ ಜಿಲ್ಲೆಯ ಯಾವ ತಾಲೂಕು ಬರಪೀಡಿತ:
ಬೆಂ.ನಗರ ಜಿಲ್ಲೆ- ಆನೇಕಲ್, ಬೆಂ.ಉತ್ತರ ಹಾಗು ಬೆಂ.ಪೂರ್ವ ತಾಲೂಕು 
ಬೆಂ.ಗ್ರಾಮಾಂತರ- ದೇವನಹಳ್ಳಿ, ಹೊಸಕೋಟೆ, ನೆಲಮಂಗಲ
ರಾಮನಗರ- ಕನಕಪುರ, ರಾಮನಗರ
ಕೋಲಾರ- ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ
ಚಿಕ್ಕಬಳ್ಳಾಪುರ- ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ
ತುಮಕೂರು- ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ತುಮಕೂರು, ತುರುವೇಕೆರೆ
ಚಿತ್ರದುರ್ಗ- ಚಳ್ಳಕೆರೆ, ಚಿತ್ರದುರ್ಗ, ಮೊಳಕಾಲ್ಮೂರು
ದಾವಣಗೆರೆ- ಜಗಳೂರು
ಚಾಮರಾಜನಗರ- ಕೊಳ್ಳೆಗಾಲ
ಬಳ್ಳಾರಿ- ಬಳ್ಳಾರಿ, ಹೊಸಪೇಟೆ, ಸಂಡೂರು, ಸಿರಗುಪ್ಪ
ಕೊಪ್ಪಳ- ಗಂಗಾವತಿ
ರಾಯಚೂರು- ಮಾನ್ವಿ, ರಾಯಚೂರು, ಸಿಂಧನೂರು
ಕಲಬುರಗಿ- ಚಿಂಚೋಳಿ, ಜೇವರ್ಗಿ, ಸೇಡಂ
ಯಾದಗಿರಿ- ಯಾದಗಿರಿ
ಬೆಳಗಾವಿ- ಅಥಣಿ
ಬಾಗಲಕೋಟೆ- ಬಾದಾಮಿ, ಬಿಳಗಿ, ಜಮಖಂಡಿ
ವಿಜಯಪುರ- ಬಸವನಬಾಗೇವಾಡಿ, ವಿಜಯಪುರ, ಇಂಡಿ, ಸಿಂಧಗಿ
ಗದಗ- ನರಗುಂದ

ಬೌರಿಂಗ್ ಇನ್ಸ್ಟಿಟ್ಯೂಟ್ ಕ್ಲಬ್ ಜಮೀನು ವಶಕ್ಕೆ:

ಬೆಂಗಳೂರಿನ ಬೌರಿಂಗ್ ಇನ್ಸ್ಟಿಟ್ಯೂಟ್ ಕ್ಲಬ್ ಮೂಲ ಒಪ್ಪಂದ ಉಲ್ಲಂಘಿಸಿ ಪೆಟ್ರೋಲ್ ಬಂಕ್ ಗೆ  150/100 ವಿಸ್ತೀರ್ಣದ ಜಮೀನ್ನು ಉಪ ಗುತ್ತಿಗೆ ನೀಡಿದೆ. ಉಪ ಗುತ್ತಿಗೆ ನೀಡಿ ಕೋಟ್ಯಂತರ ರೂ ಹಣವನ್ನು ಪಡೆದಿದೆ. ಇದೀಗ ಆಡಿಟ್ ವರದಿಯಂತೆ ಸುಮಾರು 3.14 ಕೋಟಿ ರೂ ಹಣವನ್ನು ಕ್ಲಬ್ ಸರ್ಕಾರಕ್ಕೆ ಕೊಡಬೇಕಾಗಿದೆ‌. ಜತೆಗೆ ಆ ಜಮೀನನ್ನು ಅವರಿಂದ ವಾಪಸು ಪಡೆಯಲು ನಿರ್ಧರಿಸಿದ್ದೇವೆ. ಅದನ್ನು ಪಾಲಿಕೆಗೆ ವರ್ಗಾಯಿಸಿ, ಸಾರ್ವಜನಿಕ ಉದ್ದೇಶಗಳಿಗೆ ಬಳಸಲಾಗುವುದು ಎಂದು ಸ್ಪಷ್ಟಪಡಿಸಿದರು.

Stay up to date on all the latest ರಾಜ್ಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp