ರಾಜ್ಯ
ಕೆಎಸ್ ಆರ್ ಟಿಸಿಯ 10 ವರ್ಷಗಳ ಹಳೆಯ ಬಸ್ಸುಗಳನ್ನು ಸ್ಯಾನಿಟೈಸರ್ ಬಸ್ಸುಗಳಾಗಿ ಬಳಕೆ
ಕೊರೋನಾ ವೈರಸ್ ತಡೆಗಟ್ಟಲು ಮಂಗಳವಾರದಿಂದ ರಾಜ್ಯ ರಸ್ತೆ ಸಾರಿಗೆ ನಿಗಮ ಸ್ಯಾನಿಟೈಸರ್ ಬಸ್ಸುಗಳನ್ನು ಬಳಸಲಿದೆ.
ಬೆಂಗಳೂರು: ಕೊರೋನಾ ವೈರಸ್ ತಡೆಗಟ್ಟಲು ಮಂಗಳವಾರದಿಂದ ರಾಜ್ಯ ರಸ್ತೆ ಸಾರಿಗೆ ನಿಗಮ ಸ್ಯಾನಿಟೈಸರ್ ಬಸ್ಸುಗಳನ್ನು ಬಳಸಲಿದೆ. ಇಂದಿನಿಂದ ಬೆಂಗಳೂರು ನಗರದಲ್ಲಿ ಹತ್ತು ವರ್ಷಗಳ ಹಳೆ. ಬಸ್ಸುಗಳು ಸ್ಯಾನಿಟೈಸರ್ ಬಸ್ಸುಗಳಾಗಿ ಬಳಸಿ ನಗರದಾದ್ಯಂತ ಸಂಚರಿಸಲಿವೆ.
ಇದರಿಂದ ಸಿಬ್ಬಂದಿಗಳು ತಮ್ಮ ದೇಹವಿಡೀ ಸ್ಯಾನಿಟೈಸ್ ಮಾಡಿಕೊಳ್ಳಬಹುದಾಗಿದೆ. ಬಿಬಿಎಂಪಿಯ ಸಿಬ್ಬಂದಿಗಳ ಓಡಾಟಕ್ಕಾಗಿ ಈ ಸ್ಯಾನಿಟೈಸರ್ ಬಸ್ಸುಗಳನ್ನು ಕೆಎಸ್ ಆರ್ ಟಿಸಿ ನೀಡಿದೆ.

