
ಬೆಂಗಳೂರು: ಕೊರೋನಾ ಮಹಾಮಾರಿ ವಿರುದ್ಧ ಹೋರಾಟಕ್ಕೆ ಗೋಕುಲ ಶಿಕ್ಷಣ ಸಂಸ್ಥೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಗೋಕುಲ ಎಜುಕೇಷನ್ ಫೌಂಡೇಶನ್ 3 ಕೋಟಿ ರು ದೇಣಿಗೆ ನೀಡಿದೆ.
ಗೋಕುಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂಆರ್ ಜಯರಾಮ್ ಮತ್ತು ಉಪಾಧ್ಯಕ್ಷ ಎಂಆರ್ ಸೀತಾರಾಮ್, ಸೋಮವಾರ ಸಿಎಂ ನಿವಾಸಕ್ಕೆ ಭೇಟಿ ನೀಡಿ 2 ಕೋಟಿ ರು ಚೆಕ್ ಹಾಗೂ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರು ನೀಡಿದ್ದಾರೆ.
ಕೊರೋನಾ ಸೋಂಕಿನ ಲಕ್ಷಣಗಳಿರುವ ಎಲ್ಲರಿಗೂ ಫೀವಪ್ ಕ್ಲಿನಿಕ್ ಸ್ಥಾಪಿಸಿ ಸ್ಕ್ರೀನಿಂಗೇ ಮಾಡುತ್ತಿದ್ದೇವೆ,200 ಸೋಂಕಿತರಿಗೆ ಚಿಕಿತ್ಸೆ ನೀಡಲು ನಮ್ಮ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ ಸ್ಥಾಪಿಸಿದ್ದೇವೆ, ಕ್ವಾರಂಟೈನ್ ಚಿಕಿತ್ಸೆಗೆ ಅಗತ್ಯವಿರುವ ಎಲ್ಲಾ ಸಿದ್ಥತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ,
Advertisement