ನಂಜನಗೂಡು ಔಷಧ ಕಂಪನಿಯ ಸಿಬ್ಬಂದಿಗೆ ಕೊರೋನಾ ಸೋಂಕು: ಬಗೆಹರಿಯದ ನಿಗೂಢ ರಹಸ್ಯ

ನಂಜನಗೂಡಿನಲ್ಲಿರುವ ಔಷಧ ಕಂಪನಿಯ 12 ಸಿಬ್ಬಂದಿಯಲ್ಲಿ ಹೇಗೆ ಕೊರೋನಾ ಸೋಂಕು ಬಂದಿತು ಎಂಬದು ವೈದ್ಯರು ಮತ್ತು ಅಧಿಕಾರಿಗಳಿಗೆ ಯಕ್ಷ ಪ್ರಶ್ನೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ನಂಜನಗೂಡಿನಲ್ಲಿರುವ ಔಷಧ ಕಂಪನಿಯ 12 ಸಿಬ್ಬಂದಿಯಲ್ಲಿ ಹೇಗೆ ಕೊರೋನಾ ಸೋಂಕು ಬಂದಿತು ಎಂಬದು ವೈದ್ಯರು ಮತ್ತು ಅಧಿಕಾರಿಗಳಿಗೆ ಯಕ್ಷ ಪ್ರಶ್ನೆಯಾಗಿದೆ.

ಜುಬಿಲೆಂಟ್ ಜೆನರಿಕ್ಸ್ ನ 12 ಮಂದಿ ಕೆಲಸಗಾರರಲ್ಲಿ ಇಬ್ಬರಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ, ಯಾವುದೇ ವಿದೇಶ ಪ್ರಯಾಣ ಮಾಡದಿದ್ದರೂ 52 ವರ್ಷದ ವೃದ್ಧ ಹಾಗೂ 35 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿದೆ.

ಶನಿವಾರ ನಂಜನಗೂಡನ್ನು ಸರ್ಕಾರ ಕ್ಲಸ್ಟರ್ ಡೌನ್ ಎಂದು ಘೋಷಿಸಿದೆ, 52 ಮಂದಿ ಪ್ರಾಥಮಿಕ ಸಂಪರ್ಕದಲ್ಲಿದ್ದರು ಎಂದು ಜಿಲ್ಲಾಡಳಿತ ತಿಳಿಸಿದ್ದು ಅವರನ್ನು ಪ್ರತ್ಯೇಕವಾಗಿಡಲಾಗಗಿತ್ತು, ಆದರೆ ಉಳಿದ ಐವರು ಯಾವುದೇ ಸಾಮಾಜಿಕ ಸಂಪರ್ಕದಲ್ಲಿರಲಿಲ್ಲ,  ಆಶ್ಚರ್ಯವೆಂದರೇ ಸೋಂಕಿತರ ಕುಟುಂಬಸ್ಥರಲ್ಲಿ ಯಾರೋಬ್ಬರಿಗೂ ಸೋಂಕು ತಗುಲಿಲ್ಲ.

ಮೊದಲ ಕೊರೋನಾ ಸೋಂಕಿತನ ಜೊತೆ ಈ ಸಿಬ್ಬಂದಿ ಯಾರೂ ಸಂಪರ್ಕದಲ್ಲಿರಲಿಲ್ಲ, ಆಧರೂ ಇವರಿಗೆ ಹೇಗೆ ಸೋಂಕು ತಗುಲಿತು ಎಂಬುದು ಇನ್ನೂ ನಿಗೂಢ ಎಂದು ಅಧಿಕಾರಿಗಳು ಆತಂಕ ವ್ಯಕ್ತ ಪಡಿಸಿದ್ದಾರೆ.ಈ ಕೇಸ್ ವಿಶ್ವ ಆರೋಗ್ಯ ಸಂಸ್ಥೆಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನುವಾಗ ಜನರು ಹೊರಸೂಸುವ ಉಸಿರಾಟದ ಹನಿಗಳಿಗೆ ಬಾಯಿ, ಮೂಗು ಮತ್ತು ಕಣ್ಣುಗಳು ಒಡ್ಡಿಕೊಂಡಾಗ ಜನರು ಕೋವಿಡ್ -19 ಅನ್ನು ಸಂಕುಚಿತಗೊಳಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತಿರುವುದರಿಂದ ಈ  ಈ ಪ್ರಕರಣ ಮತ್ತಷ್ಟು ಗೊಂದಲಮಯವಾಗಿದೆ. ಸೋಂಕಿತ ವ್ಯಕ್ತಿಯು ಬಳಸುವ ವಸ್ತುಗಳೊಂದಿಗೆ ಪರೋಕ್ಷ ಸಂಪರ್ಕದಿಂದಲೂ ಕೋವಿದ್ 19 ಹರಡಬಹುದು ಎಂದು ಹೇಳಲಾಗಿದೆ.

ಜುಬಿಲೆಂಟ್ ಜೆನರಿಕ್ಸ್ ಕಾರ್ಖಾನೆ ಚೀನಾ ಸೇರಿದಂತೆ ಕೊರೋನಾ ಪೀಡಿತ ದೇಶಗಳಿಂದ ಔಷಧೀಯ ಸರಕುಗಳನ್ನು ಆಮದು ಮಾಡಿಕೊಂಡಿದೆ, ಆ ಮೂಲಕ ಈ ಸಿಬ್ಬಂದಿಗೆ ಸೋಂಕು ಹರಡಿರಬಹುದೆಂದು  ಮೈಸೂರು ಡಿಸಿ ಅಭಿರಾಮ್ ಶಂಕರ್ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com