
ಮೈಸೂರು: ಕೊರೋನದಿಂದ ಉಂಟಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು ಸಾಹಿತಿಗಳಾದ ಎಸ್ಎಲ್ ಭೈರಪ್ಪ ಸಿಎಂ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿ ನೆರವು ನೀಡಿದ್ದಾರೆ.
ಮೈಸೂರು ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರಿಗೆ ಎಸ್ಎಲ್ ಭೈರಪ್ಪ ಒಂದು ಲಕ್ಷ ರೂಪಾಯಿ ಚೆಕ್ ಹಸ್ತಾಂತರಿಸುವ ಮೂಲಕ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.
"ನಾನು ಶ್ರೀಮಂತ ಅಲ್ಲ. ಆದ್ರೆ ನಾನು ನನ್ನ ಕೈಲಾದಷ್ಟು ಹಣವನ್ನು ನೀಡಿದ್ದೇನೆ. ಇಡೀ ಭಾರತಿಯರು ಹಾಗೂ ನನ್ನ ಸಾಹಿತ್ಯ ಅಭಿಮಾನಿಗಳು ಪರಿಹಾರ ಹಣವನ್ನು ನೀಡಿ. ನನ್ನ ಅಭಿಮಾನಿಗಳು ಲಕ್ಷಾಧೀಶ್ವರು ಇದ್ದಾರೆ, ಕೋಟ್ಯಧೀಶರು ಇದ್ದಾರೆ. ಎಲ್ಲರೂ ಕೈ ಮೀರಿ ಸಹಾಯ ಮಾಡಿ. ನಾನು ಪ್ಲೇಗ್ ಕಾಯಿಲೆ ನೋಡಿದ್ದೇನೆ. ಇದು ಭೀಕರವಾಗಿದೆ. ಇದರಿಂದ ದೇಶದ ಆರ್ಥಿಕ ಪರಿಸ್ಥಿತಿಗೆ ಕಷ್ಟವಾಗಿದೆ. ಎಲ್ಲರೂ ಸಿಎಂ ಹಾಗೂ ಪಿಎಂ ಪರಿಹಾರ ನಿಧಿಗೆ ಸಹಾಯ ಮಾಡಿ" ಎಂದು ನಾಡಿನ ಹಿರಿಯ, ಖ್ಯಾತ ಸಾಹಿತಿ ಮನವಿ ಮಾಡಿದ್ದಾರೆ.
Advertisement