ಕೊರೋನಾ ಹೊರತುಪಡಿಸಿ ಬೆಂಗಳೂರಿನಲ್ಲಿ ತುರ್ತು ವೈದ್ಯಕೀಯ ಸೇವೆಗೆ ಓಲಾ, ಉಬರ್ ಲಭ್ಯ

ಬೆಂಗಳೂರಿನಲ್ಲಿ ತುರ್ತು ವೈದ್ಯಕೀಯ ಸೇವೆಗಾಗಿ ಓಲಾ, ಉಬರ್ ಸಂಸ್ಥೆಗಳ 200 ವಾಹನಗಳಿಗೆ ಆರೋಗ್ಯ ಸಚಿವ ಬಿ ಶ್ರೀರಾಮುಲು ಚಾಲನೆ ನೀಡಿದರು. ಸಾಮಾನ್ಯ ರೋಗಿಗಳ ತುರ್ತು ಸೇವೆಗಾಗಿ ಓಲಾ, ಉಬರ್ ಕ್ಯಾಬ್ಗಳು ರಸ್ತೆಗೆ ಇಳಿಯಲಿದೆ ಎಂದು ತಿಳಿಸಿದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:  ಬೆಂಗಳೂರಿನಲ್ಲಿ ತುರ್ತು ವೈದ್ಯಕೀಯ ಸೇವೆಗಾಗಿ ಓಲಾ, ಉಬರ್ ಸಂಸ್ಥೆಗಳ 200 ವಾಹನಗಳಿಗೆ ಆರೋಗ್ಯ ಸಚಿವ ಬಿ ಶ್ರೀರಾಮುಲು ಚಾಲನೆ ನೀಡಿದರು. ಸಾಮಾನ್ಯ ರೋಗಿಗಳ ತುರ್ತು ಸೇವೆಗಾಗಿ ಓಲಾ, ಉಬರ್ ಕ್ಯಾಬ್ಗಳು ರಸ್ತೆಗೆ ಇಳಿಯಲಿದೆ ಎಂದು ತಿಳಿಸಿದರು.

ತುರ್ತು ಆರೋಗ್ಯ ಸೇವೆಗಾಗಿ ಮಾತ್ರ ಈ ಕ್ಯಾಬ್ಗಳನ್ನು ಒಳಕೆ ಮಾಡಲು ಅವಕಾಶವಿದೆ, ಇಂದಿನಿಂದ 100 ಓಲಾ, 100 ಉಬರ್ ಕ್ಯಾಬ್ ಗಳು ಸಂಚರಿಸಲಿವೆ.

108 ಆ್ಯಂಬುಲೆನ್ಸ್​​​​ಗಳು ಕೊರೋನಾ ವೈರಸ್ ರೋಗಿಗಳಿಗೆ ಬಳಕೆಯಾಗುತ್ತಿವೆ. ಸಾಮಾನ್ಯ ರೋಗಿಗಳಿಗೆ ತೊಂದರೆಯಾಗಬಾರದು. ಆ ಕಾರಣಕ್ಕೆ ಓಲಾ, ಉಬರ್ ಕ್ಯಾಬ್ ಬಳಸಿಕೊಳ್ಳುತ್ತಿದ್ದೇವೆ. ತುರ್ತು ಸೇವೆಗೆ ಸಂಪರ್ಕದ ಸಂಖ್ಯೆಗಳು ದೂರವಾಣಿ: 9154153917, 9154153918, 9154153919 ಅಥವಾ ಉಬರ್ ಮತ್ತು ಓಲಾ ಎಮರ್ಜೆನ್ಸಿ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿ ಲಾಗಿನ್ ಆಗ ಬೇಕಾಗುತ್ತದೆ.

ಕ್ಯಾಬ್ ಗಳಲ್ಲಿ ಪ್ರಯಾಣಿಸುವವರಿಗೆ ಆರೋಗ್ಯ ಇಲಾಖೆ ಕೆಲವು ಸೂಚನೆಗಳನ್ನು ನೀಡಿದೆ. ಯಾವುದೇ ಕಾರಣಕ್ಕೂ ಎಸಿ ಆನ್ ಮಾಡಬಾರದು, ಕಿಟಕಿಗಳನ್ನು ತೆಗೆಡಿಡಬೇಕು,  ಚಾಲಕ ಮತ್ತು ರೋಗಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಪ್ರತಿ ವಲಯಕ್ಕೂ ಒಬ್ಬ ಮ್ಯಾನೇಜರ್ ಕಾರ್ಯ ನಿರ್ವಹಿಸಬೇಕು, ಈ ಮ್ಯಾನೇಜರ್ ಫೋನ್ ನಂಬರ್ ಅನ್ನು ಆರೋಗ್ಯ ಇಲಾಖೆಗೆ ನೀಡಬೇಕು ಎಂದು ಸೂಚಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com