ಉಡುಪಿ: ಬೇಸಿಗೆಯ ತಾಪ ಉಡುಪಿ ಜಿಲ್ಲೆಯ ಶಿರೂರು ಅಣೆಕಟ್ಟು ಬತ್ತಿ ಹೋಗುವಂತೆ ಮಾಡಿದೆ. ಬಜೆ ಅಣೆಕಟ್ಟಿನ ಮೂಲಕ ನೀರನ್ನು ಉಡುಪಿ ನಗರದ 35 ವಾರ್ಡ್ ಗಳಿಗೆ ಕುಡಿಯುವ ನೀರಿಗೆ ಪೂರೈಸಲಾಗುತ್ತಿದ್ದು ಏಪ್ರಿಲ್ 9ರಿಂದ ಪಂಪ್ ಮೂಲಕ ಪಂಚನಬೆಟ್ಟು ಪ್ರದೇಶವಾಗಿ ಅಣೆಕಟ್ಟಿಗೆ ನೀರು ಹರಿಸಲಾಗುತ್ತಿದೆ.
ಉಡುಪಿ ನಗರ ಪಾಲಿಕೆಯ ಅಧಿಕಾರಿಗಳು ಬೇಸಿಗೆ ಮುಂದುವರಿದರೆ ಮಳೆ ಕೊರತೆಯಿಂದ ಕುಡಿಯುವ ನೀರಿಗೆ ತೊಂದರೆಯಾಗಬಹುದು ಎಂಬ ಆತಂಕದಲ್ಲಿದ್ದಾರೆ. ಕಾರ್ಕಳ ಜಲಾನಯದ ಪ್ರದೇಶದಲ್ಲಿ ಬೀಳುವ ಮಳೆಯನ್ನಾಧರಿಸಿ ಉಡುಪಿ ನಗರ ಪ್ರದೇಶಕ್ಕೆ ಕುಡಿಯುವ ನೀರು ಅವಲಂಬಿಸಿದೆ.
ಬಜೆ ಅಣೆಕಟ್ಟಿನಲ್ಲಿ ಮೊನ್ನೆ ಏಪ್ರಿಲ್ 9ಕ್ಕೆ 4.49 ಮೀಟರ್ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಮೇ 4ರಂದು ಬಜೆ ಅಣೆಕಟ್ಟಿನಿಂದ ನಾಲ್ಕು ದಿನಗಳ ಕಾಲ ಉಡುಪಿ ನಗರಕ್ಕೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ವರ್ಷ ಆ ರೀತಿ ನೀರಿನ ಕೊರತೆಯುಂಟಾಗಬಾರದೆಂದು ಪಂಪ್ ಮೂಲಕ ನೀರು ಹಾಯಿಸಲು ಉಡುಪಿ ನಗರ ಪಾಲಿಕೆ ಸಿದ್ದತೆ ಮಾಡಿಕೊಂಡಿದೆ.
Advertisement