ಮಿನಿ ರಥೋತ್ಸವ
ರಾಜ್ಯ
ಲಾಕ್ ಡೌನ್ ಎಫೆಕ್ಟ್: ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ಸಾಂಕೇತಿಕ ಮಿನಿ ರಥೋತ್ಸವ- ವಿಡಿಯೋ
ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಕಂಠೇಶ್ವರ ಸ್ವಾಮಿ ದೇವಾಲಯದ ಮಹಾರಥೋತ್ಸವ ಪ್ರತಿ ವರ್ಷ ಲಕ್ಷಾಂತರ ಜನಸಾಗರದ ನಡುವೆ ವೈಭವದಿಂದ ಜರುಗುತಿತ್ತು.
ನಂಜನಗೂಡು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಕಂಠೇಶ್ವರ ಸ್ವಾಮಿ ದೇವಾಲಯದ ಮಹಾರಥೋತ್ಸವ ಪ್ರತಿ ವರ್ಷ ಲಕ್ಷಾಂತರ ಜನಸಾಗರದ ನಡುವೆ ವೈಭವದಿಂದ ಜರುಗುತಿತ್ತು.
ಆದರೆ, ಈ ಬಾರಿ ಕೊರೋನಾ ವೈರಸ್ ಕಾರಣ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಸಾಂಕೇತಿಕವಾಗಿ ಮಿನಿ ರಥೋತ್ಸವ ನಡೆದಿದೆ.
ದೇವಾಲಯ ಆಡಳಿತ ಮಂಡಳಿ ಇಂದು ಮುಂಜಾನೆ ಸಾಂಕೇತಿಕವಾಗಿ ರಥೋತ್ಸವವನ್ನು ನಡೆಸಿದರು.ಅರ್ಚಕರು ಮಂತ್ರಘೋಷಗಳೊಂದಿಗೆ ದೇವಾಲಯದ ಸುತ್ತಲೂ ಮಿನಿ ರಥವನ್ನು ಎಳೆಯುವ ಮೂಲಕ ಸಾಂಪ್ರದಾಯಿಕ ಆಚರಣೆಯನ್ನು ಪೂರ್ಣಗೊಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ