ಬೆಂಗಳೂರು: ಆರ್ಥಿಕ ದುಸ್ಥಿತಿ ಮಧ್ಯೆ 3 ತಿಂಗಳ ನಿರ್ವಹಣಾ ಶುಲ್ಕ ಕೊಡಿ ಎಂದ ಅಪಾರ್ಟ್ ಮೆಂಟ್ ಗುತ್ತಿಗೆದಾರ!

ಅಪಾರ್ಟ್ ಮೆಂಟಿನ ಮೂರು ತಿಂಗಳ ನಿರ್ವಹಣಾ ಶುಲ್ಕವನ್ನು ಮೊದಲೇ ಪಾವತಿಸಿ ಎಂದು ಗುತ್ತಿಗೆದಾರರು ಕಳುಹಿಸಿದ ನೊಟೀಸ್ ಥಣಿಸಂದ್ರ ರಸ್ತೆಯ ಭಾರ್ತೀಯ ಸಿಟಿ ನಿಕೂ ಹೋಮ್ಸ್ ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಕೊರೋನಾ ಸೋಂಕಿನ ಭೀತಿಯ ನಡುವೆ ಮತ್ತೊಂದು ದೊಡ್ಡ ಆಘಾತವನ್ನುಂಟುಮಾಡಿದೆ.
ಬೆಂಗಳೂರು: ಆರ್ಥಿಕ ದುಸ್ಥಿತಿ ಮಧ್ಯೆ 3 ತಿಂಗಳ ನಿರ್ವಹಣಾ ಶುಲ್ಕ ಕೊಡಿ ಎಂದ ಅಪಾರ್ಟ್ ಮೆಂಟ್ ಗುತ್ತಿಗೆದಾರ!

ಬೆಂಗಳೂರು: ಅಪಾರ್ಟ್ ಮೆಂಟಿನ ಮೂರು ತಿಂಗಳ ನಿರ್ವಹಣಾ ಶುಲ್ಕವನ್ನು ಮೊದಲೇ ಪಾವತಿಸಿ ಎಂದು ಗುತ್ತಿಗೆದಾರರು ಕಳುಹಿಸಿದ ನೊಟೀಸ್ ಥಣಿಸಂದ್ರ ರಸ್ತೆಯ ಭಾರ್ತೀಯ ಸಿಟಿ ನಿಕೂ ಹೋಮ್ಸ್ ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಕೊರೋನಾ ಸೋಂಕಿನ ಭೀತಿಯ ನಡುವೆ ಮತ್ತೊಂದು ದೊಡ್ಡ ಆಘಾತವನ್ನುಂಟುಮಾಡಿದೆ.

ಕೆಲಸ-ಕಾರ್ಯಗಳು ಇಲ್ಲದ, ಆದಾಯವಿಲ್ಲದ ಈ ಸಮಯದಲ್ಲಿ ಮೂರು ತಿಂಗಳ ನಿರ್ವಹಣಾ ವೆಚ್ಚವನ್ನು ಒಂದೇ ಸಲಕ್ಕೆ ಪಾವತಿಸುವುದು ಹೇಗೆ ಎಂಬ ಪ್ರಶ್ನೆ ಇಲ್ಲಿನ ನಿವಾಸಿಗಳದ್ದಾಗಿದೆ.

ಈ ನಿಕೂ ಹೋಮ್ಸ್ ನ ಗುತ್ತಿಗೆದಾರರು ಇಂಟೆಲಿಜೆಂಟ್ ಕಮ್ಯುನಿಟಿ ಮ್ಯಾನೇಜ್ ಮೆಂಟ್ ಪ್ರೈ.ಲಿ(ಐಸಿಎಂ) ಭಾರ್ತಿಯ ಸಿಟಿ ಪರವಾಗಿ ನಿವಾಸಿಗಳಲ್ಲಿ ಅಪಾರ್ಟ್ ಮೆಂಟ್ ನ ಮೊದಲ ಮೂರು ತಿಂಗಳ ನಿರ್ವಹಣಾ ವೆಚ್ಚವನ್ನು 10 ದಿನಗಳೊಳಗೆ ಪಾವತಿಸಿ ಎಂದು ಕೇಳಿದ್ದಾರೆ. ಒಂದು ವೇಳೆ ಪಾವತಿಸದಿದ್ದರೆ ಶೇಕಡಾ 18ರಷ್ಟು ಬಡ್ಡಿ ಕೂಡ ಪಾವತಿಸಿ ಎಂದು ನೊಟೀಸ್ ನಲ್ಲಿ ಎಚ್ಚರಿಕೆ ನೀಡಿದ್ದಾರೆಂದು ನಿವಾಸಿಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಹೇಳಿದ್ದಾರೆ. ಅಪಾರ್ಟ್ ಮೆಂಟಿನ ಅಳತೆಗೆ ಅನುಗುಣವಾಗಿ ನಿರ್ವಹಣಾ ವೆಚ್ಚವನ್ನು ನಿವಾಸಿಗಳು 3 ಸಾವಿರದಿಂದ 10 ಸಾವಿರದವರೆಗೆ ಪಾವತಿಸಬೇಕು.

ಈ ಬಗ್ಗೆ ನಿವಾಸಿಯೊಬ್ಬರು ಟ್ವಿಟ್ಟರ್ ನಲ್ಲಿ ಹಾಕಿದಾಗ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಬೆಂಗಳೂರು ನಗರ ಪೊಲೀಸರಿಂದ ಪ್ರತಿಕ್ರಿಯೆ ಬಂದಿದೆಯಂತೆ. ಈ ಲಾಕ್ ಡೌನ್ ಸಮಯದಲ್ಲಿ ತಮ್ಮ ವೇತನಗಳಲ್ಲಿ ಕಡಿತ ಮಾಡುವ ಸಂದರ್ಭದಲ್ಲಿ ಈ ರೀತಿ ಮೂರು ತಿಂಗಳ ನಿರ್ವಹಣಾ ಶುಲ್ಕವನ್ನು ಒಟ್ಟಿಗೆ ಪಾವತಿಸಿ ಎಂದು ಕೇಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ನಿವಾಸಿಗಳ ಪ್ರಶ್ನೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com